More

    ನಮ್ಮವರು ಪಾಕಿಸ್ತಾನದ ವಿರುದ್ಧ ಆಡುವ ಬದಲು ಐಪಿಎಲ್​ ಆಡಿದ್ದಿದ್ರೆ… ಪಾಕ್​ನ ಟೀಕಿಸಿದ ಮಾಜಿ ಕ್ರಿಕೆಟಿಗ

    ಇಂಗ್ಲೆಂಡ್​: ನಿನ್ನೆ (ಮೇ.25) ನಡೆದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸುಲಭ ಗೆಲುವು ದಾಖಲಿಸಿದ ಇಂಗ್ಲೆಂಡ್​ ತಂಡದ ಕೆಲವು ಆಟಗಾರರಿಗೆ ಇದೀಗ ಮಾಜಿ ಆಟಗಾರ ಮೈಕೆಲ್ ವಾಘನ್ ಸಲಹೆ ನೀಡಿದ್ದು, ಪರೋಕ್ಷವಾಗಿ ಪಾಕ್​ ಆಟಗಾರರನ್ನು ಟೀಕಿಸಿದ್ದಾರೆ. ಒಂದು ರೀತಿಯಲ್ಲಿ ಹೇಳಬೇಕೆಂದರೆ, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯುವ ಕೆಲಸವನ್ನು ಮೈಕೆಲ್ ಮಾಡಿದ್ದಾರೆ. ಇದು ಅನೇಕರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ.

    ಇದನ್ನೂ ಓದಿ: ಲುಂಗಿಯುಟ್ಟು ಲಂಡನ್​ ಬೀದಿ ಸುತ್ತಿದ ಯುವತಿಯನ್ನು ಕಂಡು ಬ್ರಿಟನ್​ ಮಂದಿ ಕೊಟ್ಟ ಪ್ರತಿಕ್ರಿಯೆ​ ವೈರಲ್!

    ಇಂಗ್ಲೆಂಡ್ ಮತ್ತು ಪಾಕಿಸ್ತಾನ ವಿರುದ್ಧದ ನಾಲ್ಕು ಟಿ20 ಪಂದ್ಯಗಳಲ್ಲಿ ಮೊದಲನೇ ಮ್ಯಾಚ್ ಮಳೆಯಿಂದ ರದ್ದಾಯಿತು. ಇನ್ನು ಎರಡನೇ ಪಂದ್ಯದಲ್ಲಿ ಮೊದಲು ಟಾಸ್​ ಗೆದ್ದು ಬೌಲಿಂಗ್ ಆಯ್ದುಕೊಂಡ ಪಾಕ್​, ಬ್ಯಾಟ್​ ಮಾಡುವಂತೆ ಇಂಗ್ಲೆಂಡ್​ಗೆ ಹೇಳಿತು. ಅದರಂತೆಯೇ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್, 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 183 ರನ್​ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲರಾದ ಪಾಕಿಸ್ತಾನದ ಸ್ಟಾರ್​ ಬ್ಯಾಟ್ಸ್​ಮನ್​ಗಳು, 19.2 ಓವರ್​ಗಳಲ್ಲಿ 160ಕ್ಕೆ ಆಲ್​ಔಟ್​ ಆಗುವ ಮೂಲಕ ಪಂದ್ಯವನ್ನು ಇಂಗ್ಲೆಂಡ್​ಗೆ ಒಪ್ಪಿಸಿದರು.

    ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ ತಂಡ ಸೋಲುತ್ತಿದ್ದಂತೆ ಇಂಗ್ಲೆಂಡ್​ನ ಕೆಲವು ಬ್ಯಾಟ್ಸ್​ಮನ್​ಗಳಿಗೆ ಮತ್ತು ಕ್ರಿಕೆಟ್​ ಮಂಡಳಿಗೆ ಸಲಹೆ ನೀಡಿದ ಮೈಕೆಲ್ ವಾಘನ್, “ಜಾಸ್​ ಬಟ್ಲರ್​, ಫಿಲ್ ಸಾಲ್ಟ್​, ವಿಲ್​ ಜ್ಯಾಕ್ಸ್​ನಂತಹ ಸ್ಟಾರ್​ ಆಟಗಾರರನ್ನು ಇಷ್ಟು ಬೇಗ ಭಾರತದಿಂದ ಕರೆಸಿಕೊಳ್ಳುವ ಅವಶ್ಯಕತೆ ಇರಲಿಲ್ಲ. ಇವರೆಲ್ಲಾ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಆಡುವ ಬದಲಿಗೆ ಐಪಿಎಲ್ ಆಡಿದ್ದಿದ್ರೆ ಎಷ್ಟೋ ಚೆನ್ನಾಗಿರುತ್ತಿತ್ತು. ಅವರವರ ಫ್ರಾಂಚೈಸಿ ಪರ ಆಡಲು ಬಿಟ್ಟಿದಿದ್ದರೆ, ಇಷ್ಟೊತ್ತಿಗೆ ಪ್ಲೇಆಫ್​ ಪ್ರವೇಶಿಸಿದ್ದ ತಮ್ಮ ತಂಡಗಳಿಗೆ ದೊಡ್ಡ ಕೊಡುಗೆ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದರು” ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಡೇವಿಡ್ ಸಿಮೆಯೋನ್ ಗೆ ಎಂಎಲ್ಸಿ ಮಾಡಿ

    “ಐಪಿಎಲ್​ನಲ್ಲಿ ಈ ಆಟಗಾರರು ಆಡಿದ ತಂಡಕ್ಕೆ ಅಭಿಮಾನಿಗಳಿಂದ ಹೆಚ್ಚಿನ ಬೆಂಬಲ ಮತ್ತು ಗೆಲುವಿನ ಒತ್ತಡವಿತ್ತು. ಇದನ್ನೆಲ್ಲಾ ನೋಡಿದಾಗ ಪಾಕಿಸ್ತಾನದ ವಿರುದ್ಧದ ಪಂದ್ಯ ಆಡುವ ಬದಲಿಗೆ ಇವರೆಲ್ಲಾ ಐಪಿಎಲ್​ನಲ್ಲಿ ತಮ್ಮ ಫ್ರಾಂಚೈಸಿ ಪರ ಆಡಬೇಕಿತ್ತು” ಎಂದು ಅಭಿಪ್ರಾಯಿಸಿದ್ದಾರೆ. ಸದ್ಯ ಮೈಕೆಲ್​ ಪರೋಕ್ಷವಾಗಿ ಪಾಕಿಸ್ತಾನ ತಂಡದ ಆಟಗಾರರನ್ನು ಟೀಕಿಸಿ​ದ್ದು ಮಾತ್ರ ಕ್ರಿಕೆಟ್ ಅಭಿಮಾನಿಗಳ ಹುಬ್ಬೇರುವಂತೆ ಮಾಡಿದೆ,(ಏಜೆನ್ಸೀಸ್).

    ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ ಅಂದ್ರೆ, ನೀನು 500 ರನ್​ ಗಳಿಸಿ ಏನು ಫಲ? ಸಂಜುಗೆ ಬೆವರಿಳಿಸಿದ ಮಾಜಿ ಆಟಗಾರ

    ಮುಂದಿನ ವರ್ಷ ಈ 4 ಸ್ಟಾರ್​ ಆಟಗಾರರನ್ನು ಕೈಬಿಡಲಿದೆ ಆರ್​ಸಿಬಿ ಫ್ರಾಂಚೈಸಿ! ಫ್ಯಾನ್ಸ್​ ಕಂಗಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts