More

    ಕುಟುಂಬ ವ್ಯವಸ್ಥೆ ಮೂಲಾಧಾರ ತಾಯಿ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಭಾರತೀಯ ಚಿಂತನೆಯಲ್ಲಿ ಮಾತೃತ್ವದ ಪರಿಕಲ್ಪನೆ ಅಪರಿಮಿತವಾದದ್ದು. ಭಾರತದ ಸಂಸತಿಯಲ್ಲಿ ಮಾತೃತ್ವವೆಂದರೆ ಅತ್ಯಂತ ವಿಶಾಲಾರ್ಥ ಹೊಂದಿದೆ ಎಂದು ಧಾರವಾಡದ ಸಾಲ್ಯ ಪ್ರತಿಷ್ಠಾನದ ಸಂಚಾಲಕಿ ಮೃಣಾಲ ಜೋಶಿ ಅಭಿಪ್ರಾಯಪಟ್ಟರು.
    ನಗರದ ಸಾಹಿತ್ಯಿಕ ಸಂಟನೆ ಅನ್ವೇಷಣ ಕೂಟ ವತಿಯಿಂದ ಇಲ್ಲಿನ ಸಾಧನಕೇರಿಯ ಚೈತ್ರದ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಭಾರತೀಯ ಸಂಸತಿಯಲ್ಲಿ ಮಾತೃತ್ವದ ಕಲ್ಪನೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಹೆತ್ತ ತಾಯಿ, ಪ್ರಕೃತಿ ಮಾತೆ, ಭೂತಾಯಿ, ಮಾತೃಭೂಮಿ, ನದಿಗಳು, ಗೋಮಾತೆ, ಆಹಾರ, ಸಂಸ್ಕಾರ, ಶಿಕ್ಷಣ, ಮಾರ್ಗದರ್ಶನ ನೀಡಿದವರೂ ಮಾತೃತ್ವದ ಪರಿಕಲ್ಪನೆ ವಲಯದಲ್ಲಿ ಬರುತ್ತಾರೆ. ಶಕ್ತಿ, ಭಕ್ತಿ, ಕ್ಷಮೆ, ಸಹನೆ, ಸಂಯಮ, ಸಾತ್ವಿಕತೆ, ನೈತಿಕತೆ, ಮೌಲ್ಯಗಳ ಸಾಕಾರಮೂತಿರ್ಯೇ ತಾಯಿ. ಭಾರತದೇಶದ ಅಡಿಪಾಯವಾದ ಕುಟುಂಬ ವ್ಯವಸ್ಥೆಯ ಮೂಲಾಧಾರವೇ ತಾಯಿ ಎಂದರು.
    ಅಧ್ಯಕ್ಷತೆ ವಹಿಸಿದ್ದ ಹಿರಿಯ ಚಿಂತಕ ಡಾ. ಶ್ರೀರಾಮ ಭಟ್ಟ ಮಾತನಾಡಿ, ಗ್ರೀಕ್​ ಸಂಸತಿಯಲ್ಲಿ ಮಾತ್ರ ಕೆಲಮಟ್ಟಿಗೆ ಇಂತಹ ಮಾತೃತ್ವದ ಪರಿಕಲ್ಪನೆ ಕಂಡುಬರುತ್ತಿವೆ. ಸಹಸ್ರಾರು ವರ್ಷಗಳಿಂದ ಇಂತಹ ಕಲ್ಪನೆಗಳ ಗೋಡೆಗಳ ಕಟ್ಟುವಿಕೆಗಳು, ಕೆಡವುವಿಕೆಗಳು ಜಗತ್ತಿನಾದ್ಯಂತ ನಡೆದಿವೆ. ತಾಯ್ತನವೊಂದೇ ಸ್ಥಾಯಿ ಎನ್ನುವುದನ್ನು ನಮ್ಮೆಲ್ಲ ಮೂಲ ವೇದೋಪನಿಷತ್ತುಗಳಲ್ಲಿ ಕಾಣಬಹುದು ಎಂದರು.
    ಅನ್ವೇಷಣ ಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ, ರಾಜೀವ ಪಾಟೀಲ ಕುಲಕಣಿರ್, ಶ್ರೀನಿವಾಸ ವಾಡಪ್ಪಿ, ಪ್ರೊ. ದುಷ್ಯಂತ ನಾಡಗೌಡ, ಡಾ. ಅರವಿಂದ ಯಾಳಗಿ, ಜಿ.ಆರ್​.ಭಟ್ಟ, ಹರ್ಷ ಡಂಬಳ, ಮಾಲತೇಶ ಹುಬ್ಬಳ್ಳಿ, ಅನಂತ ಸಿದ್ಧೇಶ್ವರ, ರಮೇಶ ಇಟ್ನಾಳ, ಡಾ. ದೀಪಕ ಆಲೂರ, ಬಿ.ಜಿ. ಗುಂಡೂರ, ವಿ.ಎಸ್​.ಕುಲಕಣಿರ್, ರಮೇಶ ನಾಡಿಗೇರ, ಎಸ್​.ಎಂ. ದೇಶಪಾಂಡೆ, ಶ್ರೀಪಾದ ರಂಗಾಪುರ, ರೂಪಶ್ರೀ ದೇಸಾಯಿ, ಜ್ಯೋತಿ ಹಾವನೂರ, ಉಮಾ ಸೊಹನಿ, ವಿದ್ಯಾ ಕುಲಕಣಿರ್, ಸರೋಜಾ ಕುಲಕಣಿರ್, ಅನುರಾಧಾ ಯಾಳಗಿ, ರಜನಿ ಕುಲಕಣಿರ್, ಸೀಮಾ ಪರಾಂಜಪೆ, ವಾರುಣಿ ರಿತ್ತಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts