More

    ಮಾಸ್ಕ್​​ ಧರಿಸದ ಮಹಿಳೆಗೆ ಮಗಳ ಕಣ್ಣೆದುರಲ್ಲೇ ಥಳಿತ: ಪೊಲೀಸರಿಬ್ಬರ ಅಮಾನತು!

    ಭೋಪಾಲ್​: ಮಾಸ್ಕ್​ ಧರಿಸದ ಮಹಿಳೆಯೊಬ್ಬರಿಗೆ ಹಿಗ್ಗಾಮುಗ್ಗಾ ಥಳಿಸಿ ಅಮಾನವೀಯವಾಗಿ ವರ್ತಿಸಿದ್ದ ಪೊಲೀಸರಿಬ್ಬರನ್ನು ಅಮಾನತು ಮಾಡಿ ಮಧ್ಯಪ್ರದೇಶದ ಸಾಗರ್​ ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿ ಅತುಲ್​ ಸಿಂಗ್​ ಆದೇಶ ಹೊರಡಿಸಿದ್ದಾರೆ.

    ಸಾಗರ್​ ಜಿಲ್ಲೆಯ ರಾಹ್ಲಿ ಪಟ್ಟಣದಲ್ಲಿ ಮಗಳ ಕಣ್ಣೆದುರಲ್ಲೇ ಮಹಿಳೆಯನ್ನು ಕಾಲಿನಿಂದ ಒದ್ದು, ರಸ್ತೆಯಲ್ಲೇ ಎಳೆದಾಡಿ ಪೊಲೀಸರು ಥಳಿಸಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಸಹ ಆಗಿತ್ತು.

    ಪ್ರಕರಣ ಕುರಿತು ತನಿಖೆಗೆ ಆದೇಶಿದ್ದ ಎಸ್​ಪಿ ಅತುಲ್​ ಸಿಂಗ್​, ಇದೀಗ ಸಹಾಯಕ ಪೊಲೀಸ್​ ಇನ್ಸ್​ಪೆಕ್ಟರ್​ (ಎಎಸ್​ಐ) ಎಲ್​.ಎನ್​. ತಿವಾರಿ ಮತ್ತು ಮಹಿಳಾ ಕಾನ್ಸ್​ಟೇಬಲ್​ ಅರ್ಚನಾ ದಿಮ್ಹಾರನ್ನು ಅಮಾನತು ಮಾಡಿದ್ದಾರೆ. ಇಂತಹ ಘಟನೆಗಳು ಪೊಲೀಸ್​ ಇಲಾಖೆಯನ್ನು ತಲೆತಗ್ಗಿಸುವಂತೆ ಮಾಡುತ್ತದೆ ಎಂದು ಎಸ್​ಪಿ ಕಿಡಿಕಾರಿದ್ದಾರೆ.

    ತಾಯಿ ಮತ್ತು ಮಗಳು ದಿನಸಿ ಪದಾರ್ಥ ತರಲು ಅಂಗಡಿಗೆ ಹೋಗುತ್ತಿದ್ದರು. ಕರೊನಾ ಲಾಕ್​ಡೌನ್​ ಇದ್ದರೂ ಮಹಿಳೆ ಮಾಸ್ಕ್​ ಧರಿಸಿರಲಿಲ್ಲ. ಇದನ್ನು ನೋಡಿದ ಪೊಲೀಸರು ಮಹಿಳೆಯನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದ ಕೊನೆಗೆ ಮಹಿಳೆಯನ್ನು ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದರು. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದಿದ್ದರು.

    ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿ, ಪೊಲೀಸರು ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆಯೂ ಒತ್ತಾಯ ಕೇಳಿಬಂದಿತ್ತು. (ಏಜೆನ್ಸೀಸ್​)

    VIDEO| ಮಾಸ್ಕ್​​ ಧರಿಸದ ಮಹಿಳೆಗೆ ಮಗಳ ಕಣ್ಣೆದುರಲ್ಲೇ ಮನಬಂದಂತೆ ಧಳಿಸಿದ ಪೊಲೀಸರು!

    ಅರ್ಧದಷ್ಟು ಭಾರತೀಯರು ಮಾಸ್ಕ್​ ತೊಡುತ್ತಿಲ್ಲ! ಶೇ.7 ಜನ ಸರಿಯಾಗಿ ತೊಡುತ್ತಿದ್ದಾರೆ!

    ಬ್ಲ್ಯಾಕ್ ಫಂಗಸ್​ ಔಷಧಿ ಸೋಗಿನಲ್ಲಿ ಸೈಬರ್​ ಖದೀಮರ ಆಟ ಶುರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts