More

    ಪೊಲೀಸರನ್ನೂ ಬಿಡದ ಫೇಸ್​ಬುಕ್​ ಫೇಕ್​ ಅಕೌಂಟ್​; ಜಿಲ್ಲಾ ಪೊಲೀಸ್ ಹೆಸರಲ್ಲೇ ನಕಲಿ ಖಾತೆ!

    ವಿಜಯಪುರ: ಇತ್ತೀಚೆಗೆ ಫೇಸ್​ಬುಕ್​ನಲ್ಲಿರುವವರ ನಕಲಿ ಖಾತೆ ರಚಿಸಿ ಮೆಸೆಂಜರ್ ಮೂಲಕ ಹಣ ಕೇಳಿ ಮೋಸ ಮಾಡುವುದು ಅತಿಯಾಗಿ ನಡೆಯುತ್ತಿದೆ. ಅಂಥದ್ದೊಂದು ಮೋಸದ ಜಾಲ ಸಾಮಾನ್ಯ ಎಂಬಷ್ಟರಮಟ್ಟಿಗೆ ದಿನೇದಿನೆ ಬೆಳಕಿಗೆ ಬರುತ್ತಿದೆ. ಅಚ್ಚರಿಯ ಸಂಗತಿ ಎಂದರೆ ಇದೀಗ ಪೊಲೀಸ್​ ಇಲಾಖೆ ಹೆಸರಲ್ಲೇ ಅಂಥದ್ದೊಂದು ನಕಲಿ ಖಾತೆ ತೆರೆಯಲಾಗಿದೆ.

    ಸೈಬರ್​ ಖದೀಮರು ಪೊಲೀಸ್ ಜಿಲ್ಲಾ ಪೊಲೀಸರ ಹೆಸರಲ್ಲೇ ನಕಲಿ ಖಾತೆ ತೆರೆದಿದ್ದಷ್ಟೇ ಅಲ್ಲದೆ, ಆ ಖಾತೆ ಮೂಲಕ ಹಣಕ್ಕೆ ಬೇಡಿಕೆ ಇಡುವ ಕೆಲಸವನ್ನೂ ಮಾಡಿದ್ದಾರೆ. ಕೊನೆಗೂ ಇದು ಸಂಬಂಧಿತ ಪೊಲೀಸರ ಗಮನಕ್ಕೆ ಬಂದಿದ್ದು ದೂರು ಕೂಡ ದಾಖಲಾಗಿದೆ. ವಿಜಯಪುರ ಜಿಲ್ಲಾ ಪೊಲೀಸ್​ ಎಂಬ ಹೆಸರಿನಲ್ಲಿ ಈ ಫೇಕ್​ ಅಕೌಂಟ್ ಸೃಷ್ಟಿಸಲಾಗಿದೆ.

    ವಿಜಯಪುರ ಜಿಲ್ಲಾ ಪೊಲೀಸ್​ ಇಲಾಖೆಯ ಹೆಸರಿನಲ್ಲಿ ಫೇಸ್​ಬುಕ್​ನಲ್ಲಿ ನಕಲಿ ಅಕೌಂಟ್ ಮಾಡಲಾಗಿದೆ. ‌ಆ ಖಾತೆ ಮೂಲಕ ಹಣ ಕೇಳಿದರೆ ದಯವಿಟ್ಟು ಕೊಡಬೇಡಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ. ಇಂಥ ಕೆಲಸ ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ.

    ಈ ಖದೀಮರು ಪೊಲೀಸ್​ ಇಲಾಖೆಯ ಹೆಸರಲ್ಲೇ ನಕಲಿ ಖಾತೆ ರಚಿಸಿ ಹಣ ಕೇಳಲು ಮುಂದಾಗಿರುವುದು ಈ ಜಾಲದ ಹಿನ್ನೆಲೆ ಹಾಗೂ ಸಿಕ್ಕಿಬೀಳುವುದಿಲ್ಲ ಎಂಬ ಹುಂಬತನದ ಕುರಿತು ಅಚ್ಚರಿ ಮೂಡುತ್ತಿರುವುದಷ್ಟೇ ಅಲ್ಲ, ಆತಂಕವನ್ನೂ ಹುಟ್ಟಿಸುತ್ತಿದೆ. ಇಂಥ ಜಾಲವನ್ನು ಬುಡಸಮೇತ ಕಿತ್ತುಹಾಕದಿದ್ದರೆ ಭವಿಷ್ಯದಲ್ಲಿ ಮತ್ತಷ್ಟು ಆತಂಕ ಖಚಿತ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

    ಪೊಲೀಸರನ್ನೂ ಬಿಡದ ಫೇಸ್​ಬುಕ್​ ಫೇಕ್​ ಅಕೌಂಟ್​; ಜಿಲ್ಲಾ ಪೊಲೀಸ್ ಹೆಸರಲ್ಲೇ ನಕಲಿ ಖಾತೆ! ಪೊಲೀಸರನ್ನೂ ಬಿಡದ ಫೇಸ್​ಬುಕ್​ ಫೇಕ್​ ಅಕೌಂಟ್​; ಜಿಲ್ಲಾ ಪೊಲೀಸ್ ಹೆಸರಲ್ಲೇ ನಕಲಿ ಖಾತೆ!

    ಇನ್ನು ಸಬ್ ರಿಜಿಸ್ಟ್ರಾರ್​ ಕಚೇರಿ ರಾತ್ರಿ ವರೆಗೂ ಓಪನ್; ಉತ್ತಮ ಸೇವೆ ಒದಗಿಸಲು ಸಮಯ ವಿಸ್ತರಣೆ

    ಎರಡು ಕೋಮುಗಳ ನಡುವೆ ಸಂಘರ್ಷ; ಅರ್ಧಕ್ಕೇ ನಿಂತಿತು ಉತ್ಸವದ ತೇರು!

    ‘ಇನ್ನೂ ಗ್ಯಾರಂಟೀ..’ ಎನ್ನುತ್ತ ಆ ನೆನಪನ್ನು ಹಂಚಿಕೊಂಡ ರಾಘವೇಂದ್ರ ರಾಜಕುಮಾರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts