More

    ತಾರತಮ್ಯ ಮಾಡದೆ ಯೋಜನೆಗಳನ್ನು ತಲುಪಿಸಿದ ತೃಪ್ತಿ ಇದೆ

    ಮುದ್ದೇಬಿಹಾಳ: ದಲಿತರಿಗೆ ಸರ್ಕಾರದ ಯೋಜನೆಗಳನ್ನು ತಾರತಮ್ಯ ಮಾಡದೆ ನೇರವಾಗಿ ತಲುಪಿಸಿದ ತೃಪ್ತಿ ಇದ್ದು, ಇಂದು ಕ್ಷೇತ್ರದ ಪ್ರತಿಯೊಂದು ಗ್ರಾಮವೂ ಮೂಲ ಸೌಕರ್ಯಗಳನ್ನು ಹೊಂದಿರಬೇಕು. ನಿರುದ್ಯೋಗಿಗಳಿಗೆ ಉದ್ಯೋಗ ದೊರಕಬೇಕು ಎನ್ನುವ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ ಎಂದು ಆಹಾರ ಪೂರೈಕೆ ನಿಗಮದ ಅಧ್ಯಕ್ಷ, ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.
    ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ಮಂಗಳವಾರ ಎರಡು ಅಭಿವೃದ್ಧಿ ಕಾಮಗಾರಿಗಳಿಗೆ ಪ್ರತ್ಯೇಕ ಭೂಮಿಪೂಜೆ ನೆರವೇರಿಸಿ ನಂತರ ಸಂಗಮೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಚುನಾವಣೆಯಲ್ಲಿ ಜನತೆಗೆ ಕೊಟ್ಟ ಭರವಸೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಅದರ ಪರಿಣಾಮವಾಗಿ ಮುದ್ದೇಬಿಹಾಳ ವಿಧಾನಸಭೆ ಮತಕ್ಷೇತ್ರ ಸಮಗ್ರ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. ಬಿದರಕುಂದಿ ಗ್ರಾಮದ ಕೆಲ ಆಸ್ತಿಗಳು ಸದ್ಯ ಮುದ್ದೇಬಿಹಾಳ ಪುರಸಭೆ ವ್ಯಾಪ್ತಿಗೆ ಸೇರ್ಪಡೆ ಆಗಿದೆ. ಬಿದರಕುಂದಿ ಸಮೀಪ ಸರ್ಕಾರಿ ಜಾಗದಲ್ಲಿ ಹುಬ್ಬಳ್ಳಿ ವಿಭಾಗದಲ್ಲೆ ಅತ್ಯಂತ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಗೊಳ್ಳಲಿದೆ. ಆದರ್ಶ ಆರ್‌ಎಂಎಸ್‌ಎ ಶಾಲೆಗೆ ಹೋಗಲು ಇದ್ದ ಕಂಟಕ ನಿವಾರಣೆ ಆಗಿದ್ದು, ಶೀಘ್ರ ಶಾಲೆ ಪ್ರಾರಂಭಗೊಳ್ಳಲಿದೆ. ಶಿರೋಳ-ಹಡಲಗೇರಿ-ಬಿದರಕುಂದಿ ಭಾಗದ ಸುತ್ತಲಿನ ಗುಡ್ಡದ ಪ್ರದೇಶದಲ್ಲಿ ರಾಕ್ ಗಾರ್ಡನ್ ನಿರ್ಮಿಸುವ ಯೋಜನೆ ಇದೆ ಎಂದರು
    ಎಪಿಎಂಸಿ ನಿರ್ದೇಶಕ ವೈ.ಎಚ್. ವಿಜಯಕರ್ ಮಾತನಾಡಿದರು.

    ತಾಪಂ ಮಾಜಿ ಸದಸ್ಯ ಚನಬಸಪ್ಪಗೌಡ ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಪ್ರಭಾರಿ ಪಿಡಿಒ ಶೋಭಾ ಮುದಗಲ್ಲ, ಕಾರ್ಯದರ್ಶಿ ುಮನೂರಿ ಲಮಾಣಿ, ಪ್ರಮುಖರಾದ ಮಲ್ಲಣ್ಣ ಹತ್ತಿ, ಸೋಮನಗೌಡ ಪಾಟೀಲ, ತಿಪ್ಪಣ್ಣ ಸರೂರ, ನಿಂಗಪ್ಪ ಮುರಾಳ, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲು ದೊಡಮನಿ, ಬಸವರಾಜ ಕೋಳೂರ, ಹಣಮಗೌಡ ಬಿರಾದಾರ, ಚನಮಲ್ಲಪ್ಪ ಕಡೂರ, ಮಲ್ಲನಗೌಡ ಬಿರಾದಾರ, ಶಿವರುದ್ರಯ್ಯ ಹಿರೇಮಠ, ಚನ್ನಪ್ಪ ವಿಜಯಕರ ಮಾದಿನಾಳ, ಬಹಾದ್ದೂರ ರಾಠೋಡ, ಲಕ್ಷ್ಮಣ ವಡ್ಡರ ಮತ್ತಿತರರಿದ್ದರು.

    ಶಾಸಕರು ದಲಿತರ ಬಡಾವಣೆಯಲ್ಲಿರುವ ಅಂಬಾಭವಾನಿ ದೇವಸ್ಥಾನ ಆವರಣದಲ್ಲಿ 2020-21ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆ ಅನುದಾನದಡಿ 12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ಕಟ್ಟಡ ಕಾಮಗಾರಿಗೆ ಮತ್ತು ಊರ ಚಾವಡಿಯಲ್ಲಿ 2020-21ನೇ ಸಾಲಿನ ಮುಖ್ಯಮಂತ್ರಿಗಳ ಮಾದರಿ ಗ್ರಾಮ ವಿಕಾಸ ಯೋಜನೆಯಡಿ 2 ಕೋಟಿ ರೂ. ವೆಚ್ಚದ ಸಿಸಿ ರಸ್ತೆ, ಸಮುದಾಯ ಭವನ ಮತ್ತು ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಗಳಿಗೆ ಪ್ರತ್ಯೇಕವಾಗಿ ಭೂಮಿಪೂಜೆ ನೆರವೇರಿಸಿದರು. ಊರಿನ ಹಿರಿಯರು, ಗಣ್ಯರು, ಮುಖಂಡರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts