More

    ಗುಡ್‌ನೈಟ್ ದ್ರಾವಣ ಕುಡಿದ ಮಗು ಅಸ್ವಸ್ಥ

    ಮುದ್ದೇಬಿಹಾಳ: ಸೊಳ್ಳೆಗಳನ್ನು ಓಡಿಸಲೆಂದು ಹಚ್ಚುವ ಗುಡ್‌ನೈಟ್ ಲಿಕ್ವಿಡ್ ಕುಡಿದು ಎರಡು ವರ್ಷದ ಮಗುವೊಂದು ಭಾನುವಾರ ಅಸ್ವಸ್ಥಗೊಂಡಿದೆ.

    ಪಟ್ಟಣದ ಆಜಾದ್‌ನಗರ ನಿವಾಸಿ ಮಹ್ಮದ್ ಆಸ್ೀ ಕವಡಿಮಟ್ಟಿ ಅವರ ಪುತ್ರ ಅರಹಾನ್ ಮನೆಯಲ್ಲಿದ್ದ ಗುಡ್‌ನೈಟ್ ಲಿಕ್ವಿಡ್ ಕುಡಿದು ಅಸ್ವಸ್ಥಗೊಂಡ ಬಾಲಕ. ಮನೆಯ ಹಾಲ್‌ನಲ್ಲಿದ್ದ ಗುಡ್‌ನೈಟ್ ಲಿಕ್ವಿಡ್ ಬಾಟಲ್ ಮೇಲಿನ ಮುಚ್ಚಳ ಒಡೆದು ಬಾಯಿಗೆ ಹಾಕಿಕೊಂಡಿದ್ದಾನೆ. ಏಕಾಏಕಿ ಕೆಮ್ಮುವುದಕ್ಕೆ ಶುರು ಮಾಡಿದ್ದಾನೆ. ಇದರಿಂದ ಗಾಬರಿಗೊಂಡ ಪಾಲಕರು ಕೂಡಲೇ 108 ಆಂಬುಲೆನ್ಸ್‌ನಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಅಲ್ಲಿನ ವೈದ್ಯರ ಸಲಹೆಯಂತೆ ತಾಳಿಕೋಟೆ ಪಟ್ಟಣದ ಮಕ್ಕಳ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ್ದು, ಮಗು ಚೇತರಿಸಿಕೊಳ್ಳುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಈ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿದ ಬಾಲಕನ ದೊಡ್ಡಪ್ಪ ಇಮಾಮ್‌ಅಲಿ ಕವಡಿಮಟ್ಟಿ, ಮನೆಯಲ್ಲಿ ಆಟವಾಡುತ್ತಲೇ ಮಗು ಲಿಕ್ವಿಡ್ ಕುಡಿದಿದೆ. ಏಕಾಏಕಿ ಕೆಮ್ಮುವುದಕ್ಕೆ ಶುರು ಮಾಡಿದ್ದರಿಂದ ಆಸ್ಪತ್ರೆಗೆ ತಂದಿದ್ದೇವು. ವೈದ್ಯರು ತಾಳಿಕೋಟೆಗೆ ಕರೆದೊಯ್ಯಲು ತಿಳಿಸಿದ್ದರಿಂದ ಇಲ್ಲಿಗೆ ಬಂದಿದ್ದೇವೆ. ಸದ್ಯಕ್ಕೆ ಮಗು ಚೇತರಿಸಿಕೊಂಡಿದೆ ಎಂದರು.

    ಮಗುವಿಗೆ ಚಿಕಿತ್ಸೆ ನೀಡುತ್ತಿರುವ ತಾಳಿಕೋಟೆ ಭಾಗ್ಯವಂತಿ ಆಸ್ಪತ್ರೆ ವೈದ್ಯ ಡಾ. ಈರಗಂಟೆಪ್ಪ ತಳ್ಳೊಳ್ಳಿ ಮಾತನಾಡಿ, ಗುಡ್‌ನೈಟ್ ಲಿಕ್ವಿಡ್ ಅಪಾಯಕಾರಿ ವಸ್ತು. ಅದನ್ನು ಸೇವಿಸಿದರೆ ಕೋವಿಡ್‌ನಂತಹ ಲಕ್ಷಣಗಳು ಗೋಚರಿಸುತ್ತವೆ. ಪಾಲಕರು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಸದ್ಯಕ್ಕೆ ಮಗು ಚೇತರಿಸಿಕೊಂಡಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts