More

    ಮಳೆ ಹುಯ್ದ ರಸ್ತೆಯಲ್ಲಿ ಹೊಸತೊಂದು ಸವಾಲು !

    ಬೆಂಗಳೂರು : ಬೆಂಗಳೂರಿನಲ್ಲಿ ಇಂದು ಜಿಟಿ ಜಿಟಿ ಮಳೆ ಹುಯ್ದ ಕಾರಣ ವಾಹನ ಸವಾರರಿಗೆ ವಿನೂತನ ಸಮಸ್ಯೆಯೊಂದು ಎದುರಾಯಿತು. ಸಂಜೆಯ ವೇಳೆಗೆ ಮಳೆ ನಿಂತಿತು ಎಂದು ಮನೆ ಕಡೆಗೆ ವೇಗವಾಗಿ ಹೊರಟ ಹಲವು ದ್ವಿಚಕ್ರ ವಾಹನಗಳು ರಸ್ತೆಯ ಮಧ್ಯೆ ಸ್ಕಿಡ್​ ಆಗಿ ಬಿದ್ದ ಪ್ರಸಂಗ ಉಂಟಾಯಿತು.

    ಮಳೆ ಸುರಿದ ಪರಿಣಾಮ ನಗರದ ಕೆ.ಜಿ.ರಸ್ತೆಯಲ್ಲಿ ಕಂದಾಯ ಭವನದ ಮುಂಭಾಗದಲ್ಲಿರುವ ಮರಗಳಿಂದ ಕಾರ್ಕ್ ಬೀಜದ ಕಾಯಿಗಳು ರಸ್ತೆಗೆ ಉದುರಿದವು. ರಸ್ತೆಯ ತುಂಬಾ ಬಿದ್ದ ಈ ಕಾಯಿಗಳು ನೀರಿನೊಂದಿಗೆ ಸೇರಿ, ಶ್ಯಾಂಪೂ ರೀತಿಯಲ್ಲಿ ನೊರೆ ಬರುವಂತಾಯಿತು. ಇದರಿಂದ ಜಾರಿಕೆ ತೋರಿ, ಹಲವು ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬೀಳಲು ಆರಂಭಿಸಿದವು.

    ಇದನ್ನೂ ಓದಿ: ಗದಗನಲ್ಲಿ ಆತ್ಮಹತ್ಯೆಗೆ ಶರಣಾದ ಬಿಎಂಟಿಸಿ ಬಸ್ ಚಾಲಕ

    ಈ ಸಮಸ್ಯೆಯನ್ನು ಅರಿತ ಹಲಸೂರು ಗೇಟ್ ಪೊಲೀಸರು ಬಿದ್ದ ಸವಾರರಿಗೆ ವಾಹನ ಎತ್ತಿ ಕೊಟ್ಟು ಮುಂದಕ್ಕೆ ಹೋಗಲು ಸಹಾಯ ಮಾಡಿದರು. ಜೊತೆಗೆ, ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ ನಿಧಾನಗತಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಹಲವು ಪೊಲೀಸ್ ಸಿಬ್ಬಂದಿ ರಸ್ತೆಯಲ್ಲೇ ಬೀಡು ಬಿಟ್ಟು ವಾಹನ ಸವಾರರಿಗೆ ನಿಧಾನವಾಗಿ ವಾಹನ ಚಲಾಯಿಸುವಂತೆ ಸೂಚಿಸಿದರು.

    ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷೆ ಕತೆ ಏನು ? ಶಿಕ್ಷಣ ಸಚಿವ ಸುರೇಶ್​​ಕುಮಾರ್ ಹೇಳಿದ್ದು ಹೀಗೆ…

    ಕರೊನಾ ಲಸಿಕೆಯ ಮೇಲೂ ಕಳ್ಳರ ಕಣ್ಣು ? ಆಸ್ಪತ್ರೆಯಿಂದ 32 ಕೋವಾಕ್ಸಿನ್ ವಯಲ್​ಗಳು ಕಾಣೆ !

    ಸಿಬಿಎಸ್​ಇ : 12 ನೇ ತರಗತಿ ಪರೀಕ್ಷೆ ಮುಂದಕ್ಕೆ, 10ನೇ ತರಗತಿ ಪರೀಕ್ಷೆ ರದ್ದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts