More

    ಲಾಕ್​ಡೌನ್​ ನಿಯಮ ಉಲ್ಲಂಘನೆಯನ್ನು ಪ್ರಶ್ನಿಸಿದ್ದಕ್ಕೆ ದುಷ್ಕರ್ಮಿಗಳಿಬ್ಬರಿಂದ ಪೊಲೀಸ್​ ಸಿಬ್ಬಂದಿಗೆ ಚಾಕು ಇರಿತ

    ಭೋಪಾಲ್​​: ಮನೆಯಲ್ಲೇ ಉಳಿಯುವ ಮೂಲಕ ಮಹಾಮಾರಿ ಕರೊನಾ ವೈರಸ್​ ತಡೆಗಟ್ಟಲು ಹೇರಲಾಗಿರುವ ಲಾಕ್​ಡೌನ್​ ನಿಯಮವನ್ನು ಅನುಸರಿಸಿ ಎಂದು ಸಲಹೆ ನೀಡಿದ ಪೊಲೀಸ್​ ಸಿಬ್ಬಂದಿಗೆ ಚಾಕು ಇರಿದಿರುವ ಘಟನೆ ಮಧ್ಯಪ್ರದೇಶ ರಾಜಧಾನಿ ಭೋಪಾಲ್​ನ ಇಟ್ವಾರಾದಲ್ಲಿ ನಡೆದಿದೆ.

    ತಲೈಯಾ ಪೊಲೀಸ್​ ಠಾಣೆಯ ಸಿಬ್ಬಂದಿ ಮೇಲೆ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ದಾಳಿ ನಡೆಸಿದ್ದಾರೆ. ಓರ್ವ ಸಿಬ್ಬಂದಿ ಕೈಗೆ ಹಾಗೂ ಮತ್ತೊರ್ವ ಸಿಬ್ಬಂದಿಯ ಭುಜಕ್ಕೆ ಗಂಭೀರವಾದ ಗಾಯಗಳಾಗಿವೆ. ಸಿಬ್ಬಂದಿಯನ್ನು ಲಕ್ಷ್ಮಣ್​ ಯಾದವ್​ ಮತ್ತು ಸರಿಶ್​ ಕುಮಾರ್​ ಎಂದು ಗುರುತಿಸಲಾಗಿದೆ.

    ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸಿಎಂ ಶಿವರಾಜ್​ ಸಿಂಗ್​​ ಚೌಹಾಣ್, ದುಷ್ಕರ್ಮಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ(ಎನ್​ಎಸ್​ಎ) ಪ್ರಕರಣ ದಾಖಲಿಸುವಂತೆ ಇಂದು ಬೆಳಗ್ಗೆ ಆದೇಶಿಸಿದ್ದಾರೆ.​

    ಅರಾಜಕತೆ ಸೃಷ್ಟಿಸುವಲ್ಲಿ ನಿರತರಾಗಿರುವ ಗೂಂಡಾಗಳಿಗೆ ಪಾಠ ಕಲಿಸಲಾಗುವುದು. ಈ ಗೂಂಡಾಗಳು ಎನ್​ಎಸ್​ಎ ಜತೆ ವ್ಯವಹರಿಸಬೇಕಾಗುತ್ತದೆ ಎಂದು ದುಷ್ಕರ್ಮಿಗಳ ವಿರುದ್ಧ ಚೌಹಾಣ್​ ಟ್ವೀಟ್​ ಮೂಲಕ ಕಿಡಿಕಾರಿದ್ದಾರೆ.

    ಘಟನೆ ಹಿನ್ನೆಲೆ ಏನು?
    ತಲೈಯಾ ಠಾಣೆಯ ಪೊಲೀಸ್​ ಅಧಿಕಾರಿ ಡಿ.ಪಿ. ಸಿಂಗ್​ ಪ್ರಕಾರ ಸುಮಾರು 20 ಸ್ಥಳೀಯರು ಇಟ್ವಾರಾ ಮಸೀದಿ ಸಮೀಪ ಸೋಮವಾರ ಸಂಜೆ ಓಡಾಡುತ್ತಿದ್ದರು. ಈ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸ್​ ಸಿಬ್ಬಂದಿ ಮನೆಗೆ ಮರಳುವಂತೆ ಹೇಳಿದ್ದಾರೆ. ಗುಂಪಿನಲ್ಲಿದ್ದ ಇಬ್ಬರು ದುಷ್ಕರ್ಮಿಗಳಾದ ಶಾಹೀದ್​ ಕಬೂತರ್​ ಮತ್ತು ಮಹ್ಸಿನ್​ ಕಚೋಡಿ ತಮ್ಮ ಸಹವರ್ತಿಗಳೊಂದಿಗೆ ಚಾಕುವಿನಿಂದ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ​

    ಆರೋಗಳಿಬ್ಬರು ಈ ಹಿಂದೆಯೂ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಆರೋಪಿಗಳ ವಿರುದ್ಧ ಎನ್​ಎಸ್​ಐ ಹಾಗೂ ಕೊಲೆ ಯತ್ನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. (ಏಜೆನ್ಸೀಸ್​)

    ಹಾಟ್​ಸ್ಪಾಟ್​ ಭಿಲ್ವಾರಾದಲ್ಲಿ ಕರೊನಾ ಮಣಿಸಿದ್ದು ಹೇಗೆ ಗೊತ್ತಾ?: ಇತರ ರಾಜ್ಯಗಳಿಗೂ ಮಾದರಿಯಾದ ಸ್ಥಳೀಯಾಡಳಿತ

    ರೋಗಿಗಾಗಿ ಮನಮಿಡಿದು 540ಕಿ.ಮೀ ಪ್ರಯಾಣ ಮಾಡಿದ ವೈದ್ಯ: ಜಾಲತಾಣದಲ್ಲಿ ಭಾರಿ ಶ್ಲಾಘನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts