More

    ಪಾಕಿಸ್ತಾನದ ಸಹೋದರಿಯಿಂದ ಪ್ರಧಾನಿ ಮೋದಿಗೆ ಬಂತು ರಕ್ಷಾಬಂಧ

    ಅಹಮದಾಬಾದ್​: ಪ್ರಧಾನಿ ನರೇಂದ್ರ ಮೋದಿ ಅವರ ಪಾಕಿಸ್ತಾನದ ಸಹೋದರ ಖಾಮರ್​ ಮೊಹಸಿನ್​ ಶೇಖ್​ ರಕ್ಷಾಬಂಧನ ನಿಮಿತ್ತ ರಾಖಿಯನ್ನು ಕಳುಹಿಸಿಕೊಟ್ಟಿದ್ದಾರೆ. ಕೋವಿಡ್​-19 ಪಿಡುಗಿನ ಹಿನ್ನೆಲೆಯಲ್ಲಿ ಭಾರತಕ್ಕೆ ಬಂದು, ಅವರ ಕೈಗೆ ರಾಖಿ ಕಟ್ಟಲು ಸಾಧ್ಯವಾಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿ, ಅಂಚೆಯ ಮೂಲಕವೇ ರಕ್ಷಾಬಂಧವನ್ನು ಕಳುಹಿಸಿಕೊಟ್ಟಿದ್ದಾರೆ.

    ಪಾಕಿಸ್ತಾನ ಮೂಲದ ಶೇಖ್​, ಭಾರತೀಯನನ್ನು ಮದುವೆಯಾಗಿ ಗುಜರಾತ್​ನ ಅಹಮದಾಬಾದ್​ನಲ್ಲಿ ನೆಲೆಸಿದ್ದಾರೆ. ಭಾರತಕ್ಕೆ ಬಂದಾಗಿನಿಂದಲೂ ಅವರು ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟುವ ಸಂಪ್ರದಾಯವನ್ನು ರೂಢಿಸಿಕೊಂಡಿದ್ದಾರೆ. ಈ ವರ್ಷ ಅವರು ಕಳುಹಿಸಿರುವ ರಾಖಿ 25ನೆಯದ್ದಾಗಿದೆ.

    ನಮಗೆ 30-35 ವರ್ಷದಿಂದ ನರೇಂದ್ರ ಮೋದಿ ಅವರ ಪರಿಚಯವಿದೆ. ನಾನು ದೆಹಲಿಯಲ್ಲಿ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದ. ನಾನು ಪಾಕಿಸ್ತಾನದ ಕರಾಚಿಯಿಂದ ಬಂದವಳು ಎಂಬುದು ಗೊತ್ತಾದ ನಂತರದಲ್ಲಿ ಅವರು ನನ್ನನ್ನು ತಂಗಿ ಎಂದು ಸಂಬೋಧಿಸಿದ್ದರು. ನನಗೆ ಅಣ್ಣ-ತಮ್ಮ ಯಾರೂ ಇಲ್ಲದ್ದರಿಂದ ಅವರನ್ನೇ ನಾನು ಅಣ್ಣ ಎಂದು ಭಾವಿಸಿದ್ದೇನೆ. ಎರಡು-ಮೂರು ವರ್ಷಗಳ ಬಳಿಕ ಮತ್ತೊಮ್ಮೆ ನಾವು ದೆಹಲಿಗೆ ತೆರಳಿ ರಕ್ಷಾಬಂಧನ ಹಬ್ಬದ ದಿನದಂದು ಅವರನ್ನು ಭೇಟಿಯಾಗಿ, ಅವರ ಕೈಗೆ ರಾಖಿ ಕಟ್ಟಿದ್ದೆ ಎಂದು ಶೇಖ್​ ಸ್ಮರಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಸ್ನೇಹಿತನ ಬರ್ತಡೇ ಆಚರಣೆ ಬೆನ್ನಲ್ಲೇ ಬರ್ಬರವಾಗಿ ಕೊಲೆಯಾದ ಯುವಕ

    ಅಂದು ನಾನು ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟುವಾಗ ನೀವು ಆದಷ್ಟು ಬೇಗ ಗುಜರಾತ್​ನ ಸಿಎಂ ಆಗುವಂತೆ ಪ್ರಾರ್ಥಿಸಿರುವುದಾಗಿ ಹೇಳಿದ್ದೆ. ಆದರೆ ಆಗ ಅವರು ನಕ್ಕು ಸುಮ್ಮನಾಗಿದ್ದರು. ಆದರೆ, ಮುಂದೆ ಅವರು ಗುಜರಾತ್​ ಮುಖ್ಯಮಂತ್ರಿಯಾದರು. ಮುಂದಿನ ರಕ್ಷಾಬಂಧನದ ಹಬ್ಬದಂದು ಅವರನ್ನು ಭೇಟಿ ಮಾಡಿದಾಗ, ನನ್ನ ಪ್ರಾರ್ಥನೆ ದೇವರನ್ನು ತಲುಪಿದ್ದಕ್ಕೆ ಸಿಎಂ ಆದಿರಿ ಎಂದು ಹೇಳಿದೆ. ಈಗ ಅವರು ದೇಶದ ಪ್ರಧಾನಿಯಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

    ಕೋವಿಡ್​-19 ಪಿಡುಗು ಇಲ್ಲದೇ ಹೋಗಿದ್ದರೆ, ಸ್ವತಃ ದೆಹಲಿಗೆ ತೆರಳಿ ಸತತ 25ನೇ ವರ್ಷವೂ ನರೇಂದ್ರ ಮೋದಿ ಅವರ ಬಲಗೈಗೆ ಪವಿತ್ರ ದಾರವನ್ನು ಕಟ್ಟಿ, ಶುಭ ಹಾರೈಸಿ ಬರುತ್ತಿದ್ದೆ. ಆದರೆ, ಕೋವಿಡ್​-19 ಪಿಡುಗಿನ ಹಿನ್ನೆಲೆಯಲ್ಲಿ ರಕ್ಷಾಬಂಧವನ್ನು ಕಟ್ಟುವ ಬೆಳ್ಳಿಹಬ್ಬದ ಸಂಭ್ರಮ ಕಡಿಮೆಯಾಗಿದೆ. ಆದರೂ ಅಂಚೆ ಮೂಲಕ ಪವಿತ್ರ ದಾರವನ್ನು ಪ್ರಧಾನಿ ಮೋದಿ ಅವರಿಗೆ ರವಾನಿಸಿ, ದೇವರು ಉತ್ತಮ ಆರೋಗ್ಯ ನಿಮಗೆ ಕರುಣಿಸಲಿ ಎಂದು ಪ್ರಾರ್ಥಿಸಿದ್ದೇನೆ. ನಾನು ಕಳುಹಿಸಿರುವ ರಾಖಿ ಮತ್ತು ಪುಸ್ತಕವನ್ನು ಪ್ರಧಾನಿ ಕಾರ್ಯಾಲಯ ಸ್ವೀಕರಿಸಿದ್ದು ಕಾರ್ಯಾಲಯದ ಸಿಬ್ಬಂದಿ ಅದನ್ನು ಪ್ರಧಾನಿ ಮೋದಿ ಅವರಿಗೆ ತಲುಪಿಸಿದ್ದಾರೆ ಎಂದು ಶೇಖ್​ ಹೇಳಿದರು.

    2 ಕಿ.ಮೀ. ದೂರದಲ್ಲಿ ಆಸ್ಪತ್ರೆ ಇದ್ದರೂ ರಸ್ತೆಯಲ್ಲಿ ನರಳಿ, ನರಳಿ ಸತ್ತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts