More

    ಮೊಹರಂ ಆಚರಣೆಗೆ ಅಡ್ಡಿಯಾದ ಮಳೆರಾಯ: ಕೆಸರು ಗದ್ದೆಯಂತಾದ ರಸ್ತೆಗಳು

    ಮುದಗಲ್ಪ; ಪಟ್ಟಣದ ಮೊಹರಂ ಅದ್ದೂರಿ ಆಚರಣೆಗೆ ರಾಜ್ಯವ್ಯಾಪಿ ಪ್ರಸಿದ್ದಿ ಪಡೆದಿದ್ದು, ಆದರೆ ಈ ವಷ ಮಳೆರಾಯನ ಅಡ್ಡಿ ಕಾಡುತ್ತಿದೆ.


    ಕಳೆದ ಆರು ದಿನಗಳಿಂದ ಆರಂಭವಾದ ಮೊಹರಂ ಜು.29 ರಂದು ಕೊನೆಗೊಳ್ಳಲಿದೆ. ನಿರಂತರ ಮಳೆಯಿಂದ ದೂರದ ಜಿಲ್ಲೆಗಳಿಂದ ಆಗಮಿಸುವ ಭಕ್ತರ ಸಂಖ್ಯೆ ಕಡಿಮೆಯಾಗುತ್ತಿದೆ. ಭಕ್ತರು ಹಜರತ್ ಹುಸೇನ್ ಆಲಂ, ಹಜರತ್ ಕಾಶಿಂ ಪೀರ್‌ಗಳಿಗೆ ಕೆಂಪು ಸಕ್ಕರೆ, ಬೆಳ್ಳಿ ಕುದುರೆ, ಬೆಳ್ಳಿ ತೊಟ್ಟಿಲು, ದಟ್ಟಿ ವಿವಿಧ ರೀತಿಯ ಹರಕೆ ತೀರಿಸುತ್ತಿದ್ದರು. ವೆಂಕಟರಾಯನ ಪೇಟೆಯಲ್ಲಿರುವ ಹಜರತ್ ಖಾಸಿಂ ಪೀರ್ ಆಲಂ (ದೇವರ) ಸವಾರಿ ಜರುಗಿತು.


    ಜಿಟಿಜಿಟಿ ಮಳೆಯಿಂದಾಗಿ ರಸ್ತೆಗಳು ಕೆಸರು ಗದ್ದೆಯಂತಾಗಿವೆ. ಪಾದಚಾರಿಗಳು ರಸ್ತೆಯಲ್ಲಿ ನಡೆದಾಡಲು ಹರಸಾಹಸ ಪಡುವಂತಾಗಿದೆ. ಮಿಠಾಯಿ, ಬಳೆ ಅಂಗಡಿಗಳು ವ್ಯಾಪಾರ ಇಲ್ಲದೆ ಬಿಕೊ ಎನ್ನುತ್ತಿವೆ. ಬಹಿರಂಗ ಹರಾಜದಲ್ಲಿ ಪುರಸಭೆಗೆ ಹಣ ಪಾವತಿಸಿ ಅಂಗಡಿ ಮತ್ತು ವಿವಿಧ ಆಟಿಕೆ, ಮನರಂಜನೆ ಸಾಮಗ್ರಿ ಅಳವಡಿಸಿದ ವ್ಯಾಪಾರಿಗಳು ಮಳೆ ಅವಾಂತರದಿಂದ ನಷ್ಟದ ಭೀತಿ ಎದುರಿಸುವಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts