More

    ಧೋನಿ ನೀಡಿದ ಆ ಸಲಹೆ ಚೆನ್ನೈ ವಿರುದ್ಧ ಗೆಲ್ಲಲು ಸಹಕಾರಿಯಾಯ್ತು: ಮಾರ್ಕಸ್​ ಸ್ಟೋಯಿನಿಸ್

    ಚೆನ್ನೈ: ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಫರ್ ಕಿಂಗ್ಸ್​​ ಹಾಗೂ ಲಖನೌ ಸೂಪರ್​ಜೈಂಟ್ಸ್​ ನಡುವಿನ 17ನೇ ಆವೃತ್ತಿಯ 39ನೇ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್​ ಸಾರಥ್ಯದ ಎಲ್​ಎಸ್​ಜಿ ತಂಡವು ಮಾರ್ಕಸ್​ ಸ್ಟೋಯಿನಿಸ್​ ಶತಕದ ಬಲದಿಂದ ಗೆಲುವಿನ ನಗೆ ಬೀರಿದ್ದು, ಪಾಯಿಂಟ್ಸ್​ ಟೇಬಲ್​ನಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ.

    ಟಿ-20 ಕ್ರಿಕೆಟ್​ನಲ್ಲಿ ಜೀವನ ಶ್ರೇಷ್ಠ ಇನ್ನಿಂಗ್ಸ್​ ಆಡಿದ ಮಾರ್ಕಸ್​ ಸ್ಟೋಯಿನಿಸ್​ 63 ಎಸೆತಗಳಲ್ಲಿ, 13 ಬೌಂಡರಿ, 6 ಸಿಕ್ಸರ್​ ಒಳಗೊಂಡಂತೆ 124 ರನ್​ ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇನ್ನು ಪಂದ್ಯದ ಬಳಿಕ ಮಾತನಾಡಿದ ಸ್ಟೋಯಿನಿಸ್​ ತಮ್ಮ ಸ್ಪೋಟಕ ಬ್ಯಾಟಿಂಗ್​ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ನೀಡಿದ ಸಲಹೆ ಕಾರಣ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಈತ ಯಾವುದಕ್ಕೂ ಪ್ರಯೋಜನವಿಲ್ಲದವ; ಸ್ಟಾರ್​ ಆಟಗಾರನ ಬಗ್ಗೆ ಸೆಹ್ವಾಗ್​ ಹೀಗಂದಿದ್ಯಾಕೆ?

    ಈ ರೀತಿಯ ಬೃಹತ್​ ಮೊತ್ತದ ಗುರಿಯನ್ನು ಬೆನ್ನಟ್ಟುವಾಗ ಎಲ್ಲರೂ ನಾನು ಹೆಚ್ಚುವರಿಯಾಗಿ ಏನನ್ನಾದರೂ ಮಾಡಬೇಕಿದೆ ಎಂದು ಯೋಚಿಸುತ್ತಾರೆ. ಅದರ ಬದಲಾಗಿ ನಿನ್ನ ಆಟವಾಡುವ ಮೂಲಕ ನಾನು ಎಲ್ಲರಿಗಿಂತ ಮುಂದಿರಬೇಕು ಎಂದು ಯೋಚಿಸಿ ಬ್ಯಾಟಿಂಗ್​ ಮಾಡು ಎಂಬುದಾಗಿ ಧೋನಿ ಅವರು ನನಗೆ ಹೇಳಿದ್ದರು. ಅವರ ಮಾತುಗಳು ನನಗೆ ಹೆಚ್ಚಿನ ರನ್​ ಗಳಿಸಲು ಸಹಾಯ ಮಾಡಿತ್ತು ಎಂದು ಮಾರ್ಕಸ್​ ಸ್ಟೋಯಿನಿಸ್​ ಪಂದ್ಯದ ಬಳಿಕ ಹೇಳಿದ್ದಾರೆ.

    ಇತ್ತ ಮಾರ್ಕಸ್​ ಸ್ಟೋಯಿನಿಸ್​ ಶತಕ ಐಪಿಎಲ್​ ಇತಿಹಾಸದಲ್ಲಿ ಹೊಸ ದಾಖಲೆಯೊಂದನ್ನು ಬರೆದಿದೆ. 2011ರಲ್ಲಿ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ಬ್ಯಾಟ್ಸ್​​ಮನ್​ ಪಾಲ್​ ವಾಲ್ತಾಟಿ 189 ರನ್​ಗಳನ್ನು ಚೇಸ್​ ಮಾಡುವ ವೇಳೆ 120 ರನ್​ಗಳನ್ನು ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಸಿದ್ದರು. ಅವರ ದಾಖಲೆಯನ್ನು ಹಿಂದಿಕ್ಕಿರುವ ಸ್ಟೋಯಿನಿಸ್​ ಚೇಸಿಂಗ್​ ವೇಳೆ ಗರಿಷ್ಠ ಮೊತ್ತ ದಾಖಲಿಸಿದ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts