More

    ಭ್ರಷ್ಟಾಚಾರ ಸಾಬೀತು ಮಾಡಿದಲ್ಲಿ ರಾಜೀನಾಮೆ

    ಹರಪನಹಳ್ಳಿ: ಭ್ರಷ್ಟಾಚಾರವಿಲ್ಲದೆ ಪ್ರಧಾನಿ ನರೇಂದ್ರ ಮೋದಿ ಆಡಳಿತ ನೀಡಿದ್ದಾರೆ. ಕೇಂದ್ರ ಸರ್ಕಾರದ ಭ್ರಷ್ಟಾಚಾರ ಸಾಬೀತು ಮಾಡಿದಲ್ಲಿ ರಾಜೀನಾಮೆ ನೀಡುವೆ ಎಂದು ಸಂಸದ ವೈ.ದೇವೆಂದ್ರಪ್ಪ ಹೇಳಿದರು.

    ಪಟ್ಟಣದ ಬಾಬುಜಗಜೀವನರಾಂ ಭವನದಲ್ಲಿ ಭಾನುವಾರ ಎಸ್ಸಿ ಹಾಗೂ ಎಸ್ಟಿ ಮೋರ್ಚಾದ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಮೋದಿ ಅವರು ಹಗಲಿರುಳು ಜನರಿಗಾಗಿ ದುಡಿಯುತ್ತಿದ್ದಾರೆ. ಪಕ್ಷ ಕರುಣಾಕರ ರೆಡ್ಡಿ ಅಥವಾ ಯಾರಿಗೇ ಟಿಕೆಟ್ ನೀಡುತ್ತದ್ದಯೋ ಅವರ ಗೆಲುವಿಗೆ ಒಗ್ಗಟ್ಟಾಗಿ ದುಡಿಯೋಣ. ಅಖಂಡ ಬಳ್ಳಾರಿ ಜಿಲ್ಲೆಯ 10 ಸ್ಥಾನಗಳನ್ನು ಗೆಲ್ಲಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಕಾರ್ಯಕರ್ತರು ಕೇಂದ್ರ-ರಾಜ್ಯ ಸರ್ಕಾರಗಳ ಸಾಧನೆಗಳನ್ನು ಮನೆ ಮನೆಗೂ ತಲುಪಿಸಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದರು.

    ಶಾಸಕ ಜಿ.ಕರುಣಾಕರರೆಡ್ಡಿ ಮಾತನಾಡಿ, ಸ್ವಾತಂತ್ರೃ ಬಂದಾಗಿನಿಂದಲೂ ಕಾಂಗ್ರೆಸ್ ಪಕ್ಷ ಎಸ್ಸಿ, ಎಸ್ಟಿ ಸಮುದಾಯಗಳನ್ನು ಮತ ಬ್ಯಾಂಕ್ ಆಗಿ ಮಾಡಿಕೊಂಡಿತ್ತು. ಆದರೆ 55 ವರ್ಷಗಳ ಬಳಿಕ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸಾಕಷ್ಟು ಬದಲಾವಣೆ ತಂದಿದೆ. ಎಸ್ಸಿ, ಎಸ್ಟಿ ಸಮುದಾಯ ಜತೆಗಿದೆ ಎಂದು ಕಾಂಗ್ರೆಸ್ ಹಗಲು ಕನಸು ಕಾಣುತ್ತಿದೆ. ಇಂದು ಬಿಜೆಪಿ ಪರವಾಗಿ ಎಲ್ಲ ಸಮುದಾಯವರಿದ್ದಾರೆ ಎಂಬುದಕ್ಕೆ ಜನಪರ ಯೋಜನೆಗಳೇ ಸಾಕ್ಷಿ ಎಂದು ಹೇಳಿದರು.

    ಬಿಜೆಪಿ ನೇತೃತ್ವದ ಸರ್ಕಾರಗಳು ರೈತರ ಖಾತೆಗಳಿಗೆ ನೇರವಾಗಿ ಸಹಾಯಧನ ಜಮಾ ಮಾಡಿದೆ. ಅದೇ ಕಾಂಗ್ರೆಸ್ 2000 ರೂ. ಗ್ಯಾರಂಟಿ ನೀಡುವುದಾಗಿ ಹೇಳುತ್ತಿದೆ. ವಿಶ್ವ ಬ್ಯಾಂಕಿನಿಂದ ಹಣ ತಂದರೂ ಈ ಹಣವನ್ನು ಕೊಡಲು ಸಾಧ್ಯವಿಲ್ಲ. ಸುಳ್ಳು ಆಶ್ವಾಸನೆ ಮೂಲಕ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ ಎಂದು ಲೇವಡಿ ಮಾಡಿದರು.
    ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಸತ್ತೂರು ಹಾಲೇಶ, ಎಸ್ಟಿ ಮೋರ್ಚಾ ಸಂಚಾಲಕ ಬಂಗಾರು ಹನುಮಂತ, ಜಿಲ್ಲಾದ್ಯಕ್ಷ ಸುಭಾಶ್ಚಂದ್ರ, ಸೋದೆ ಪಾಪಣ್ಣ, ಕೆ.ಎಸ್.ರಾಘವೇಂದ್ರ, ಶ್ರೀನಿವಾಸ, ಆರ್.ಲೋಕೇಶ ಉದಯಕುಮಾರ, ಚಂದ್ರಶೇಖರ ಪೂಜಾರ, ಎಂ.ಪಿ.ನಾಯ್ಕ, ಎಂ.ಮಲ್ಲೇಶ, ಲಿಂಬ್ಯನಾಯ್ಕ, ಅಜ್ಜಪ್ಪ, ರವಿನಾಯ್ಕ, ಟಿ.ಎಚ್.ಗೀರಿಶಪ್ಪ, ಪ್ರಾಣೇಶ ಇತರರು ಇದ್ದರು.

    ಕಾಂಗ್ರೆಸ್ ಪಕ್ಷದ ಹಣೆಬರಹ ನೋಡಿ ಅನೇಕರು ಬಿಜೆಪಿಗೆ ಬಂದಿದ್ದಾರೆ. ಕಾಂಗ್ರೆಸ್ ಗಾಂಧಿ ಕುಟುಂಬ ಹಾಗೂ ಜೆಡಿಎಸ್ ಪಕ್ಷ ವಂಶಪರಂಪರೆ ಹೊಂದಿದೆ. ಆದರೆ ಭಾರತೀಯ ಜನತಾ ಪಕ್ಷ ಮಾತ್ರ ಎಲ್ಲ ವರ್ಗದವರಿಗೂ ಅವಕಾಶ ನೀಡಿದೆ.
    ಚನ್ನಬಸವನಗೌಡ
    ಬಿಜೆಪಿ ಜಿಲ್ಲಾಧ್ಯಕ್ಷ

    ಎಸ್ಸಿ, ಎಸ್ಟಿ ಅಭಿವೃದ್ಧಿ ನಿರ್ಲಕ್ಷಿಸಿ ಕಾಲಹರಣ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಅವರನ್ನು ಜೀತದಂತೆ ದುಡಿಸಿಕೊಂಡಿದ್ದಾರೆ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಜೀತ ದುಡಿಮೆಯಿಂದ ಮುಕ್ತಿಗೊಳಿಸಿ, ಪ್ರತ್ಯೇಕ ನಿಗಮಗಳ ಮೂಲಕ ಅಭಿವೃದ್ಧಿ ಮಾಡಿ ಜನಮನ್ನಣೆ ಪಡೆದಿದೆ.
    ಮಂಜುನಾಥ ಓಲೆಕಾರ
    ರಾಜ್ಯ ಬಿಜೆಪಿ ಎಸ್‌ಟಿ ಮೋರ್ಚಾ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts