More

    ನಾಡದ್ರೋಹಿ ಎಂಇಎಸ್ ಸಂಘಟನೆ ರಾಜ್ಯದಿಂದ ಒದ್ದೋಡಿಸಿ

    ಮುದ್ದೇಬಿಹಾಳ: ರಾಜ್ಯದ ಬೆಳಗಾವಿಯ ಗಡಿವಿವಾದ ಜೀವಂತವಾಗಿಡಲು ಪದೇ ಪದೇ ಕನ್ನಡಿಗರ ಸಹನೆ ಪರೀಕ್ಷಿಸುತ್ತಿರುವ, ದೇಶಭಕ್ತ, ಸ್ವಾತಂತ್ರೃ ಹೋರಾಟಗಾರ ಸಂಗೊಳ್ಳಿ ರಾಯಣ್ಣನಿಗೆ ಅಪಮಾನ ಮಾಡಿರುವ ಎಂಇಎಸ್ ಸಂಘಟನೆಯವರನ್ನು ರಾಜ್ಯದಿಂದ ಒದ್ದೋಡಿಸಬೇಕು ಎಂದು ಸಮಾಜ ಸೇವಕ ಎಂ.ಎನ್. ಮದರಿ ಆಗ್ರಹಿಸಿದರು.

    ಬೆಳಗಾವಿಯ ಘಟನೆ ಖಂಡಿಸಿ ಪಟ್ಟಣದಲ್ಲಿ ಸ್ವಾಭಿಮಾನಿ ಕನ್ನಡಿಗರ ಹೋರಾಟ ವೇದಿಕೆ ಹಾಗೂ ತಾಲೂಕು ಕುರುಬರ ಸಂಘ, ಸಂಗೊಳ್ಳಿ ರಾಯಣ್ಣ ಯುವ ವೇದಿಕೆ, ವಿವಿಧ ದಲಿತಪರ, ಪ್ರಗತಿಪರ, ಅಲ್ಪಸಂಖ್ಯಾತ ಹಾಗೂ ರಾಣಿ ಚನ್ನಮ್ಮ ಯುವ ಸೇನೆ ಸೇರಿ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

    ವಕೀಲರಾದ ಎಂ.ಎಚ್. ಹಾಲಣ್ಣವರ, ಬಂಜಾರ ಸಮಾಜದ ಮುಖಂಡ ರವಿ ನಾಯಕ, ಡಿಎಸ್‌ಎಸ್ ಮುಖಂಡ ಡಿ.ಬಿ. ಮುದೂರ, ಎಪಿಎಂಸಿ ಮಾಜಿ ಉಪಾಧ್ಯಕ್ಷ ವೈ.ಎಚ್. ವಿಜಯಕರ್, ಪಂಚಮಸಾಲಿ ಸಮಾಜದ ಮುಖಂಡ ಕಾಮರಾಜ ಬಿರಾದಾರ ಮಾತನಾಡಿ, ರಾಯಣ್ಣ ಮೂರ್ತಿ ವಿರೂಪಗೊಳಿಸುವವರಿಗೂ ಅದೇ ಶಿಕ್ಷೆ ನೀಡಬೇಕು. ಕಠಿಣ ಕಾನೂನು ತಂದು ದೇಶಭಕ್ತರ ಮೂರ್ತಿ,ಪುತ್ಥಳಿಗೆ ರಕ್ಷಣೆ ಕೊಡುವ ಕಾರ್ಯ ಸರ್ಕಾರ ಮಾಡಬೇಕು ಎಂದರು.

    ಹರೀಶ ನಾಟೀಕಾರ ಮಾತನಾಡಿ, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬೆಳಗಾವಿಯ ಕೆಲವು ಶಾಸಕರು ಈ ಘಟನೆ ಕುರಿತು ಬಾಯಿ ಬಿಚ್ಚುತ್ತಿಲ್ಲ. ಇಂತಹ ತುಚ್ಛ ರಾಜಕಾರಣಿಗಳಿಂದಾಗಿ ರಾಷ್ಟ್ರ ನಾಯಕರಿಗೆ ಅವಮಾನ ಆಗುವುದು ನಿಂತಿಲ್ಲ ಎಂದು ಹರಿಹಾಯ್ದರು.

    ಕುರುಬ ಸಮಾಜದ ಮುಖಂಡ ಮಲಕೇಂದ್ರಗೌಡ ಪಾಟೀಲ, ಕೆ.ಆರ್. ಬಿರಾದಾರ, ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಸದಸ್ಯೆ ಸಹನಾ ಬಡಿಗೇರ, ಪುರಸಭೆ ಮಾಜಿ ಸದಸ್ಯ ಎಚ್.ಬಿ. ಸಾಲಿಮನಿ, ಹಾರ್ವರ್ಡ್ ಪಿಯು ಸೈನ್ಸ್ ಕಾಲೇಜಿನ ಅಧ್ಯಕ್ಷ ಎಸ್.ಎಂ.ನೆರಬೆಂಚಿ ಮಾತನಾಡಿದರು.

    ಹೋರಾಟದಲ್ಲಿ ಮುಖಂಡರಾದ ಪಂಚಮಸಾಲಿ ಸಮಾಜದ ಅಧ್ಯಕ್ಷ ಅಮರೇಶ ಗೂಳಿ, ನಿಂಗಪ್ಪಗೌಡ ಬಪ್ಪರಗಿ, ಎಂ.ಎಂ. ಪೂಜಾರಿ, ರಾಮಣ್ಣ ರಾಜನಾಳ, ಬಸವರಾಜ ಗುಳಬಾಳ, ಪುರಸಭೆ ಸದಸ್ಯ ಮಹೆಬೂಬ ಗೊಳಸಂಗಿ, ಬಸವರಾಜ ಮುರಾಳ, ಪ್ರೀತಿ ದೇಗಿನಾಳ, ವಿದ್ಯಾಸ್ಪೂರ್ತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಬಸಮ್ಮ ಸಿದರೆಡ್ಡಿ, ಶರಣು ಬೂದಿಹಾಳಮಠ ೌಂಡೇಷನ್ ಸಂಚಾಲಕ ಮಹಾಂತೇಶ ಬೂದಿಹಾಳಮಠ, ಅಕ್ಕಮ್ಮ ಹಾಲ್ಯಾಳ, ಮಾಜಿ ಸದಸ್ಯ ಸಂತೋಷ ನಾಯ್ಕೋಡಿ, ಅಂಬೇಡ್ಕರ್ ಸೇನೆ ಅಧ್ಯಕ್ಷ ಪ್ರಕಾಶ ಚಲವಾದಿ, ಮಲ್ಲು ತಳವಾರ, ಬಿ.ಎಸ್. ಶಿರೋಳ, ಶ್ರೀಶೈಲ ದೊಡಮನಿ, ಮುತ್ತಣ್ಣ ಹುಗ್ಗಿ, ಪಿ.ಬಿ. ಮಾತಿನ, ಕೆ.ಎಂ. ರಿಸಾಲ್ದಾರ್, ರಮೇಶ ಬೆಲವಂತ್ರಕಂಠಿ, ರವೀಂದ್ರ ಬಿರಾದಾರ ಇತರರಿದ್ದರು.

    ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ರ‌್ಯಾಲಿ ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಸಾಗಿ ತಹಸೀಲ್ದಾರ್ ಕಚೇರಿಗೆ ತೆರಳಿ ಅಲ್ಲಿ ತಹಸೀಲ್ದಾರ್ ಬಿ.ಎಸ್. ಕಡಕಭಾವಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಡಿವೈಎಸ್ಪಿ ಅರುಣಕುಮಾರ ಕೋಳೂರ, ಸಿಪಿಐ ಆನಂದ ವಾಘಮೋಡೆ, ಪಿಎಸ್‌ಐ ರೇಣುಕಾ ಜಕನೂರ ಬಿಗಿ ಬಂದೋಬಸ್ತ್ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts