More

    ಲೈಂಗಿಕ ಕಿರುಕುಳ ಕೊಟ್ಟ ಮಹಿಳೆಯಿಂದಲೇ ರಾಖಿ ಕಟ್ಟಿಸಿಕೊಳ್ಳುವ ಶಿಕ್ಷೆ

    ನವದೆಹಲಿ: ತಾನು ಮೈಕೈ ಮುಟ್ಟಿ ಲೈಂಗಿಕ ಕಿರುಕುಳ ಕೊಟ್ಟಿದ್ದ ಮಹಿಳೆಯಿಂದಲೇ ರಕ್ಷಾಬಂಧನದ ದಿನ ರಾಖಿ ಕಟ್ಟಿಸಿಕೊಳ್ಳುವಂತೆ ಯುವಕನೊಬ್ಬನಿಗೆ ಮಧ್ಯಪ್ರದೇಶ ಹೈಕೋರ್ಟ್​ ಶಿಕ್ಷೆ ನೀಡಿದೆ. ಅಲ್ಲದೆ, ಸಹೋದರಿಯರಿಗೆ ಕೊಡುವಂತೆ ಈ ಸಹೋದರಿಗೆ 11 ಸಾವಿರ ರೂ. ನಗದನ್ನು ಉಡುಗೊರೆಯಾಗಿ ಕೊಡುವಂತೆ ಸೂಚಿಸಿದೆ.

    ಮಧ್ಯಪ್ರದೇಶ ಹೈಕೋರ್ಟ್​ನ ನ್ಯಾಯಮೂರ್ತಿ ರೋಹಿತ್​ ಆರ್ಯ ಅವರಿದ್ದ ಏಕಸದಸ್ಯ ಪೀಠ ಈ ಆದೇಶವನ್ನು ಹೊರಡಿಸಿದೆ. ಜು.30ರಂದು ಈ ಆದೇಶ ನೀಡಿದ್ದ ನ್ಯಾಯಪೀಠ, ವಿಕ್ರಮ್​ ಭಾಗ್ರಿ ಎಂಬಾತನಿಗೆ ಷರತ್ತುಬದ್ಧ ಜಾಮೀನು ಕೂಡ ಕೊಟ್ಟಿತ್ತು.

    ವಿವಾಹಿತನಾಗಿರುವ ವಿಕ್ರಮ್​ ಭಾಗ್ರಿ ತನ್ನ ಪತ್ನಿಯೊಂದಿಗೆ ದೂರುದಾರರ ಮನೆಗೆ ರಕ್ಷಾಬಂಧನದ ದಿನ ಭೇಟಿ ಕೊಡಬೇಕು. ಬೆಳಗ್ಗೆ 11 ಗಂಟೆಗೆ ಒಂದು ಬಾಕ್ಸ್​ ಸಿಹಿತಿಂಡಿಗಳನ್ನು ಕೊಂಡೊಯ್ದು, ರಾಖಿ ಕಟ್ಟುವಂತೆ ಸಹೋದರಿಗೆ ಮನವಿ ಮಾಡಬೇಕು. ಜೀವನದುದ್ದಕ್ಕೂ ಸಂಕಷ್ಟ ಕಾಲದಲ್ಲಿ ಅಗತ್ಯ ನೆರವು ನೀಡುವುದಾಗಿ ಆ ಸಹೋದರಿಗೆ ಭರವಸೆ ನೀಡಬೇಕು. ಬಳಿಕ ರಾಖಿ ಕಟ್ಟಿಸಿಕೊಂಡು, 11 ಸಾವಿರ ರೂ. ನಗದು ಉಡುಗೊರೆ ಕೊಟ್ಟು ಬರಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

    ಇದನ್ನೂ ಓದಿ: ಹೊಲ ಗದ್ದೆಗಳಿಗೆ ತೆರಳುತ್ತಿರುವ ಕರೊನಾ ಸೋಂಕಿತರ ದ್ವಿತೀಯ ಸಂಪರ್ಕಿತರು

    ಅಲ್ಲದೆ, ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯ ಪುತ್ರನಿಗೆ ಬಟ್ಟೆ ಮತ್ತು ಸಿಹಿ ತಿಂಡಿಗಳನ್ನು ಖರೀದಿಸಲು 5 ಸಾವಿರ ರೂಪಾಯಿಗಳನ್ನು ಕೊಡಬೇಕು ಎಂದು ಸೂಚಿಸಿ, 50 ಸಾವಿರ ರೂ. ಮೊತ್ತದ ವೈಯಕ್ತಿಕ ಜಾಮೀನಿನ ಜತೆಗೆ ಇಷ್ಟೇ ಮೊತ್ತದ ಸಾಲ್ವೆಂಟ್​ ಶ್ಯೂರಿಟಿಯನ್ನೂ ಕೊಡಬೇಕು ಎಂದು ಸೂಚಿಸಿ ವಿಕ್ರಮ್​ ಭಾಗ್ರಿಗೆ ಜಾಮೀನು ಮಂಜೂರು ಮಾಡಿತ್ತು.

    ವಿಕ್ರಮ್​ ಭಾಗ್ರಿ ಉಜ್ಜೈನ್​ನಲ್ಲಿರುವ 30 ವರ್ಷದ ಮಹಿಳೆಯ ಮನೆಗೆ ಏ.20ರಂದು ನುಗ್ಗಿ, ಅವರ ಶೀಲಭಂಗ ಮಾಡುವ ಉದ್ದೇಶದಿಂದ ಮೈಕೈ ಮುಟ್ಟಿ ಕಿರುಕುಳ ಕೊಟ್ಟಿದ್ದ ಎನ್ನಲಾಗಿದೆ.

    ನನ್ನ ಗೆಳೆಯರೊಂದಿಗೆ ಸೆಕ್ಸ್ ಮಾಡು ಎಂದು ಹೆಂಡತಿಗೆ ಕಿರುಕುಳ ನೀಡಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts