More

    ಕೃಷಿ ಅಧಿಕಾರಿ ವಿರುದ್ಧ ಕ್ರಮಕ್ಕೆ ರೈತರ ಒತ್ತಾಯ

    ಮುದ್ದೇಬಿಹಾಳ: ರೈತರಿಗೆ ಸಮರ್ಪಕ ಕೃಷಿ ಸಲಕರಣೆಗಳು, ಬೀಜ ಗೊಬ್ಬರಗಳು ಹಾಗೂ ಔಷಧ ಸಿಂಪಡಣೆ ಸಲಕರಣೆಗಳನ್ನು ತಲುಪಿಸದೆ ನಿರ್ಲಕ್ಷೃ ವಹಿಸಿರುವ ಸಹಾಯಕ ಕೃಷಿ ಅಧಿಕಾರಿ ಪಿ.ಕೆ. ಪಾದಗಟ್ಟಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಹಡಲಗೇರಿ ಭಾಗದ ರೈತರು ಸೋಮವಾರ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

    ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಡಲಗೇರಿ, ಮುದ್ನಾಳ, ಗೆದ್ದಲಮರಿ ಹಾಗೂ ಹರಿಂದ್ರಾಳ ಗ್ರಾಮಗಳಿಗೆ ಕೃಷಿ ಇಲಾಖೆಯಿಂದ ಒದಗಿಸಬೇಕಾದ ಬಿತ್ತನೆ ಬೀಜ, ಗೊಬ್ಬರ, ಔಷಧ ಸಿಂಪಡಣೆ ಸಲಕರಣೆಗಳು ಹಾಗೂ ಕೃಷಿ ಯಂತ್ರೋಪಕರಣಗಳನ್ನು ಹಾಗೂ ಎಸ್ಸಿ, ಎಸ್ಟಿ ವರ್ಗದವರಿಗೆ ಸಬ್ಸಿಡಿ ದರದಲ್ಲಿ ಸಿಗುವ ಎಲ್ಲ ಸೌಲಭ್ಯಗಳು 2019-21ರ ಅವಧಿಯಲ್ಲಿ ಯಾವ ರೈತರಿಗೂ ಕೊಟ್ಟಿಲ್ಲ ಎಂದು ಆರೋಪಿಸಿದರು.

    ಈ ಭಾಗದಲ್ಲಿ ಪ್ರಭಾರ ಸಹಾಯಕ ಕೃಷಿ ಅಧಿಕಾರಿಯಾಗಿರುವ ಪಿ.ಕೆ. ಪಾದಗಟ್ಟಿ ರೈತರಿಗೆ ಸಿಗುವುದಿಲ್ಲ. ಪಂಚಾಯಿತಿಯ ವ್ಯಾಪ್ತಿಯಲ್ಲಿರುವ ಯಾವುದೇ ಹಳ್ಳಿಗೂ ಭೇಟಿ ಕೊಟ್ಟಿಲ್ಲ. ಕೂಡಲೇ ಅವರನ್ನು ವರ್ಗಾವಣೆ ಮಾಡಿ ಅವರ ಸ್ಥಳಕ್ಕೆ ಬೇರೊಬ್ಬರನ್ನು ನಿಯೋಜಿಸಬೇಕು. ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜ, ಗೊಬ್ಬರ ಪೂರೈಸಬೇಕೆಂದು ಒತ್ತಾಯಿಸಿದರು. ಇಲಾಖೆಯ ಸಹಾಯಕ ನಿರ್ದೇಶಕ ರೇವಣೆಪ್ಪ ಮನಗೂಳಿ ಮನವಿ ಪತ್ರ ಸ್ವೀಕರಿಸಿದರು.

    ಗ್ರಾಪಂ ಅಧ್ಯಕ್ಷೆ ದ್ಯಾಮವ್ವ ಹರಿಂದ್ರಾಳ, ರೈತರಾದ ಪರಸಪ್ಪ ತಳವಾರ, ಮಾಳಪ್ಪ ಕನ್ನೂರ, ಎಚ್.ಡಿ. ವಾಲೀಕಾರ, ಎಸ್.ಎಂ. ಬಗಲಿ, ಎಸ್.ಬಿ. ವಾಲೀಕಾರ, ಬಿ.ಎ. ಇಸ್ಲಾಂಪೂರ, ಆರ್.ಕೆ. ಮುಲ್ಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts