More

    ಕಾಂಗ್ರೆಸ್ ಆಡಳಿತದಲ್ಲಿ ದೀಪಾವಳಿ ಪಟಾಕಿಯಂತೆ ಬಾಂಬ್​ ಬ್ಲಾಸ್ಟ್ ಆಗುತ್ತಿದ್ದವು ಎಂದ ಸಂಸದ ತೇಜಸ್ವಿ ಸೂರ್ಯ

    ಬೆಂಗಳೂರು: ದೇಶದ ಭದ್ರತೆ, ನಾಗರೀಕರ ಸುರಕ್ಷತೆ ಕಾಂಗ್ರೆಸ್​​ಗೆ ಬೇಕಾಗಿಲ್ಲ. ಎಲ್ಲೇ ಉಗ್ರದಾಳಿ ನಡೆದರೂ ಅದನ್ನು ಮತಬ್ಯಾಂಕ್ ಆಗಿ ಕಾಂಗ್ರೆಸ್ ಪರಿವರ್ತಿಸುತ್ತಿದೆ ಎಂದು ಹೇಳುವ ಮೂಲಕ ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ತೇಜಸ್ವಿ ಸೂರ್ಯ ಮಾತನಾಡುತ್ತಾ, ನರೇಂದ್ರ ಮೋದಿ ದೇಶದ ಚುಕ್ಕಾಣಿ ಹಿಡಿದ ನಂತರ ಎಲ್ಲೂ ಉಗ್ರ ದಾಳಿ ನಡೆದಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ದೀಪಾವಳಿ ಪಟಾಕಿ ರೀತಿಯಲ್ಲಿ ಬಾಂಬ್​ಗಳು ಬ್ಲಾಸ್ಟ್ ಆಗುತ್ತಿದ್ದವು ಎಂದು ಟೀಕಿಸಿದ್ದಾರೆ.

    ಕರ್ನಾಟಕದ ಜನತೆಯ ಸುರಕ್ಷತೆ ದೃಷ್ಟಿಯಿಂದ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಎನ್ಐಎ ಬರಬೇಕು. ಇದಕ್ಕಾಗಿ ಬಿಜೆಪಿ ಶಾಸಕರು ಹಾಗೂ ಸಂಸದರು ಸತತ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್​ ನಾಯಕರು ಮಾತ್ರ, ಉಗ್ರದಾಳಿಗಳ ಬಗ್ಗೆ ಪೊಲೀಸರ ತನಿಖೆಗೆಗೂ ಮೊದಲೇ ತಮ್ಮ ಸಹೋದರರನ್ನು ಉಳಿಸಿಕೊಳ್ಳಲು ಕ್ಲೀನ್ ಚಿಟ್ ನೀಡುತ್ತಿದ್ದಾರೆ ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.

    ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಮಾತನಾಡುತ್ತಾ, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವನ್ನು ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಇಷ್ಟಕ್ಕೆ ಸುಮ್ಮನಾಗದ ಡಿಕೆಶಿ, ಕುಕ್ಕರ್ ಸ್ಫೋಟ ಪ್ರಕರಣದ ಆರೋಪಿ ಶಾರೀಕ್‌ನನ್ನು ಯಾವುದೇ ತನಿಖೆ ನಡೆಸದೆ ಟೆರರಿಸ್ಟ್ ಎಂದು ಹೇಗೆ ಘೋಷಣೆ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದರು. ಡಿಕೆಶಿ ಎತ್ತಿದ ಈ ಪ್ರಶ್ನೆ ಬಿಜೆಪಿ ನಾಯಕರ ತೀವ್ರ ಟೀಕೆಗೆ ದಾರಿ ಮಾಡಿಕೊಟ್ಟಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts