More

    ಆನ್​ಲೈನ್​ ಫ್ರೆಂಡ್​ ಜತೆ ಕಷ್ಟ ಹೇಳ್ಕೊಂಡಿದ್ದಕ್ಕೆ 86 ಲಕ್ಷ ರೂ. ಕಳ್ಕೊಂಡ; ಅದೃಷ್ಟವಶಾತ್​ ಕಿಡ್ನಿ ಉಳೀತು..

    ಬೆಂಗಳೂರು: ಆನ್​ಲೈನ್​ನಲ್ಲಿ ಪರಿಚಯವಾದವನ ಜತೆ ಕಷ್ಟ ಹೇಳಿಕೊಂಡು ಆತನ ಸಲಹೆಯಂತೆ ನಡೆದುಕೊಂಡಿದ್ದಕ್ಕೆ ವ್ಯಕ್ತಿಯೊಬ್ಬರು ಬರೋಬ್ಬರಿ 86 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಕೊನೆಗೂ ತಾವು ಮೋಸ ಹೋಗಿದ್ದು ಅರಿವಾದ ಅವರು ಕಿಡ್ನಿ ಕಳೆದುಕೊಳ್ಳುವುದರಿಂದ ಬಚಾವಾಗಿದ್ದಾರೆ.

    ಕಿಡ್ನಿ ಖರೀದಿಸುವ ನೆಪದಲ್ಲಿ ವ್ಯಕ್ತಿಯೊಬ್ಬರಿಗೆ ಸಬೂಬು ಹೇಳಿ 86 ಲಕ್ಷ ರೂ. ವಸೂಲಿ ಮಾಡಿ ಸೈಬರ್ ಕಳ್ಳರು ವಂಚನೆ ಮಾಡಿದ್ದಾರೆ. ರಾಜಾಜಿನಗರದ 38 ವರ್ಷದ ವ್ಯಕ್ತಿ, ವಂಚನೆಗೆ ಒಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಆರೋಪಿ ಅಭಿಜಿತ್ ವಿರುದ್ಧ ಎಫ್​ಐಆರ್ ದಾಖಲಿಸಿಕೊಂಡು ಉತ್ತರ ವಿಭಾಗ ಸಿಇಎನ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ದೂರುದಾರ, ಗೂಗಲ್‌ನಲ್ಲಿ ಆಕಸ್ಮಿಕವಾಗಿ ಪರಿಚಯನಾದ ಅಭಿಜಿತ್ ಬಳಿ ತನ್ನ ಸಮಸ್ಯೆ ಹೇಳಿಕೊಂಡಿದ್ದಾರೆ. ಅದಕ್ಕೆ ಆರೋಪಿ, ಕಿಡ್ನಿ ಮಾರಾಟ ಮಾಡಿದರೆ ಕೈತುಂಬ ಹಣ ಸಿಗುತ್ತದೆ ಎಂದು ಸಲಹೆ ನೀಡಿದ್ದಾನೆ.

    ಇದನ್ನೂ ಓದಿ: ಪೊಲೀಸರನ್ನೂ ಬಿಡದ ಫೇಸ್​ಬುಕ್​ ಫೇಕ್​ ಅಕೌಂಟ್​; ಜಿಲ್ಲಾ ಪೊಲೀಸ್ ಹೆಸರಲ್ಲೇ ನಕಲಿ ಖಾತೆ!

    ಮೊದಲೇ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ದೂರದಾರ, ದಿಕ್ಕು ತೋಚದೆ ಕಿಡ್ನಿ ಮಾರಾಟಕ್ಕೆ ಒಪ್ಪಿಕೊಂಡಿದ್ದಾರೆ. ಆನಂತರ ಆರೋಪಿ, ನನಗೆ ಪರಿಚಯ ಇರುವ ವೈದ್ಯರು ದೆಹಲಿಯಲ್ಲಿ ಇದ್ದಾರೆ. ಅವರಿಗೆ ಕಿಡ್ನಿ ದಾನ ಮಾಡಲು ಡೆಪಾಸಿಟ್, ಎಲ್‌ಐಸಿ ಪಾಲಿಸಿ ಮತ್ತು ವಿಮಾನದಲ್ಲಿ ಹೋಗಲು ಶುಲ್ಕ ಪಾವತಿ ಮಾಡಬೇಕಾಗಿದೆ. ಕಿಡ್ನಿ ಮಾರಾಟದಿಂದ ಬರುವ ಹಣಕ್ಕೆ ತೆರಿಗೆ ಪಾವತಿ ಮಾಡಬೇಕೆಂದು ಹೇಳಿ ಹಂತ ಹಂತವಾಗಿ 86 ಲಕ್ಷ ರೂ. ತನ್ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾನೆ.

    ಇದನ್ನೂ ಓದಿ: ಪೊಲೀಸ್ ಕಾನ್​ಸ್ಟೆಬಲ್​ ಮತ್ತು ಪತ್ನಿ ಇಬ್ಬರಿಂದಲೂ ಆತ್ಮಹತ್ಯೆ ಯತ್ನ; ಸಾವಿಗೀಡಾದ ಹೆಂಡತಿ, ಪೇದೆ ಪರಿಸ್ಥಿತಿ ಚಿಂತಾಜನಕ

    ಮತ್ತೆ ಮತ್ತೆ ಹಣ ಹೇಳಿದಾಗ ಅನುಮಾನ ಬಂದು ಹಣ ವಾಪಸ್ ಕೊಡುವಂತೆ ದೂರುದಾರ ಒತ್ತಾಯ ಮಾಡಿದ್ದಾರೆ. ಆರೋಪಿ ಮೊಬೈಲ್​ಫೋನ್​ ಆಫ್​ ಮಾಡಿಕೊಂಡು ಸಂಪರ್ಕ ಕಡಿತ ಮಾಡಿಕೊಂಡಿದ್ದಾನೆ. ನೊಂದ ದೂರುದಾರ, ದಿಕ್ಕು ಕಾಣದೆ ಕೊನೆಗೆ ಠಾಣೆಗೆ ದೂರು ನೀಡಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಹೆಬ್ಬಾವನ್ನು ಹಿಡಿದೆಳೆದು ಅದರ ಮೇಲೆ ಬಸ್​ ಹತ್ತಿಸಿ ಹಿಂಸಿಸಿ ಕೊಂದು ಸಂಭ್ರಮಿಸಿದ ಜನರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts