More

    ಹೊಲದ ಬದುವಿನಲ್ಲಿ ಶಿಶು ಪತ್ತೆ

    ಮುಧೋಳ: ತಾಲೂಕಿನ ಇಂಗಳಗಿ ಗ್ರಾಮದ ರೈತರೊಬ್ಬರ ಹೊಲದ ಬದುವಿನಲ್ಲಿ ಭಾನುವಾರ ಹೆಣ್ಣು ಶಿಶು ಪತ್ತೆಯಾಗಿದೆ. ಈ ಮಗುವನ್ನು ನೋಡಿದ ಇಂಗಳಗಿ ಗ್ರಾಮದ ಈರಣ್ಣ ಜಮಖಂಡಿ ಅವರು ತಕ್ಷಣ ಗ್ರಾಮಸ್ಥರ ನೆರವಿನೊಂದಿಗೆ ಅದನ್ನು ಮುಧೋಳ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಶಿಶು ಜನನವಾಗಿ ಅಂದಾಜು 2-3 ದಿನವಾಗಿರಬಹುದು. ಈ ಕುರಿತು ಮಹಿಳಾ ಸಬಲೀಕರಣ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಶೋಭಾ ಮಂಟೂರ ವಿಜಯವಾಣಿ ಜತೆ ಮಾತನಾಡಿ, ಮಗುವನ್ನು ದತ್ತು ಕೇಂದ್ರಕ್ಕೆ ಒಪ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts