More

    ಅಬ್ಬಬ್ಬಾ ಏನ್​ ಟ್ಯಾಲೆಂಟ್​ ಗುರು! ಈ ಭಿಕ್ಷುಕನ ಪ್ರತಿಭೆಯ ಬಗ್ಗೆ ತಿಳಿದ್ರೆ ಹುಬ್ಬೇರೋದು ಗ್ಯಾರೆಂಟಿ

    ಭೋಪಾಲ್​: ಭಿಕ್ಷುಕರನ್ನು ಯಾವುದೇ ಕೆಲಸಕ್ಕೆ ಬಾರದವರು ಅಂತಾ ಬಹುತೇಕರು ತೀರ್ಮಾನಿಸಿರುತ್ತಾರೆ. ಕೇವಲ ಭಿಕ್ಷೆ ಬೇಡುವುದಕ್ಕಷ್ಟೇ ಲಾಯಕ್ಕೂ ಅಂದುಕೊಂಡಿರುತ್ತಾರೆ. ಆದರೆ, ಅವರಲ್ಲೂ ಪ್ರತಿಭೆ ಇರುತ್ತದೆ ಎಂಬುದು ಆಗಾಗ ಸಾಬೀತಾಗಿರುತ್ತದೆ. ಹಿಂದೊಮ್ಮೆ ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ರಾಣು ಮಂಡಲ್​ ಸಿಂಗರ್​ ಆಗಿ ಮಿಂಚಿದ್ದು ನಿಮಗೆಲ್ಲ ತಿಳಿದೇ ಇದೆ. ಇದೀಗ ಮತ್ತೊಂದು ಪ್ರತಿಭೆ ಬೆಳಕಿಗೆ ಬಂದಿದೆ.

    ಯಾರಾದರೂ ನಿಮ್ಮ ಬಳಿ ಟೈಂ ಕೇಳಿದರೆ ನೀವು ಮೊಬೈಲ್​ ಅಥವಾ ವಾಚ್​ ನೋಡಿ ಟೈಂ ಎಷ್ಟು ಅಂತಾ ಹೇಳುತ್ತೀರಿ. ಆದರೆ, ಈ ಭಿಕ್ಷುಕನ ಬಳಿ ಟೈಂ ಕೇಳಿದರೆ ವಾಚ್​ ಆಗಲಿ ಅಥವಾ ಮೊಬೈಲ್​ ಆಗಲಿ ನೋಡದೇ ನಿಖರವಾಗಿ ಸಮಯ ಹೇಳುತ್ತಾನೆ. ಮೊದಲೇ ಆತ ಭಿಕ್ಷುಕನಾಗಿರುವುದರಿಂದ ಆತನ ಬಳಿ ಮೊಬೈಲ್​ ಅಥವಾ ವಾಚ್​ ಎಲ್ಲಿ ಬರುತ್ತದೆ ಹೇಳಿ? ಆತ ಟೈಂ ಹೇಳಿದಾಗ ಮೊಬೈಲ್​ ಅಥವಾ ವಾಚ್​ ನೋಡಿದರೆ ಪಕ್ಕಾ ಸರಿಯಾಗಿರುತ್ತದೆ. ಒಂದು ಸೆಕೆಂಡ್​ ಕೂಡ ವ್ಯತ್ಯಾಸ ಇರುವುದಿಲ್ಲ.

    ಪ್ರತಿಭಾವಂತ ಭಿಕ್ಷುಕನ ಹೆಸರು ಸುಖಲಾಲ್​ ಎಂದು. ಈತ ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯ ನೇಪಾನಗರದ ನಿವಾಸಿ. ಆತನ ಬಗ್ಗೆ ತಿಳಿದವರೆಲ್ಲ ಆತನನ್ನು ‘ನಡೆದಾಡುವ ಗಡಿಯಾರ’ ಎಂದೇ ಕರೆಯುತ್ತಾರೆ. ಸುಖಲಾಲ್ ಹೇಳುವ ಸಮಯಕ್ಕೂ ಗಡಿಯಾರದ ಸಮಯಕ್ಕೂ ವ್ಯತ್ಯಾಸವಿಲ್ಲ ಎನ್ನುತ್ತಾರೆ ಸ್ಥಳೀಯರು.

    ತನ್ನಲ್ಲಿರುವ ಪ್ರತಿಭೆಯ ಬಗ್ಗೆ ಸುಖಲಾಲ್ ಏನು ಹೇಳುತ್ತಾರೆ ಅಂದರೆ, ಅದು ಪ್ರಕೃತಿಯ ಗಡಿಯಾರವಂತೆ. ಭಿಕ್ಷಾಟನೆಯಿಂದ ಒಂಟಿಯಾಗಿ ಬದುಕುವ ಸುಖಲಾಲ್, ರೈಲು ನಿಲ್ದಾಣ, ಬಸ್ ನಿಲ್ದಾಣಗಳಂತಹ ಜನನಿಬಿಡ ಪ್ರದೇಶಗಳಲ್ಲಿ ಭಿಕ್ಷುಕನಾಗಿ ಜೀವನ ಸಾಗಿಸುತ್ತಿದ್ದಾರೆ. (ಏಜೆನ್ಸೀಸ್​)

    ನಿನ್ನೆಯಷ್ಟೇ ನಿಶ್ಚಿತಾರ್ಥವಾಗಿದ್ದ ಯುವತಿ ಹಾಡಹಗಲೇ ಕಿಡ್ನಾಪ್: ಸ್ಥಳೀಯರಲ್ಲಿ ಹೆಚ್ಚಾದ ಆತಂಕ

    ಕೆ.ಜೆ. ಜಾರ್ಜ್​ಗೆ ಆದ ರೀತಿ ನನಗೂ ಆಗಬೇಕು, ನಾನು 40 ವರ್ಷ ಪಾರ್ಟಿ ಕಟ್ಟಿ ಬೆಳೆಸಿದ್ದೇನೆ: ಕೆ.ಎಸ್​. ಈಶ್ವರಪ್ಪ

    ನವಜಾತ ಶಿಶುವನ್ನು ಬಾಕ್ಸ್​ನಲ್ಲಿ ಹಾಕಿ ರಸ್ತೆ ಬದಿ ಬಿಟ್ಟು ಹೋದ ಪಾಲಕರು! ಮುಂದೇನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts