More

    ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಗಲಭೆ ನಡೆಸಿದವರ ರಕ್ಷಣೆಗೆ ಮುಂದಾಗಿದ್ದು ನಾಚಿಕೆಗೇಡು: ಸಂಸದ ಎಸ್ ಮುನಿಸ್ವಾಮಿ

    ಕೋಲಾರ: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ತನ್ವೀರ್ ಸೇಠ್ ಪತ್ರ ಬರೆದಿರುವ ವಿಚಾರವಾಗಿ ಕೋಲಾರದಲ್ಲಿ ಸಂಸದ ಎಸ್ ಮುನಿಸ್ವಾಮಿ ವಾಗ್ದಾಳಿ ನಡೆಸಿದರು.

    ಸಂಸದ ಮುನಿಸ್ವಾಮಿ, ಶಾಸಕ ತನ್ವೀರ್ ಸೇಠ್ ವಿರುದ್ಧ ಹರಿಹಾಯ್ದಿದ್ದು, “ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಶಾಸಕ ತನ್ವೀರ್ ಸೇಠ್ ಅವ್ರ ಮೇಲಿನ ಕೇಸ್​ಗಳನ್ನು ಸರ್ಕಾರ ವಾಪಾಸ್ ಪಡೆದಿಲ್ಲ.

    ಇದನ್ನೂ ಓದಿ: ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಪ್ರಕರಣದ ಕಿಂಗ್‌ಪಿನ್ ಅರೆಸ್ಟ್​; ಎಸ್‌ಡಿಪಿಐ ಘಟಕಾಧ್ಯಕ್ಷ ಎನ್‌ಐಎ ಬಲೆಗೆ..

    ಅವರು, ಅವರದ್ದೆ ಪಕ್ಷದ ಶಾಸಕರನ್ನ ಕೊಲೆ ಮಾಡಲು ಪ್ರಯತ್ನ ಪಟ್ಟಿದ್ರು. ದೇಶ ವಿರೋಧಿ ಚಟುವಟಿಕೆ ನಡೆಸಿದವರ ಪರ ಕಾಂಗ್ರೆಸ್ ಇದೆ. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ, ಗಲಭೆ ನಡೆಸಿದವ್ರ ರಕ್ಷಣೆಗೆ ಮುಂದಾಗಿದ್ದು ನಾಚಿಕೆಗೇಡು. ತನ್ವೀರ್ ಸೇಠ್ ನೀವು ಭಾರತ ದೇಶದಲ್ಲಿ ಜೀವನ ನಡೆಸ್ತಿದ್ದೀರಾ” ಎಂದು ಕಿಡಿಕಾರಿದ್ದಾರೆ.

    ಇದನ್ನೂ ಓದಿ: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಕೇಸ್, ಬಿಬಿಎಂಪಿ ಮಾಜಿ ಸದಸ್ಯ ಅಬ್ದುಲ್ ರಕೀಬ್ ಜಾಕೀರ್ ಸಿಸಿಬಿ ಕಸ್ಟಡಿಗೆ

    ಈ ಸಂದರ್ಭದಲ್ಲಿ ಸಂಸದರು UPA ಒಕ್ಕೂಟಕ್ಕೆ INDIA ಕೂಟ ಎಂಬ ಹೆಸರಿಟ್ಟಿರುವ ವಿಚಾರವಾಗಿ ವ್ಯಂಗ್ಯವಾಡಿದ್ದಾರೆ. ಈ ಸಂದರ್ಭ ಅವರು, “ಅದೊಂದು ಆಲಿ ಬಾಬಾ, ಚಾಲೀಸ್ ಚೋರ್ ಎನ್ನುವ ಒಕ್ಕೂಟ. PFI, SDPI, ಇಂಡಿಯನ್ ಮುಜಾಹಿದ್ದೀನ್ ಇಂತಹ ಉಗ್ರಗ್ರಾಮಿ ಸಂಘಟನೆ ಹೆಸರಲ್ಲಿಯೂ INDIA ಎಂದು ಹಾಕಿಕೊಂಡಿದ್ದಾರೆ.

    ದೇಶ ವಿರೋಧಿ ಚಟುವಟಿಕೆ ನಡೆಸುವಾಗ INDIA ಪದ ಉಪಯೋಗಿಸಿದ್ದಾರೆ. INDIA ಕೂಟದ ಸದಸ್ಯರ ತಂಡ ಈ ದೇಶಕ್ಕೆ ಮಾರಕ, ಇವರನ್ನು ಜನರು ನಂಬಲ್ಲ” ಎಂದು, ಕೋಲಾರ ನಗರದಲ್ಲಿ ಸಂಸದ ಮುನಿಸ್ವಾಮಿ ಹೇಳಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts