More

    ‘ವಿಕಾಸ್​ ದುಬೆ ಇದ್ದಿದ್ದು ಬಿಜೆಪಿಯಲ್ಲಲ್ಲ..ಅವನಿದ್ದಿದ್ದು.. ‘ ತಾಯಿ ಸರಳಾದೇವಿ ಬಾಯಿಬಿಟ್ಟ ಶಾಕಿಂಗ್​ ಸತ್ಯ ಇದು…

    ಲಖನೌ: ಗ್ಯಾಂಗ್​ಸ್ಟರ್​ ವಿಕಾಸ್ ದುಬೆ ಇಂದು ಬಂಧಿತನಾಗಿದ್ದಾನೆ. ಅದರ ಬೆನ್ನಲ್ಲೇ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವನ ತಾಯಿ ಒಂದು ಶಾಕಿಂಗ್​ ಸತ್ಯ ಹೇಳಿದ್ದಾರೆ.

    ಅಂದು 8 ಪೊಲೀಸರನ್ನು ಹತ್ಯೆ ಮಾಡಿದ್ದ ವಿಕಾಸ್​ ದುಬೆ ಬಗ್ಗೆ ತಾಯಿ ಸರಳಾದೇವಿ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ನನ್ನ ಮಗ ಮಾಡಿದ್ದು ಬಹುದೊಡ್ಡ ಅಪರಾಧ. ಆತ ಶರಣಾಗಬೇಕು. ಇಲ್ಲದಿದ್ದರೆ ಕೊಂದು ಬಿಡಿ ಎಂದು ಪೊಲೀಸರಿಗೇ ಹೇಳಿದ್ದರು. ಈಗ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಅವನನ್ನು ಪೊಲೀಸರು ಬಂಧಿಸಿದ್ದಾರೆ.

    ಬಿಜೆಪಿಯ ಕೆಲವು ಮುಖಂಡರೊಂದಿಗೆ ನನಗೆ ನಂಟಿತ್ತು. ಇಬ್ಬರು ಶಾಸಕರು ನನಗೆ ತುಂಬ ಸಹಾಯ ಮಾಡಿದ್ದಾರೆ ಎಂದು ವಿಕಾಸ್​ ದುಬೆ 2017ರಲ್ಲಿ ಹೇಳಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಈಗ ಸಿಕ್ಕಾಪಟೆ ವೈರಲ್​ ಆಗಿತ್ತು. ಆದರೆ ಆತನ ತಾಯಿ ಈಗ ಬೇರೆಯದೇ ಸತ್ಯ ಹೇಳಿದ್ದಾರೆ. ಇದನ್ನೂ ಓದಿ: ಭಾರತ ಈಗಾಗಲೇ ಆರ್ಥಿಕ ಚೇತರಿಕೆಯ ಹಸಿರು ಚಿಗುರು ನೋಡುತ್ತಿದೆ: ಪ್ರಧಾನಿ ಮೋದಿ

    ಅಖಿಲೇಶ್​ ಯಾದವ್​ ನೇತೃತ್ವದ ಸಮಾಜವಾದಿ ಪಾರ್ಟಿಯೊಂದಿಗೆ ಅಖಿಲೇಶ್​ ಯಾದವ್​ಗೆ ನಂಟಿತ್ತು. ಆ ಪಕ್ಷದೊಂದಿಗೆ ಅವನು ಗುರುತಿಸಿಕೊಂಡಿದ್ದ ಎಂದು ಸರಳಾದೇವಿ ಹೇಳಿದ್ದಾರೆ.

    ವಿಕಾಸ್​ ಬಂಧನವಾಗಿದೆ. ಉಳಿದಿದ್ದೆಲ್ಲ ಸರ್ಕಾರಕ್ಕೆ ಬಿಟ್ಟಿದ್ದು. ಉತ್ತರ ಪ್ರದೇಶ ಸರ್ಕಾರ ತುಂಬ ಬಲಿಷ್ಠವಾಗಿದೆ. ವಿಕಾಸ್​ ದುಬೆ ವಿಷಯದಲ್ಲಿ ಸರ್ಕಾರವೇ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ ಎಂದಿದ್ದಾರೆ.
    ವಿಕಾಸ್​ ಈ ಹಿಂದೆ ಯಾವ ಪಕ್ಷದೊಂದಿಗೆ ಇದ್ದ ಗೊತ್ತಿಲ್ಲ. ಆದರೆ ಈಗಂತೂ ಸಮಾಜವಾದಿ ಪಕ್ಷದೊಂದಿಗೆ ಸಂಪರ್ಕ ಹೊಂದಿದ್ದ ಎಂದು ಸರಳಾ ದೇವಿ ಹೇಳಿದ್ದಾರೆ. ಇದನ್ನೂ ಓದಿ:ವಯಸ್ಸಾದ ಮಹಿಳೆ ಎಂದೂ ನೋಡದೆ ಫೇಸ್​ಬುಕ್​ ಫ್ರೆಂಡ್ ಹೀಗಾ ವಂಚಿಸೋದಾ!

    ಆದರೆ ಸಮಾಜವಾದಿ ಪಕ್ಷದ ವಕ್ತಾರ ಸರಳಾದೇವಿಯವರ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ. ವಿಕಾಸ್​ ದುಬೆ ನಮ್ಮ ಪಕ್ಷದ ಸದಸ್ಯನಾಗಿರಲಿಲ್ಲ. ನಮ್ಮ ಪಕ್ಷದೊಂದಿಗೆ ಯಾವುದೇ ನಂಟೂ ಇರಲಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ವಿಕಾಸ್​ ದುಬೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

    ಇನ್ನು ಸಮಾಜವಾದಿ ಪಕ್ಷದ ಅಖಿಲೇಶ್​ ಯಾದವ್​ ಕೂಡ, ವಿಕಾಸ್​ ದುಬೆಯ ಕಾಲ್ ರೆಕಾರ್ಡ್​​ನ್ನು ಬಹಿರಂಗ ಪಡಿಸಲು ಒತ್ತಾಯಿಸಿದ್ದಾರೆ. (ಏಜೆನ್ಸೀಸ್)

    ‘ಗ್ಯಾಂಗ್​​ಸ್ಟರ್​ ವಿಕಾಸ್​ ದುಬೆ ಬಂಧನದ ಬಗ್ಗೆಯೇ ಅನುಮಾನ…’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts