More

    ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಯ ಸಹಾಯಕ್ಕೆ ನಿಂತ ಸಂಸದ ಎ.ನಾರಾಯಣಸ್ವಾಮಿ

    ಆನೇಕಲ್: ಕರೊನಾ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್​ಡೌನ್​ ಜಾರಿಗೊಳಿಸಿದ್ದು, ಇದರಿಂದಾಗಿ ಅನೇಕರಿಗೆ ಸಮಸ್ಯೆಯುಂಟಾಗಿದೆ. ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರೋಗಿಯೊಬ್ಬ ಔಷಧಕ್ಕಾಗಿ ಪರದಾಡುತ್ತಿದ್ದಾಗ ಲೋಕಸಭಾ ಸಂಸದರೇ ರೋಗಿಯ ಬಳಿ ಹೋಗಿ ಔಷಧ ತಲುಪಿಸಿರುವ ಘಟನೆ ಆನೇಕಲ್​ನಲ್ಲಿ ನಡೆದಿದೆ.

    ಹಿರಿಯೂರು ತಾಲೂಕು ಮದ್ದನಕುಂಟೆ ಗ್ರಾಮದ ಚಂದ್ರಪ್ಪ ಇತ್ತೀಚೆಗೆ ಆಪರೇಷನ್​ ಮಾಡಿಸಿಕೊಂಡಿದ್ದರು. ಆ ಹಿನ್ನೆಲೆಯಲ್ಲಿ ಅವರಿಗೆ ಕಣ್ಣಿನ ಡ್ರಾಪ್ಸ್ ಮತ್ತು ಮಾತ್ರೆಗಳು​ ಬೇಕಾಗಿತ್ತು. ಔಷಧವನ್ನು ಆನೇಕಲ್ಲಿನ ನಾರಾಯಣ ನೇತ್ರಾಲಯದಿಂದ ಹಿರಿಯೂರಿಗೆ ಕಳುಹಿಸಬೇಕಿತ್ತು. ಆದರೆ ಲಾಕ್​ಡೌನ್​ ಹಿನ್ನೆಲೆಯಲ್ಲಿ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದ್ದರಿಂದಾಗಿ ಔಷಧ ತರಿಸಿಕೊಳ್ಳುವುದು ಕಷ್ಟವಾಗಿತ್ತು.

    ಚಂದ್ರಪ್ಪ ಅವರ ಮಗ ಮುರಳಿ ಆನೇಕಲ್ ತಾಲೂಕಿನಲ್ಲಿ ಕೆಲಸ ಮಾಡುತ್ತಿದ್ದ. ಕಣ್ಣಿಗೆ ಹಾಕುವ ಔಷಧಿಯನ್ನು ಕಳುಹಿಸಲು ತಂದೆಗೆ ಕಳುಹಿಸಿಕೊಡುವುದಕ್ಕಾಗಿ ಕಳೆದ ಎರಡು ಮೂರು ದಿನಗಳಿಂದ ಪರದಾಡಿದ್ದ. ಬುಧವಾರ ರಾತ್ರಿ ಈ ವಿಚಾರದಲ್ಲಿ ಚಿತ್ರದುರ್ಗ ಲೋಕಸಭಾ ಸಂಸದ ಎ. ನಾರಾಯಣಸ್ವಾಮಿ ಅವರನ್ನು ಸಂಪರ್ಕ ಮಾಡಿದ್ದರು. ಸಂಸದರು ಗುರುವಾರ ಬೆಳಗ್ಗೆ ಚಿತ್ರದುರ್ಗಕ್ಕೆ ಹೋಗುವುದಿದ್ದು ಆ ವೇಳೆ ಔಷಧ ಸಂಗ್ರಹಿಸಿ ಅದನ್ನು ಚಂದ್ರಪ್ಪನಿಗೆ ಮುಟ್ಟಿಸುವುದಾಗಿ ತಿಳಿಸಿದ್ದರು.

    ಆದರೆ ಇಂದು ಬೆಳಿಗ್ಗೆ ಮುರಳಿ ಔಷಧಿಯನ್ನು ಸಂಸದರಿಗೆ ತಲುಪಿಸುವುದು ವಿಳಂಬ ಆಗಿತ್ತು. ಅಷ್ಟೊತ್ತಿಗಾಗಲೇ ನಾರಾಯಣಸ್ವಾಮಿ ಮಾಗಡಿಯಿಂದ ಮುಂದೆ ಚಿತ್ರದುರ್ಗಕ್ಕೆ ತೆರಳುತ್ತಿದ್ದರು. ಮಾಗಡಿಯಿಂದ ಮುಂದೆ ಹೋಗುತ್ತಿದ್ದಾಗ ಮುರುಳಿ ಮತ್ತೆ ಕರೆ ಮಾಡಿದ್ದಾನೆ. ಔಷಧವನ್ನು ಅರ್ಜೆಂಟಾಗಿ ಕಳುಹಿಸಬೇಕಿತ್ತು ಎಂದು ಕೇಳಿಕೊಂಡಿದ್ದಾನೆ. ಅದನ್ನು ಕೇಳಿದ ಸಂಸದರು ತಕ್ಷಣ ಮಾಗಡಿಯಿಂದ ವಾಪಸ್ ಬಂದಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ನೈಸ್ ರಸ್ತೆ ಬಳಿ ಬಂದು ಔಷಧವನ್ನು ಮುರುಳಿಯಿಂದ ಪಡೆದಿದ್ದಾರೆ. ಅದಾದ ನಂತರ ಹಿರಿಯೂರಿಗೆ ಹೋಗಿ ಸ್ವತಃ ತಾವೇ ರೋಗಿಯ ಕೈಗೆ ಔಷಧಿ ತಲುಪಿಸಿದ್ದಾರೆ.

    ಔಷಧಕ್ಕಾಗಿ ಪರದಾಡುತ್ತಿದ್ದ ತಂದೆಗೆ ಔಷಧ ತಲುಪಿಸಿದ ಸಂಸದರಿಗೆ ಮುರಳಿ ರಸ್ತೆಯಲ್ಲೇ ಕೈ ಮುಗಿದು ಧನ್ಯವಾದ ತಿಳಿಸಿದ್ದಾನೆ.

    ನರ್ಸ್​ ಕೆನ್ನೆಗೆ ಹೊಡೆದ ವೈರಲ್​ ವಿಡಿಯೋದಲ್ಲಿದ್ದ ಡಾಕ್ಟರ್​ ಶವ ಪತ್ತೆ! ಕುಟುಂಬದವರು ಹಾಗೆ ಮಾಡಿದ್ದಾದರೂ ಏಕೆ?

    ಕರೊನಾ ಎಫೆಕ್ಟ್​: ಅವನ ಮದುವೆಗೆ ಅವನೇ ಓಲಗದವ! ವಿಡಿಯೋ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts