More

    22ಕ್ಕೆ ಬೆಂಗಳೂರು ದಕ್ಷಿಣದಲ್ಲಿ ಬಾಲರಾಮೋತ್ಸವ, ಸಂಗೀತ ದಿಗ್ಗಜರಿಂದ ರಾಮನಾಮ ಭಜನೆ

    ಬೆಂಗಳೂರು : ಕೋಟ್ಯಾಂತರ ಜನರ ಬಹು ನರೀಕ್ಷೆಯ ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾಗುವ ಜ.22ರಂದು ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ವಿಶೇಷ ಬಾಲರಾಮೋತ್ಸವ ಹಮ್ಮಿಕೊಂಡಿರುವುದಾಗಿ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೀಪಾವಳಿ ಹಬ್ಬ ಪ್ರತಿವರ್ಷವೂ ಬರುತ್ತದೆ. ಆದರೆ ಜ.22ರಂದು ಬರುತ್ತಿರುವುದು 500 ವರ್ಷದ ನಂತರ ಬಂದಿರುವ ದೀಪಾವಳಿ. ಈ ದೀಪಾವಳಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸುಮಾರು 10 ಲಕ್ಷ ಜನರನ್ನು ವಿವಿಧ ಕಾರ್ಯಕ್ರಮಗಳ ಮೂಲಕ ತಲುಪಬೇಕೆಂಬ ಯೋಜನೆ ರೂಪಿಸಲಾಗಿದೆ. ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲ 8 ವಿಧಾನಸಭಾ ಕ್ಷೇತ್ರಗಳಲ್ಲಿ ಮೈದಾನ ಮತ್ತು ಬೃಹತ್ ದೇವಾಲಯದ ಆವರಣವನ್ನು ಗುರುತಿಸಿ ದೀಪೋತ್ಸವವನ್ನು ಆಯೋಜಿಸಲಾಗಿದೆ ಎಂದರು.

    ಬೆಂಗಳೂರು ದಕ್ಷಿಣ ಕ್ಷೇತ್ರದ 100 ದೇವಾಲಯಗಳಲ್ಲಿ ಬೃಹತ್ ಎಲ್‌ಇಡಿ ಪರದೆ ಮೂಲಕ ಅಯೋಧ್ಯೆಯಲ್ಲಿ ನಡೆಯುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿಶೇಷವಾಗಿ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರು ಪ್ರತಿನಿಧಿಸುವ ಪದ್ಮನಾಭನಗರದ ಕಾರ್ಮೆಲ್ ಸ್ಕೂಲ್ ಮೈದಾನದಲ್ಲಿ ಬಾಲರಾಮೋತ್ಸವ ಎಂಬ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

    ದಿನಪೂರ್ತಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 5 ರಿಂದ 8 ಗಂಟೆಯವರೆಗೆ ಸಂಗೀತ ದಿಗ್ಗಜರುಗಳಾದ ವಿಜಯಪ್ರಕಾಶ್, ಪ್ರವೀಣ್ ಡಿ.ರಾವ್, ಸಿದ್ಧಾರ್ಥ ಬೆಳ್ಮಣ್ಣು, ಡ್ರಮ್ ವಾದಕ ಅರುಣ್ ಇವರುಗಳಿಂದ ಶ್ರೀರಾಮನ ಭಜನೆ, ಸಂಕೀರ್ತನೆ ನಡೆಯಲಿದೆ. ರಾತ್ರಿ 8.30ಕ್ಕೆ ಲಕ್ಷ ದೀಪೋತ್ಸವದೊಂದಿಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ.

    4ರಿಂದ 7 ವರ್ಷದ ಮಕ್ಕಳಿಗೆ ವೇಷಭೂಷಣ : ಚಿಕ್ಕವಯಸ್ಸಿನಲ್ಲಿ ಮಕ್ಕಳಿಗೆ ಮಹಾಪುರುಷರ ವೇಷಭೂಷಣವನ್ನು ಹಾಕುವುದು ಸಾಮಾನ್ಯ. ಹಾಗೆ ಚಿಕ್ಕವಯಸ್ಸಿನಲ್ಲಿ ಮಕ್ಕಳಿಗೆ ವೇಷವನ್ನು ತೊಡಿಸಿದ ಭಾವಚಿತ್ರವನ್ನು ಜೀವನ ಪರ್ಯಂತ ಕಾಪಾಡಿಕೊಳ್ಳುತ್ತಾರೆ. ಜ.೨೨ರಂದು ಶ್ರೀರಾಮನ ಪ್ರತಿಷ್ಠಾಪನೆಯಾಗುತ್ತಿರುವುದು ಅತ್ಯಂತ ಅಪರೂಪದ ಸಂದರ್ಭವಾಗಿದ್ದು, ೪ ರಿಂದ ೭ ವರ್ಷದೊಳಗಿನ ಚಿಕ್ಕಮಕ್ಕಳಿಗೆ ರಾಮ, ಸೀತೆ, ಹನುಮಂತ, ಲಕ್ಷ್ಮಣ ಹೀಗೆ ರಾಮಾಯಣದ ಪಾತ್ರಗಳ ವೇಷಭೂಷಣವನ್ನು ಹಾಕಲು ಅವಕಾಶ ನೀಡಲಾಗಿದೆ. ಅಂದು ಸಂಜೆ ೫ ಗಂಟೆಗೆ ವೇಷಭೂಷಣ ಹಾಕಿ ಸಿದ್ಧಗೊಂಡಿರುವ ತಮ್ಮ ಮಕ್ಕಳನ್ನು ವೇದಿಕೆಗೆ ಕರೆತರುವಂತೆ ಸಂಸದ ತೇಜಸ್ವಿ ಸೂರ್ಯ ಕರೆ ನೀಡಿದ್ದಾರೆ.

    ರಜೆ ಘೋಷಿಸುವಂತೆ ಸರ್ಕಾರಕ್ಕೆ ಆಗ್ರಹ : ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯಾಗುತ್ತಿರುವ ಜ.೨೨ರ ಪ್ರತಿಕ್ಷಣವನ್ನು ಕಣ್ಣುತುಂಬಿಕೊಳ್ಳಬೇಕೆಂಬ ಆಸೆ ಭಾರತೀಯರದ್ದಾಗಿದೆ. ಈ ಆಸೆ ಈಡೇರಿಸುವುದಕ್ಕಾಗಿಯೇ ಈಗಾಗಲೇ ೧೪ ರಾಜ್ಯಗಳು ಆ ದಿನ ಸರ್ಕಾರಿ ರಜೆ ೋಷಿಸಿವೆ. ಕೇಂದ್ರ ಸರ್ಕಾರ ಕೂಡಾ ಅರ್ಧ ದಿನ ರಜೆ ೋಷಿಸಿದೆ. ಆದರೆ ಕರ್ನಾಟಕ ರಾಜ್ಯ ಸರ್ಕಾರ ಮಾತ್ರ ರಜೆ ೋಷಿಸದೆ ಕಾರ್ಯಕ್ರಮದ ಯಶಸ್ಸಿಗೆ ವಿಘ್ನ ಒಡ್ಡುವ ಮೂಲಕ ಸಿಎಂ ಸಿದ್ಧರಾಮಯ್ಯನವರು ವಿಕೃತಿ ಮೆರೆಯುತ್ತಿದ್ದಾರೆಂದು ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

    ಅಯೋಧ್ಯೆ ಶ್ರೀರಾಮಮಂದಿರಕ್ಕೂ ಕರ್ನಾಟಕ ಹಲವು ನಂಟುಗಳಿವೆ ಮಂದಿರದ ತಳಪಾಯಕ್ಕೆ ಕರ್ನಾಟಕದ ಕಲ್ಲನ್ನು ಬಳಸಲಾಗಿದೆ. ಪ್ರತಿಷ್ಠೆಯಾಗುತ್ತಿರುವ ಶ್ರೀರಾಮನ ಮೂರ್ತಿಯ ಶಿಲೆ ಕರ್ನಾಟಕದ್ದು, ನಿರ್ಮಿಸಿದ ಶಿಲ್ಪಿ ಕೂಡಾ ಕರ್ನಾಟಕದ್ದು, ಪೂಜಾ ನೇತೃತ್ವದಲ್ಲಿ ಮಾರ್ಗದರ್ಶನ ಮಾಡುತ್ತಿರುವವರು ಕರ್ನಾಟಕದ ಪೇಜಾವರ ಶ್ರೀಗಳು ಇಷ್ಟೆಲ್ಲಾ ನಂಟು ಹೊಂದಿರುವ ಕಾರ್ಯಕ್ರಮವನ್ನು ವೀಕ್ಷಿಸಲು ಸರ್ಕಾರ ರಜೆ ೋಷಿಸಬೇಕೆಂದು ಸಿಎಂ ಮತ್ತು ಡಿಸಿಎಂ ಅವರನ್ನು ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts