More

    ಮಾಸ್ಟರ್ ಪ್ಲಾನ್ ಜಾರಿಗೆ ಚಿಂತನೆ

    ಮುಧೋಳ: ನಗರದ ಸರ್ವಾಂಗೀಣ ಅಭಿವೃದ್ಧಿಯ ಮುಂದಿನ 20 ವರ್ಷದ ಮುಂದಾಲೋಚನೆ ಇಟ್ಟುಕೊಂಡು ಮಹಾಯೋಜನೆ (ಮಾಸ್ಟರ್ ಪ್ಲಾನ್) ಅನುಷ್ಠಾನಕ್ಕಾಗಿ ತಾತ್ಕಾಲಿಕ ಅನುಮೋದನೆ ಸಿದ್ಧವಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನೀಲಿನಕ್ಷೆಯನ್ನು ವೀಕ್ಷಿಸಿ, ಸಾಧಕ ಬಾಧಕಗಳನ್ನು ಕುರಿತು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ವಸದ ಹಾಗೂ ಅಧಿಕಾರಿಗಳು ಮತ್ತು ಊರ ಪ್ರಮುಖರ ಜತೆ ಚರ್ಚಿಸಿ ಮಾತನಾಡಿ, ಮಾಸ್ಟರ್ ಪ್ಲಾನ್ ಜಾರಿ ಮಾಡುವ ಮೂಲಕ ಮುಧೋಳವನ್ನು ಮಾದರಿ ನಗರ ಮಾಡಬೇಕೆಂಬ ತಮ್ಮ ಮನದಾಳದ ಇಂಗಿತ ವ್ಯಕ್ತಪಡಿಸಿದರು.

    ಈ ಕುರಿತು ಇನ್ನೂ 2-3 ಸುತ್ತಿನ ಮಾತುಕತೆ ಹಾಗೂ ನಗರದ ಎಲ್ಲ ವರ್ಗದ ಹಿರಿಯರ ಜತೆಗೂಡಿ ಚರ್ಚಿಸಿ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಕಾರಜೋಳ ಹೇಳಿದರು.

    ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಕಾಶ ವಸದ ಮಾತನಾಡಿ, ಡಿಸಿಎಂ ಕಾರಜೋಳರ ಸಲಹೆಯಂತೆ ನಗರವು 2041ನೇ ಇಸ್ವಿಯಲ್ಲಿ ಅಂದಾಜು 1,20,000 ಜನಸಂಖ್ಯೆ ಹೊಂದಲಿದ್ದು, ಅದಕ್ಕೆ ಅನುಗುಣವಾಗಿ ನಗರಾಭಿವೃದ್ಧಿ ಇಲಾಖೆಯ ಮಾರ್ಗ ಸೂಚಿಯಂತೆ ಮಹಾನಕ್ಷೆ ರಚಿತವಾಗಿದೆ. ಮುಧೋಳ ನಗರ ಜನರ ಬಹು ದಿನದ ಕನಸಿನಂತೆ ಇದು ಸಿದ್ಧವಾಗಿದ್ದು ಅದ್ಭುತ ತಾಂತ್ರಿಕ ಮಹಾಯೋಜನೆಯಾಗಲಿದೆ ಎಂದು ಹೇಳಿದರು.

    ನಗರಸಭೆ ಅಧ್ಯಕ್ಷ ಸಿದ್ಧನಾಥ ಮಾನೆ ಹಾಗೂ ಸದಸ್ಯರು, ಆಶ್ರಯ ಸಮಿತಿ ಅಧ್ಯಕ್ಷ ಕಲ್ಲಪ್ಪಣ್ಣ ಸಬರದ ಹಾಗೂ ಪ್ರಾಧಿಕಾರದ ಸದಸ್ಯರಾದ ಪುಂಡಲೀಕ ಭೋವಿ, ಬಂಡು ಘಾಟಗೆ, ಕೆ.ಆರ್. ಮಾಚಪ್ಪನವರ, ಡಾ.ರವಿ ನಂದಗಾಂವ, ಹನುಮಂತ ತುಳಸಿಗೇರಿ, ಕುಮಾರ ಹುಲಕುಂದ, ನಾಗಪ್ಪ ಅಂಬಿ ಹಾಗೂ ನಗರಸಭೆ ಸದಸ್ಯರು, ಗಣ್ಯರು, ಅಧಿಕಾರಿಗಳು ಇದ್ದರು.



    ಮಾಸ್ಟರ್ ಪ್ಲಾನ್ ಜಾರಿಗೆ ಚಿಂತನೆ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts