More

    ಬಂಜಾರ ಜನಾಂಗಕ್ಕೆ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಅಗತ್ಯ

    ಮುದ್ದೇಬಿಹಾಳ, ರಾಜ್ಯದಲ್ಲಿ ಮುಸ್ಲಿಮರು, ಲಿಂಗಾಯತರನ್ನು ಹೊರತುಪಡಿಸಿದರೆ ಬಂಜಾರ ಜನಾಂಗದವರು ಮೂರನೇ ಸ್ಥಾನದಲ್ಲಿದ್ದೇವೆ. ಆದರೆ, ನಮ್ಮ ಸಮುದಾಯಕ್ಕೆ ಕೇವಲ ಒಬ್ಬರನ್ನು ಮಂತ್ರಿ ಮಾಡಿದ್ದು, ಸಮಾಜಕ್ಕೆ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಅಗತ್ಯವಾಗಿದೆ ಎಂದು ಕಟಕೋಳದ ಎಸ್‌ಜಿಟಿ ಪಿಯು ಕಾಲೇಜಿನ ಉಪನ್ಯಾಸಕ ಡಾ. ಪುಂಡಲೀಕ ರಾಠೋಡ ಹೇಳಿದರು.

    ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕಾಡಳಿತದಿಂದ ಶನಿವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲರ 281ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಬೇರೆ ಜಾತಿಯವರಿಗೆ ಸಿಕ್ಕಷ್ಟು ರಾಜಕೀಯ ಪ್ರಾತಿನಿಧ್ಯ ನಮ್ಮ ಸಮಾಜಕ್ಕೆ ಸಿಕ್ಕಿಲ್ಲ. ಸೇವಾಲಾಲ ಅವರು ಅಮರರಾದ ಸ್ಥಳಕ್ಕೆ ತೆರಳಲು ಸರ್ಕಾರ ಹಜ್ ಮಾದರಿ ಅನುದಾನ ನೀಡಬೇಕೆಂದು ಆಗ್ರಹಿಸಿದರು.

    ಸಮಾಜ ಸೇವಕ, ಉದ್ಯಮಿ ಶಾಂತಗೌಡ ಪಾಟೀಲ ನಡಹಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣಾಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡಿರುವವರಲ್ಲಿ ಮೊದಲ ಸ್ಥಾನದಲ್ಲಿ ಬಂಜಾರ ಜನಾಂಗದವರು ನಿಲ್ಲುತ್ತಾರೆ ಎಂದರು.

    ಪುರಸಭೆ ಸದಸ್ಯೆ ಸೋನಾಬಾಯಿ ನಾಯಕ, ಯುವ ಮುಖಂಡ ಸಂತೋಷ ಚವಾಣ್ ಹುಲ್ಲೂರ, ಗದಗ ಡಿಡಿಪಿಐ ಎಸ್.ಡಿ.ಗಾಂಜಿ, ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಸಮಾಜದ ಅಧ್ಯಕ್ಷ ನಾನಪ್ಪ ನಾಯಕ, ಪುರಸಭೆ ಮುಖ್ಯಾಧಿಕಾರಿ ಜಿ.ಎಚ್.ಕಾಸೆ, ಪ್ರಭಾರಿ ದೈಹಿಕ ಶಿಕ್ಷಣಾಧಿಕಾರಿ ಎಚ್.ಎಲ್. ಕರಡ್ಡಿ, ಭೂ ನ್ಯಾಯ ಮಂಡಳಿ ಸದಸ್ಯ ಎಸ್.ಬಿ. ಚಲವಾದಿ, ಎಂ.ಆರ್.ನಾಯಕ, ಡಾ.ಎಸ್.ಸಿ. ಚೌಧರಿ, ಎನ್.ಆರ್. ಉಂಡಿಗೇರಿ, ಬಿ.ಎಸ್.ಜಾಧವ ಮತ್ತಿತರಿದ್ದರು.

    ಸಂಗಮೇಶ ಶಿವಣಗಿ ನಾಡಗೀತೆ ಹಾಡಿದರು. ಎಸ್.ಆರ್. ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎಚ್.ಚವಾಣ್ ಸ್ವಾಗತಿಸಿದರು. ಟಿ.ಡಿ. ಲಮಾಣಿ ನಿರೂಪಿಸಿದರು. ಎಸ್.ಪಿ. ರಾಠೋಡ ವಂದಿಸಿದರು.

    ಅದ್ದೂರಿ ಮೆರವಣಿಗೆ:
    ಪಟ್ಟಣದ ಸೇವಾಲಾಲ ವೃತ್ತದಿಂದ ಸಂತ ಸೇವಾಲಾಲರ ಭಾವಚಿತ್ರ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಯಿತು. ಡಿಜೆ ಹಾಡಿಗೆ ಯುವಕರು ಕುಣಿದು ಕುಪ್ಪಳಿಸಿದರು. ಬಂಜಾರ ಜನರು ತಾವು ಧರಿಸುವ ವಿಶೇಷ ಧಿರಿಸನ್ನು ಉದ್ಯಮಿ ಶಾಂತಗೌಡ ಪಾಟೀಲ ನಡಹಳ್ಳಿ ಅವರಿಗೆ ತೊಡಿಸಿದ್ದರು.

    ವಿದ್ಯಾರ್ಥಿಗಳಿಗೆ ಸನ್ಮಾನ :
    2018-19ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಮಂಜುನಾಥ ನಾಯಕ, ಸಂಜು ರಾಠೋಡ, ಸುಮತಿ ರಾಠೋಡ, ವಿನೋದ ಚವಾಣ್, ಅಭಿಷೇಕ ನಾಯಕ, ರಕ್ಷಿತಾ ಲಮಾಣಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ರಶ್ಮಿ ರಾಠೋಡ, ರಾಧಿಕಾ ನಾಯಕ, ಶಿಲ್ಪಾ ರಾಠೋಡ, ಕಸ್ತೂರೆಪ್ಪ ನಾಯಕ, ರಾಜು ಚವಾಣ್ ಅವರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts