More

    ಕಾವೇರಿ ನಿಯಂತ್ರಣ ಮಂಡಳಿ ಶಿಫಾರಸಿಗೆ ದೇವೇಗೌಡರ ಅಸಮಾಧಾನ

    ಬೆಂಗಳೂರು : ಕಾವೇರಿ ನಿಯಂತ್ರಣ ಮಂಡಳಿಯು ತಮಿಳುನಾಡಿಗೆ ಫೆಬ್ರವರಿವರೆಗೆ 1182 ಕ್ಯೂಸೆಕ್ ನೀರು ಹರಿಸುವಂತೆ ಮಾಡಿರುವ ಶಿಫಾರಸಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟೌನ್‌ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಜಯಂತ್ಯೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

    ಮುಂಗಾರು ಕೊರತೆಯಿಂದ ಕರ್ನಾಟಕವು ತೀವ್ರ ಬರಗಾಲವನ್ನು ಎದುರಿಸುತ್ತಿರುವ ವಿಷಮ ಪರಿಸ್ಥಿತಿಯಲ್ಲಿ, ಕಾವೇರಿ ನಿಯಂತ್ರಣ ಮಂಡಳಿಯು ಮುಂದಿನ ಫೆಬ್ರವರಿವರೆಗೆ ಪ್ರತಿದಿನ ನೀರು ಹರಿಸುವಂತೆ ಶಿಾರಸು ಮಾಡಿರುವುದು ದೊಡ್ಡ ಅನ್ಯಾಯ. ಅಷ್ಟಕ್ಕೂ ಮಂಡಳಿಯ ತೀರ್ಪಿನಂತೆ ನೀರು ಹರಿಸುವುದಕ್ಕೆ ಜಲಾಶಯಗಳಲ್ಲಿ ನೀರಿಲ್ಲ. ಕೆಆರ್‌ಎಸ್, ಕಬಿನಿ ಜಲಾಶಯಗಳಲ್ಲಿ ನೀರು ಇಲ್ಲದಿರುವಾಗ ಹೇಮಾವತಿಯಿಂದ ನೀರು ಹರಿಸಬೇಕಾಗುತ್ತದೆ. ಇದರಿಂದ ಕಾವೇರಿ ಕೊಳ್ಳದ ಎಡ ಬಲಗಳಲ್ಲಿರುವ ರೈತರಿಗೆ ಅನ್ಯಾಯವಾಗುತ್ತದೆ. ರಾಜ್ಯ ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು ಎಂದು ವೇದಿಕೆಯ ಮೇಲಿದ್ದ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿಯವರಿಗೆ ದೇವೇಗೌಡರು ಸಲಹೆ ನೀಡಿದರು.

    ಅಂತರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕ ನದಿ ನೀರಿನ ವಿವಾದಗಳು ನ್ಯಾಯಾಲಯಗಳಲ್ಲಿವೆ. ಆದರೆ ದೇಶದಲ್ಲಿ ಕಾವೇರಿ ನದಿ ನೀರಿನ ವಿವಾದಕ್ಕೆ ಸಂಬಂಧಪಟ್ಟಂತೆ ಮಾತ್ರ ಮಧ್ಯಂತರ ತೀರ್ಪು ಪ್ರಕಟವಾಗಿದ್ದು, ಇದು ರಾಜ್ಯದ ರೈತರ ದುರಂತವೆಂದ ಅವರು, ರೈತರ ದುಡ್ಡಿನಲ್ಲಿ ಅಣೆಕಟ್ಟೆಗಳನ್ನು ಕಟ್ಟಿದ್ದರೂ ನಮ್ಮ ರೈತರ ಬದುಕು ಮಾತ್ರ ಸುಧಾರಣೆಯಾಗದ್ದು ನೋವಿನ ಸಂಗತಿ ಎಂದರು.

    ಕಾವೇರಿ ನೀರಿನಿಂದ ಬದಲಾಗಬೇಕಾಗಿದ್ದ ರೈತರ ಬದುಕು ಇಂದಿಗೂ ಗುಳೇ ಹೋಗುವ ಸ್ಥಿತಿಯನ್ನು ಬದಲಿಸಿಲ್ಲ. ಆ ಕಾಲದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆ, ಮುಂಬೈಗೆ ಜಟಕಾ ಗಾಡಿ ಓಡಿಸಲು ದೊಡ್ಡ ಸಂಖ್ಯೆಯಲ್ಲಿ ಜನ ಗುಳೆ ಹೋಗಿದ್ದರು. ಇನ್ನಾದರೂ ಗುಳೆ ಹೋಗುವ ಪರಿಸ್ಥಿತಿ ಬದಲಾಗಬೇಕು ಎಂದು ಗೌಡರು ಹೇಳಿದರು.

    ಮೋದಿಯವರೊಂದಿಗೆ ಚರ್ಚಿಸುವ ಭರವಸೆ : ಮೋದಿಯವರೊಂದಿಗೆ ನಮ್ಮ ಪಕ್ಷ ಕೈಜೋಡಿಸಿದ್ದು ವೈಯಕ್ತಿಕ ಲಾಭಕ್ಕಾಗಿ ಅಲ್ಲ. ನನ್ನ ಬಗ್ಗೆ ಅವರಿಗೆ ಬಹಳ ಗೌರವವಿದೆ. ಮೋದಿಯವರೊಂದಿಗಿನ ನನ್ನ ರಾಜಕೀಯ ಸಂಬಂಧವನ್ನು ಬಳಸಿಕೊಂಡು ಕಾವೇರಿ ವಿಷಯದಲ್ಲಿ ರಾಜ್ಯದ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಮಾತನಾಡುತ್ತೇನೆ. ಆದಿಚುಂಚನಗಿರಿ ಶ್ರೀಗಳು ಆಧ್ಯಾತ್ಮ ಮಾರ್ಗದಲ್ಲಿ ಅವರಿಗಿರುವ ಸಂಬಂಧವನ್ನು ಬಳಸಿಕೊಂಡು ಪ್ರಯತ್ನಿಸಿದರೆ ರಾಜ್ಯದ ರೈತರಿಗೆ ನ್ಯಾಯ ಒದಗಿಸಲು ಸಾಧ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts