More

    ಇಂದು ಧೋನಿ ಐತಿಹಾಸಿಕ ದಾಖಲೆ ಸೃಷ್ಟಿಸಿದ ದಿನ..!

    ಬೆಂಗಳೂರು: ಎಂಎಸ್ ಧೋನಿ ಭಾರತ ತಂಡ ಯಶಸ್ವಿ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೂರು ಐಸಿಸಿ ಟ್ರೋಫಿ ಜಯಿಸಿದ ವಿಶ್ವದ ಏಕೈಕ ನಾಯಕ ಕೂಡ ಹೌದು. ಇದು ವಿಶ್ವದ ಯಾವುದೇ ನಾಯಕ ಮಾಡಿರದ ಸಾಧನೆಯನ್ನು ಧೋನಿ ಮಾಡಿದ್ದಾರೆ. 2013ರ ಜೂನ್ 23 ರಂದು ನಡೆದ ಐಸಿಸಿ ಚಾಂಪಿಯನ್ ಟ್ರೋಫಿಯಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು 5 ರನ್‌ಗಳಿಂದ ಮಣಿಸಿ ಈ ಸಾಧನೆ ಮಾಡಿದರು. ಇದರೊಂದಿಗೆ 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್‌ನಿಂದ ತತ್ತರಿಸಿದ್ದ ಭಾರತೀಯ ಕ್ರಿಕೆಟ್‌ಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವು ಹೊಸ ಚೈತನ್ಯ ಮೂಡಿಸಿತು. ಇದಕ್ಕೂ ಮೊದಲು ಧೋನಿ ಸಾರಥ್ಯದಲ್ಲಿಯೇ ಭಾರತ ತಂಡ, 2007ರ ಚೊಚ್ಚಲ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಜಯಿಸಿತ್ತು. ಈ ಸಾಧನೆ ಮಾಡಿದ ಏಕೈಕ ನಾಯಕ ಎಂದೂ ಐಸಿಸಿ ಟ್ವೀಟ್ ಕೂಡ ಮಾಡಿದೆ.

    ಇದನ್ನೂ ಓದಿ: ವಿಶ್ವ ನಂ. 1 ಟೆನಿಸ್ ಆಟಗಾರ ಜೋಕೊವಿಕ್‌ಗೆ ಕರೊನಾ ಸೋಂಕು

    ಇಂದು ಧೋನಿ ಐತಿಹಾಸಿಕ ದಾಖಲೆ ಸೃಷ್ಟಿಸಿದ ದಿನ..!ಕ್ಯಾಪ್ಟನ್ ಕೂಲ್ ಎಂದು ಹೆಸರಾಗಿದ್ದ ಎಂಎಸ್ ಧೋನಿ, ಯುವ ಪಡೆ ಕಟ್ಟಿಕೊಂಡೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಸಾಧನೆ ಮಾಡಿದರು. ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ರೋಚಕ ಫೈನಲ್ ಕದನದಲ್ಲಿ ಅಂತಿಮ ಕ್ಷಣದಲ್ಲಿ ಗೆಲುವು ಒಲಿಸಿಕೊಂಡ ಧೋನಿ ಪಡೆ, ಟೂರ್ನಿಯುದ್ದಕ್ಕೂ ಭರ್ಜರಿ ನಿರ್ವಹಣೆ ನೀಡಿತ್ತು. ಲೀಗ್ ಹಂತದಲ್ಲಿ ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನದಂಥ ಬಲಿಷ್ಠ ತಂಡಗಳಿಗೆ ಸೋಲಿನ ರುಚಿ ತೋರಿಸಿದ್ದ ಭಾರತ, ಸೆಮಿಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತ್ತು.

    ಇದನ್ನೂ ಓದಿ: ಬಾಸ್ಕೆಟ್‌ಬಾಲ್ ಆಟಗಾರ್ತಿ ಈಗ ಫೈಟರ್ ಜೆಟ್ ಪೈಲಟ್!

    ಬರ್ಮಿಂಗ್‌ಹ್ಯಾಂನ ಎಜ್‌ಬಾಸ್ಟನ್‌ನಲ್ಲಿ ನಡೆದ ಫೈನಲ್ ಪಂದ್ಯಕ್ಕೆ ಮಳೆಯಿಂದಾಗಿ ತಲಾ 20 ಓವರ್ ನಿಗದಿಪಡಿಸಲಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 7 ವಿಕೆಟ್‌ಗೆ 129 ರನ್ ಗಳಿಸಿದರೆ, ಪ್ರತಿಯಾಗಿ ಅಶ್ವಿನ್, ರವೀಂದ್ರ ಜಡೇಜಾ ಹಾಗೂ ಇಶಾಂತ್ ಶರ್ಮ ತಲಾ 2 ವಿಕೆಟ್ ಪಡೆದ ಪರಿಣಾಮ 8 ವಿಕೆಟ್‌ಗೆ 124ರನ್ ಗಳಿಸಲಷ್ಟೇ ಶಕ್ತವಾಯಿತು.

    ರೂಪವತಿಯರಾದ ಹಿರಿಯ ಕ್ರಿಕೆಟಿಗರು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts