More

    ಚಮ್ಮಾರರ ಚಪ್ಪಲಿ ಪಾಲಿಷ್ ಮಾಡಿದ ಸಂಸದ; ಭಗವದ್ಗೀತೆ ಪುಸ್ತಕ ಕೊಟ್ಟು ಸನ್ಮಾನ

    ಮಧ್ಯಪ್ರದೇಶ: ರಾಜಕಾರಣಿಗಳು ಒಂದಲ್ಲ ಒಂದು ರೀತಿಯಲ್ಲಿ ಗಮನ ಸೆಳೆಯುತ್ತಲೇ ಇರುತ್ತಾರೆ. ಹಾಗೆ ಗಮನ ಸೆಳೆಯುವಂಥ ಕೆಲಸಗಳನ್ನೇ ಅವರು ಹೆಚ್ಚಾಗಿ ಮಾಡುತ್ತಿರುತ್ತಾರೆ. ಇಲ್ಲೊಬ್ಬರು ಸಂಸದರು ಕೂಡ ಈಗ ತಮ್ಮ ಒಂದು ನಡೆಯಿಂದ ಗಮನ ಸೆಳೆದಿದ್ದು, ಆ ಕುರಿತ ವಿಡಿಯೋ ಕೂಡ ವೈರಲ್ ಆಗಿದೆ.

    ಅಷ್ಟಕ್ಕೂ ಆ ಸಂಸದರು ಮಾಡಿದ್ದೇನು ಎಂದರೆ ಚಪ್ಪಲ್ ಪಾಲಿಷ್​. ಶೂ ಪಾಲಿಷ್ ಮಾಡುವವರ ಚಪ್ಪಲಿಯನ್ನೇ ಪಾಲಿಷ್​ ಮಾಡಿಕೊಡುವ ಮೂಲಕ ಸಂತ ಶಿರೋಮಣಿ ರವಿದಾಸ್ ಅವರ ಜಯಂತಿಯನ್ನು ಈ ಸಂಸದರು ವಿಶೇಷವಾಗಿ ಆಚರಿಸಿದ್ದಾರೆ. ಮಧ್ಯಪ್ರದೇಶದ ಬಿಜೆಪಿ ರಾಜ್ಯಸಭಾ ಸದಸ್ಯ ಸುಮೇರ್ ಸಿಂಗ್ ಸೋಲಂಕಿ ಈ ಮೂಲಕ ಗಮನ ಸೆಳೆದಿದ್ದಾರೆ.

    ಇಂದು ಮಧ್ಯಪ್ರದೇಶದ ಬರ್ವಾನಿಯಲ್ಲಿ ಸಂತ ಶಿರೋಮಣಿ ರವಿದಾಸರಿಗೆ ನಮನಗಳನ್ನು ಸಲ್ಲಿಸಿದ ಬಳಿಕ ನೇರ ಚಮ್ಮಾರರ ಬಳಿಗೆ ತೆರಳಿದ ಈ ಸಂಸದ ಅವರ ಪಾದರಕ್ಷೆಗಳನ್ನ ಪಾಲಿಷ್ ಮಾಡಿ ಕೊಟ್ಟಿದ್ದಾರೆ.

    ಇದನ್ನೂ ಓದಿ: ಆನ್​ಲೈನ್​ ಫ್ರೆಂಡ್​ ಜತೆ ಕಷ್ಟ ಹೇಳ್ಕೊಂಡಿದ್ದಕ್ಕೆ 86 ಲಕ್ಷ ರೂ. ಕಳ್ಕೊಂಡ; ಅದೃಷ್ಟವಶಾತ್​ ಕಿಡ್ನಿ ಉಳೀತು..

    25 ವರ್ಷಗಳ ಹಿಂದೆ ನಾನು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಕಿತ್ತುಹೋದ ಚಪ್ಪಲಿಗಳನ್ನು ರಿಪೇರಿ ಮಾಡಿಸಿಕೊಳ್ಳಲು ಇಲ್ಲಿಗೆ ಬರುತ್ತಿದೆ. ಇಂದು ಅದೇ ಚಮ್ಮಾರರ ಚಪ್ಪಲಿ ಪಾಲಿಷ್ ಮಾಡಿ ಅವರಿಗೆ ಭಗವದ್ಗೀತೆಯ ಪ್ರತಿ ಹಾಗೂ ಸಂತ ರವಿದಾಸರ ಭಾವಚಿತ್ರ ನೀಡಿದ್ದೇನೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ. ಮಾತ್ರವಲ್ಲ, ವ್ಯಕ್ತಿ ಆತನ ಹುಟ್ಟಿನಿಂದಲ್ಲ ಅವನ ಕರ್ಮ(ಕಾರ್ಯ)ದಿಂದ ಶ್ರೇಷ್ಠ ಎನಿಸಿಕೊಳ್ಳುತ್ತಾನೆ ಎಂದು ಹೇಳಿದ್ದಾರೆ.

    ಹೆಬ್ಬಾವನ್ನು ಹಿಡಿದೆಳೆದು ಅದರ ಮೇಲೆ ಬಸ್​ ಹತ್ತಿಸಿ ಹಿಂಸಿಸಿ ಕೊಂದು ಸಂಭ್ರಮಿಸಿದ ಜನರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts