More

    ಹೆಂಡತಿ ಬೈದರೆ ಏನ್ ಮಾಡಬೇಕು? ಸುಖ ಸಂಸಾರಕ್ಕೆ ಓವೈಸಿ ಸೂತ್ರ!

    ತೆಲಂಗಾಣ: ಸಂಸದ ಸಂಸದ ಅಸಾದುದ್ದೀನ್‌ ಓವೈಸಿ ಯಾವಾಗಲೂ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಿರುತ್ತಾರೆ. ಅದರಲ್ಲೂ, ಇಸ್ಲಾಂ ಧರ್ಮದ ಪ್ರವರ್ತಕರಂತೆ ಅವರು ಮಾತನಾಡುತ್ತಾರೆ. ಆದರೆ, ಈ ಬಾರಿ ಓವೈಸಿ ಅವರು ಕಾರ್ಯಕ್ರಮದಲ್ಲಿ ಗಂಡ-ಹೆಂಡತಿ ಸಂಬಂಧದ ಬಗ್ಗೆ ಮಾತನಾಡುವ ಮೂಲಕ ಅವರು ಅಚ್ಚರಿ ಮೂಡಿಸಿದ್ದಾರೆ. “ಹೆಂಡತಿ ಬೈದರೆ ಸುಮ್ಮನಿರಬೇಕು, ಆಕೆಯ ಮೇಲೆ ದರ್ಪ ತೋರಬಾರದು ಪುರುಷರಿಗೆ ಸಲಹೆ ನೀಡಿದ್ದಾರೆ.

    ಇದನ್ನೂ ಓದಿ:ಇದು ಚೀಲ ಅಲ್ಲ, ಶೀಲದ ವಿಚಾರ…ಪತಿವ್ರತೆ ಅಂತ ಪ್ರೂವ್ ಮಾಡೋಕೆ ಹೊರಟುಬಿಟ್ಟಿದ್ದಳು: ಹೀಗೆಂದಿದ್ಯಾಕೆ ಗುರುಪ್ರಸಾದ್?

    ಎಐಎಂಐಎಂ ಪಕ್ಷದ ಮುಖ್ಯಸ್ಥರೂ ಆಗಿರುವ ಓವೈಸಿ, ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಈ ಸಂದೇಶ ರವಾನಿಸಿದ್ದಾರೆ. ನಿಮ್ಮ ಪತ್ನಿ ಜೊತೆ ನಯ ವಿನಯವಾಗಿ ವರ್ತಿಸಿ ಎಂದು ಅವರು ಬುದ್ದಿಮಾತು ಹೇಳಿದ್ದಾರೆ.
    ನಾನು ಈ ಮಾತನ್ನು ಹಲವು ಬಾರಿ ಹೇಳಿದ್ದೇನೆ.

    ಹೆಂಡತಿಯಾದವಳು ಗಂಡನ ಬಟ್ಟೆಗಳನ್ನು ತೊಳೆಯಬೇಕು, ಅಡುಗೆ ಮಾಡಿ ಬಡಿಸಬೇಕು ಅಥವಾ ನಿಮ್ಮ ತಲೆ ಸವರಬೇಕು ಎಂದು ಎಲ್ಲಿಯೂ ಕುರಾನ್‌ನಲ್ಲಿ ಹೇಳಿಲ್ಲ. ಹಾಗಾಗಿ, ಗಂಡಂದಿರು ತಮ್ಮ ಹೆಂಡತಿಯರ ಮೇಲೆ ಯಾವಾಗಲೂ ದರ್ಪ ತೋರಬಾರದು. ಅವರ ಮೇಲೆ ದೌರ್ಜನ್ಯ ಎಸಗಬಾರದು ಎಂದು ಕಾರ್ಯಕರ್ತರಿಗೆ ಅಸಾದುದ್ದೀನ್‌ ಓವೈಸಿ ಕಿವಿಮಾತು ಹೇಳಿದರು.

    ಅಡುಗೆ ಚನ್ನಾಗಿಲ್ಲ ಎಂದು ದೂರುತ್ತಾರೆ. ಆದರೆ ನನ್ನ ಸಹೋದರರೇ ಕುರಾನ್‌ನಲ್ಲಿ ಹೆಂಡತಿ ಅಡುಗೆ ಮಾಡಬೇಕು ಎಂದು ಎಲ್ಲಿಯೂ ಹೇಳಿಲ್ಲ. ಇನ್ನು ಕೆಲವರು ತಮ್ಮ ಹೆಂಡತಿ ಮೇಲೆ ಕ್ರೌರ್ಯ ಪ್ರದರ್ಶನ ಮಾಡುತ್ತಾರೆ. ಹೆಂಡತಿ ಮೇಲೆ ಹಲ್ಲೆ ಮಾಡುತ್ತಾರೆ. ಗಂಡ ದುಡಿಯುವ ಸಂಬಳದಲ್ಲಿ ಹೆಂಡತಿಗೆ ಪಾಲಿದೆ. ಆದರೆ, ಹೆಂಡತಿ ದುಡಿಯುವ ದುಡ್ಡಿನಲ್ಲಿ ಗಂಡನಿಗೆ ಯಾವುದೇ ಪಾಲು ಇಲ್ಲ. ತುಂಬ ಜನ ಹೆಂಡತಿ ಅಡುಗೆ ಮಾಡಿಲ್ಲ ಎಂದರೆ, ಸರಿಯಾಗಿ ಅಡುಗೆ ಮಾಡಿಲ್ಲ ಎಂದರೆ ಬೈಯುತ್ತಾರೆ ಇದು ಸರಿಯಲ್ಲ ಎಂದು ಹೇಳಿದ್ದಾರೆ.

    ಕೆಲವರು ತಮ್ಮ ಪತ್ನಿ ಪ್ರತಿವಾದ ಮಾಡಿದರೆ ಮಹಾಪರಾಧ ಎಂದು ಭಾವಿಸುತ್ತಾರೆ. ತಡ ರಾತ್ರಿವರೆಗೂ ಗೆಳೆಯರ ಜೊತೆ ಹರಟೆ ಹೊಡೆಯುತ್ತಾ ಕುಳಿತಿರುತ್ತಾರೆ. ಆದರೆ ಮನೆಯಲ್ಲಿ ತಾಯಿ ಹಾಗೂ ಹೆಂಡತಿ ಕಾಯುತ್ತಿದ್ದಾರೆ ಅನ್ನೋ ಅರಿವೇ ಇರೋದಿಲ್ಲ. ಈ ವಿಚಾರಗಳನ್ನು ನನ್ನ ಸಹೋದರರಾದ ನೀವು ಅರಿತುಕೊಳ್ಳಬೇಕು ಎಂದು ಓವೈಸಿ ತಿಳಿ ಹೇಳಿದರು.

    ನಟ ದರ್ಶನ್ ​’Devil’ ಚಿತ್ರದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ! ಮಿಲನ ಪ್ರಕಾಶ್​ ಹೀಗಂದಿದ್ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts