More

    ಜಾಮೀನು ಕೊಡಲು ಕೋರ್ಟ್​ನ ವಿಶಿಷ್ಟ ಷರತ್ತು, ಚೀನಾದಲ್ಲದ ಟಿವಿ ಕೊಡಿಸ್ರಪ್ಪಾ!

    ಭೋಪಾಲ್​: ಲಡಾಖ್​ ಪೂರ್ವಭಾಗದಲ್ಲಿನ ಉದ್ವಿಗ್ನ ಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಚೀನಾ ವಿರೋಧಿ ಮನೋಭಾವ ವ್ಯಕ್ತವಾಗುತ್ತಿದೆ. ಚೀನಾ ಮೂಲದ ಆ್ಯಪ್​ಗಳ ಬಳಕೆ ಸ್ಥಗಿತಗೊಳಿಸುವಲ್ಲಿಂದ ಆರಂಭವಾದ ಈ ಚೀನಾ ವಿರೋಧಿ ಮನೋಭಾವ ಇದೀಗ ನ್ಯಾಯಾಲಯಗಳಿಗೂ ವಿಸ್ತರಿಸಿದೆ.

    ಪ್ರಕರಣ ಒಂದರ ವಿಚಾರಣೆ ನಡೆಸುತ್ತಿದ್ದ ಮಧ್ಯಪ್ರದೇಶ ಹೈಕೋರ್ಟ್​ನ ನ್ಯಾಯಮೂರ್ತಿ ಅವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲು ಶ್ಯೂರಿಟಿಯ ಜತೆಗೆ ಆಸ್ಪತ್ರೆಯೊಂದರಲ್ಲಿ ಚೀನಾ ಮೂಲದ್ದಲ್ಲದ ಬೃಹತ್​ ಟಿವಿ ಪರದೆಯೊಂದನ್ನು ಕೊಡಿಸುವಂತೆ ಷರತ್ತು ವಿಧಿಸಿದೆ.

    ಇದನ್ನೂ ಓದಿ: ಚೀನಾದ ಟಿಕ್​ಟಾಕ್ ಜಾಗವನ್ನು ನಮ್ಮ ಬೆಂಗಳೂರಿನ ಚಿಂಗಾರಿ ತುಂಬಿತು…

    ಮಧ್ಯಪ್ರದೇಶದ ದಾಟಿಯಾ ಜಿಲ್ಲೆಯ ಬಡೋನಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ 2020ರ ಫೆಬ್ರವರಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ಇಬ್ಬರು ಆರೋಪಿತರು ಅರ್ಜಿ ಸಲ್ಲಿಸಿದ್ದರು. ಜೂ.26ರಂದು ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶೀಲ್​ ನಾಗು ಅವರಿದ್ದ ಏಕ ಸದಸ್ಯ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 18ರಂದು ಆರೋಪಪಟ್ಟಿ ಸಲ್ಲಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಅವಶ್ಯಕತೆ ಇಲ್ಲ. ಸದ್ಯ ದೇಶಾದ್ಯಂತ ಕೋವಿಡ್​-19 ಪಿಡುಗು ಹಬ್ಬಿದೆ. ಪ್ರಕರಣದ ವಿಚಾರಣೆ ಬೇಗನೆ ಮುಗಿಯುವ ಲಕ್ಷಣಗಳೂ ಕಾಣುತ್ತಿಲ್ಲ. ಹಾಗಾಗಿ ವಿಚಾರಣಾಧೀನ ಬಂಧನ ವಿಸ್ತರಣೆಯ ಅಗತ್ಯವೂ ಇಲ್ಲ. ಆದ್ದರಿಂದ ಇವರಿಬ್ಬರಿಗೂ ಜಾಮೀನು ಮಂಜೂರು ಮಾಡಬಹುದಾಗಿದೆ ಎಂದು ನಿರ್ಧಾರಕ್ಕೆ ಬಂದಿತು.

    ಈ ಹಿನ್ನೆಲೆಯಲ್ಲಿ ತಲಾ 25 ಸಾವಿರ ರೂ. ಶ್ಯೂರಿಟಿಯ ಜತೆಗೆ, ರೆನ್​ಬಸೇರಾದಲ್ಲಿರುವ ಮೊರಾರ್​ನ (ಗ್ವಾಲಿಯರ್​) ಜಿಲ್ಲಾ ಆಸ್ಪತ್ರೆಗೆ 25 ಸಾವಿರ ರೂ. ಮೌಲ್ಯದ ಚೀನಾ ಹೊರತುಪಡಿಸಿ ಭಾರತ ಅಥವಾ ಬೇರಾವುದೇ ದೇಶದಲ್ಲಿ ಉತ್ಪಾದಿಸಲಾಗಿರುವ ಕಪ್ಪು ಬಣ್ಣದ ಎಲ್​ಇಡಿ ಟಿವಿyನ್ನು ಕೊಡಿಸಬೇಕು ಎಂದು ಷರತ್ತುಗಳನ್ನು ವಿಧಿಸಿತು.

    ದೇವರೇ ಕಾಪಾಡಬೇಕು; ಕರೊನಾ ನಿವಾರಣೆ ಮಾನವ ಯತ್ನ ಮೀರಿದ್ದು ಎಂದ ಸಿಎಂ ಉದ್ಧವ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts