More

  ಸೊಸೆ ಸಾವಿನ ಸುದ್ದಿ ಕೇಳಿ ಅತ್ತೆಗೆ ಹೃದಯಾಘಾತ: ಮಂಡ್ಯದಲ್ಲಿ ಹೃದಯ ವಿದ್ರಾವಕ ಘಟನೆ

  ಮಂಡ್ಯ: ಸಾಮಾನ್ಯವಾಗಿ ಹೆಚ್ಚಿನ ಕುಟುಂಬಗಳಲ್ಲಿ ಅತ್ತೆ-ಸೊಸೆ ಹಾವು ಮುಂಗುಸಿ ಥರ ಕಿತ್ತಾಡುತ್ತಾರೆ. ಸೊಸೆ ಮಾಡಿದ ಕೆಲಸ ಅತ್ತೆಗೆ ಮತ್ತು ಅತ್ತೆ ಮಾಡಿದ ಕೆಲಸ ಸೊಸೆಗೆ ಇಷ್ಟವಾಗುವುದಿಲ್ಲ. ಇಬ್ಬರ ನಡುವಿನ ಮುಸುಕಿನ ಗುದ್ದಾಟದಿಂದಾಗಿ ಸಂಸಾರವೆಂಬ ಸಾಗರದಲ್ಲಿ ಕೆಲವೊಮ್ಮೆ ಅಲ್ಲೋಲ-ಕಲ್ಲೋಲಗಳು ಉಂಟಾಗುತ್ತವೆ. ಅತ್ತೆ-ಸೊಸೆ ಇಬ್ಬರು ಅಮ್ಮ-ಮಗಳ ರೀತಿ ಇರುವುದು ತುಂಬಾ ವಿರಳ.

  ಬದುಕಿರುವಾಗ ಅಮ್ಮ-ಮಗಳ ರೀತಿ ಅನ್ಯೋನ್ಯವಾಗಿ ಜೀವನ ಸಾಗಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದ ಅತ್ತೆ-ಸೊಸೆ ಇಬ್ಬರು ಇದೀಗ ಸಾವಿನಲ್ಲೂ ಒಂದಾಗಿರುವ ಕರುಣಾಜನಕ ಘಟನೆ ಮಂಡ್ಯದ ನಾಗಮಂಗಲ ತಾಲೂಕಿನ ಕಾಡು ಅಂಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

  ಅನಾರೋಗ್ಯದಿಂದ ಬಳಲುತ್ತಿದ್ದ ಸೊಸೆ ಸುಶೀಲಾ (42), ಮೃತಪಟ್ಟ ಸುದ್ದಿ ಕೇಳಿ ಅತ್ತೆ ಹುಚ್ಚಮ್ಮ(75) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹುಚ್ಚಮ್ಮಗೆ ಐವರು ಗಂಡು ಮಕ್ಕಳು. ಎರಡನೇ ಮಗನ ಹೆಂಡತಿಯಾಗಿದ್ದ ಸುಶೀಲಾಗೆ ಇಬ್ಬರು ಮಕ್ಕಳಿದ್ದಾರೆ.

  ಹುಚ್ಚಮ್ಮ ಮತ್ತು ಸುಶೀಲಾ ಅತ್ತೆ-ಸೊಸೆಯಂತೆ ಇರದೆ ತಾಯಿ‌-ಮಗಳಂತೆ ಇದ್ದರು. ಆದರೆ, ನಿನ್ನೆ (ನ.23) ಸಂಜೆ ಸುಶೀಲಾ ಅವರು ದಿಢೀರ್ ಸಾವಿಗೀಡಾದ ಸುದ್ದಿ ಕೇಳಿದ ಹುಚ್ಚಮ್ಮ ತಕ್ಷಣ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅತ್ತೆ-ಸೊಸೆ ಸಾವಿನಿಂದ ಇಡೀ ಕುಟುಂಬ ಹಾಗೂ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಇಂದೇ ಇಬ್ಬರ ಅಂತ್ಯಕ್ರಿಯೆ ಒಂದೇ ಕಡೆ ನಡೆಯಲಿದೆ.

  ಕಂಬಳ ಓಟಗಾರರ ವೇಗ ಜಗತ್ತಿನ ಶರವೇಗದ ಓಟಗಾರ ಉಸೇನ್​ ಬೋಲ್ಟ್​ರನ್ನೂ ಮೀರಿಸುತ್ತೆ!

  ಭಾರತದಲ್ಲಿರುವ ರಾಯಭಾರ ಕಚೇರಿಯನ್ನು ಶಾಶ್ವತವಾಗಿ ಮುಚ್ಚಿದ ಆಫ್ಘನ್‌; ಕಾರಣ ಬಹಿರಂಗ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts