More

    ಸಚಿನ್, ಕೊಹ್ಲಿ ಬಳಿಕ ಈ ಹೊಸ ಬ್ಯಾಟ್ಸ್‌ಮನ್ ಬ್ಯಾಟ್ ಪ್ರಾಯೋಜಕತ್ವಕ್ಕೆ ಎಂಆರ್‌ಎಫ್​ ಸಿದ್ಧತೆ!

    ನವದೆಹಲಿ: ‘ಎಂಆರ್‌ಎಫ್​’ ಎಂಬ ಚೆನ್ನೈ ಮೂಲದ ಟಯರ್ ಕಂಪನಿ ಭಾರತದ ಹೆಚ್ಚಿನ ಕ್ರಿಕೆಟ್ ಪ್ರೇಮಿಗಳಿಗೆ ಪರಿಚಯವಾಗಿರುವುದು ದಿಗ್ಗಜ ಬ್ಯಾಟ್ಸ್‌ಮನ್ ಸಚಿನ್ ತೆಂಡುಲ್ಕರ್ ಅವರ ಬ್ಯಾಟ್ ಮೂಲಕ! ಯಾಕೆಂದರೆ 90ರ ದಶಕದಲ್ಲಿ ಸಚಿನ್ ತೆಂಡುಲ್ಕರ್ ಅಮೋಘ ಶತಕ ಸಿಡಿಸಿ ವಿಜೃಂಭಿಸುತ್ತಿದ್ದಾಗಲೆಲ್ಲಾ ಅವರ ಬ್ಯಾಟ್ ಮೇಲಿನ ‘ಎಂಆರ್‌ಎಫ್​’ ಸ್ಟಿಕ್ಕರ್ ಕೂಡ ಮಿಂಚುತ್ತಿತ್ತು. ಭಾರತೀಯ ಕ್ರಿಕೆಟ್‌ನಲ್ಲಿ ಸಚಿನ್ ತೆಂಡುಲ್ಕರ್‌ರ ಉತ್ತರಾಧಿಕಾರಿಯಾಗಿ ವಿರಾಟ್ ಕೊಹ್ಲಿ ಸ್ಥಾನ ಪಡೆದ ಬಳಿಕ ಅವರ ಬ್ಯಾಟ್‌ಅನ್ನೂ ‘ಎಂಆರ್‌ಎಫ್​’ ಆಕ್ರಮಿಸಿಕೊಂಡಿತು. ಇದೀಗ ಕೊಹ್ಲಿ ಚಾಲ್ತಿಯಲ್ಲಿರುವಾಗಲೇ ಎಂಆರ್‌ಎಫ್​, ಭಾರತೀಯ ಕ್ರಿಕೆಟ್‌ನಲ್ಲಿ ಸದ್ದು ಮಾಡಲಿರುವ ಮತ್ತೋರ್ವ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ನ ಬ್ಯಾಟ್ ಪ್ರಾಯೋಜಕತ್ವದ ಮೇಲೆ ಕಣ್ಣಿಟ್ಟಿದೆ. ಅವರೇ ಯುವ ಆರಂಭಿಕ ಶುಭಮಾನ್ ಗಿಲ್!

    ಸಚಿನ್, ಕೊಹ್ಲಿ ಬಳಿಕ ಈ ಹೊಸ ಬ್ಯಾಟ್ಸ್‌ಮನ್ ಬ್ಯಾಟ್ ಪ್ರಾಯೋಜಕತ್ವಕ್ಕೆ ಎಂಆರ್‌ಎಫ್​ ಸಿದ್ಧತೆ!

    ದಿಗ್ಗಜ ಬ್ಯಾಟ್ಸ್‌ಮನ್ ಸಚಿನ್ ತೆಂಡುಲ್ಕರ್ ಬಳಿಕ ಎಂಆರ್‌ಎಫ್​ನಿಂದ ಬೃಹತ್ ಮೊತ್ತದ ಒಪ್ಪಂದ ಪಡೆದುಕೊಂಡಿದ್ದ ವಿರಾಟ್ ಕೊಹ್ಲಿ 2015ರಿಂದ ಮೂರು ವರ್ಷಗಳ ಅವಧಿಗೆ ವಾರ್ಷಿಕ 8 ಕೋಟಿ ರೂ. ಮೊತ್ತದ ಒಪ್ಪಂದ ಮಾಡಿಕೊಂಡಿದ್ದರು. 2017ರಲ್ಲಿ ಒಪ್ಪಂದವನ್ನು ನವೀಕರಿಸಿಕೊಂಡಿದ್ದ ಕೊಹ್ಲಿ 8 ವರ್ಷಗಳಿಗೆ 100 ಕೋಟಿ ರೂ. ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದರನ್ವಯ ಕೊಹ್ಲಿ ಈಗ ಬ್ಯಾಟ್‌ನಲ್ಲಿ ಹಾಕಿರುವ ‘ಎಂಆರ್‌ಎಫ್​’ ಸ್ಟಿಕ್ಕರ್‌ನಿಂದಲೇ ವಾರ್ಷಿಕ 12.5 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುತ್ತಾರೆ. ಕೊಹ್ಲಿ ಈಗ 32 ವರ್ಷದವರಾಗಿದ್ದಾರೆ. ಹೀಗಾಗಿ ಎಂಆರ್‌ಎಫ್​ ಈಗ ಭಾರತ ತಂಡದ ಭವಿಷ್ಯದ ಸ್ಟಾರ್ ಬ್ಯಾಟ್ಸ್‌ಮನ್‌ನ ಒಪ್ಪಂದವನ್ನೂ ಸೆಳೆದುಕೊಳ್ಳುವ ಹಂಬಲದಲ್ಲಿದೆ.

    ಇದನ್ನೂ ಓದಿ: ಟೀಮ್ ಇಂಡಿಯಾದ ಈ ಕ್ರಿಕೆಟಿಗನ ಅಕ್ಕ ಕೂಡ ವೃತ್ತಿಪರ ಕ್ರಿಕೆಟರ್, ತಮ್ಮನ ಯಶಸ್ಸಿಗೂ ನೆರವು!

    19 ವಯೋಮಿತಿ ಕ್ರಿಕೆಟ್‌ನಲ್ಲಿ ಭರವಸೆಯ ಬ್ಯಾಟ್ಸ್‌ಮನ್ ಆಗಿ ಗಮನಸೆಳೆದಿದ್ದ ಶುಭಮಾನ್ ಗಿಲ್, ಕಳೆದ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ ನೈಟ್‌ರೈಡರ್ಸ್‌ ತಂಡದ ಪರ ಮಿಂಚಿದ್ದರು. ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸದಲ್ಲೂ ಟೆಸ್ಟ್ ಸರಣಿಯಲ್ಲಿ ಇನಿಂಗ್ಸ್ ಆರಂಭಿಸುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದರು. 3 ಟೆಸ್ಟ್‌ಗಳಲ್ಲಿ 2 ಅರ್ಧಶತಕಗಳ ಸಹಿತ 259 ರನ್ ಬಾರಿಸಿದ್ದರು. ಅದರಲ್ಲೂ ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ ಬಿರುಸಿನ 91 ರನ್ ಬಾರಿಸಿ ಭಾರತ ತಂಡದ ಯಶಸ್ವಿ ಚೇಸಿಂಗ್‌ಗೆ ಭದ್ರಬುನಾದಿ ಹಾಕಿಕೊಟ್ಟಿದ್ದರು.

    ಸಚಿನ್, ಕೊಹ್ಲಿ ಬಳಿಕ ಈ ಹೊಸ ಬ್ಯಾಟ್ಸ್‌ಮನ್ ಬ್ಯಾಟ್ ಪ್ರಾಯೋಜಕತ್ವಕ್ಕೆ ಎಂಆರ್‌ಎಫ್​ ಸಿದ್ಧತೆ!

    21 ವರ್ಷದ ಬ್ಯಾಟ್ಸ್‌ಮನ್ ಶುಭಮಾನ್ ಗಿಲ್ ಇತ್ತೀಚೆಗಿನವರೆಗೂ ಸಿಯೆಟ್ ಜತೆಗೆ ಬ್ಯಾಟ್ ಪ್ರಾಯೋಜಕತ್ವ ಒಪ್ಪಂದ ಹೊಂದಿದ್ದರು. 2018ರಿಂದ ಜಾರಿಯಲ್ಲಿದ್ದ ಈ ಒಪ್ಪಂದ 2020ಕ್ಕೆ ಅಂತ್ಯಗೊಂಡಿದೆ. ಹೀಗಾಗಿ ಆಸೀಸ್ ವಿರುದ್ಧದ ಸರಣಿಯ ಕೊನೇ 2 ಟೆಸ್ಟ್‌ಗಳಲ್ಲಿ ಯುವರಾಜ್ ಸಿಂಗ್‌ರ ಬ್ರಾಂಡ್‌ನ (ಯುವಿಕ್ಯಾನ್) ಬ್ಯಾಟ್ ಬಳಸಿದ್ದರು. ಶೀಘ್ರದಲ್ಲೇ ಅವರು ಎಂಆರ್‌ಎಫ್​ ಜತೆಗಿನ ಹೊಸ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎನ್ನಲಾಗುತ್ತಿದೆ.

    ಸಚಿನ್, ಕೊಹ್ಲಿ ಬಳಿಕ ಈ ಹೊಸ ಬ್ಯಾಟ್ಸ್‌ಮನ್ ಬ್ಯಾಟ್ ಪ್ರಾಯೋಜಕತ್ವಕ್ಕೆ ಎಂಆರ್‌ಎಫ್​ ಸಿದ್ಧತೆ!

    ಸದ್ಯ ಭಾರತೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅವರಲ್ಲದೆ, ಶಿಖರ್ ಧವನ್ ಕೂಡ ಎಂಆರ್‌ಎಫ್​ ಜತೆಗೆ ವಾರ್ಷಿಕ 3 ಕೋಟಿ ರೂ. ಮೊತ್ತದ ಒಪ್ಪಂದ ಹೊಂದಿದ್ದಾರೆ. ಇನ್ನು ರೋಹಿತ್ ಶರ್ಮ ಎಂಆರ್‌ಎಫ್​ ಎದುರಾಳಿ ಕಂಪನಿ ಸಿಯೆಟ್ ಜತೆಗೆ ಒಪ್ಪಂದ ಹೊಂದಿದ್ದು, ವಾರ್ಷಿಕ 3 ಕೋಟಿ ರೂ. ಮೊತ್ತ ಪಡೆಯುತ್ತಿದ್ದಾರೆ.

    ಸ್ಟೀವನ್ ಸ್ಮಿತ್ ಮಾದರಿಯಲ್ಲಿ ಜೋ ರೂಟ್ ವಿರುದ್ಧವೂ ಟೀಮ್ ಇಂಡಿಯಾ ಕಾರ್ಯತಂತ್ರ

    ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಗೆ ಕನ್ನಡಿಗ ಜಾವಗಲ್ ಶ್ರೀನಾಥ್ ಐಸಿಸಿ ಮ್ಯಾಚ್ ರೆಫ್ರಿ

    ಐಪಿಎಲ್ ಆಟಗಾರರ ಹರಾಜು ಯಾವಾಗ? ಎಲ್ಲಿ ನಡೆಯಲಿದೆ ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts