More

    ಬಿರಿಯಾನಿ ಪ್ರಿಯರೇ ಇಲ್ಲಿ ನೋಡಿ.. ಈ ಬಿರಿಯಾನಿ ಬೆಲೆ ಎಷ್ಟಿರಬಹುದು ನೀವೇ ಹೇಳಿ..

    ದುಬೈ: ಬಿರಿಯಾನಿ ಭಾರತದ ಅತ್ಯಂತ ಪ್ರಿಯ ಅಡುಗೆ ಎಂದೇ ಹೇಳಬಹುದು. ಭಾರತ ಮಾತ್ರವಲ್ಲದೆ ಹಲವು ದೇಶಗಳಲ್ಲಿ ಬಿರಿಯಾನಿಗೆ ಅಭಿಮಾನಿಗಳಿದ್ದಾರೆ. ಒಂದು ಪ್ಲೇಟ್​ ಬಿರಿಯಾನಿಗೆ ಎಷ್ಟು ದುಡ್ಡಿರಬಹುದು? ಉಹೂಂ ನಿಮ್ಮೆಲ್ಲರ ಊಹೆಯನ್ನು ಮೀರುವ ಬಿರಿಯಾನಿ ಕಥೆಯಿದು…

    ದುಬೈ ಅಂತರರಾಷ್ಟ್ರೀಯ ಹಣಕಾಸು ಕೇಂದ್ರದಲ್ಲಿ (ಡಿಐಎಫ್‌ಸಿ) ನೆಲೆಗೊಂಡಿರುವ ಬಾಂಬೆ ಬರೋದಲ್ಲಿ ರಾಯಲ್ ಗೋಲ್ಡ್ ಬಿರಿಯಾನಿ ಫೇಮಸ್. ಅಂದ ಹಾಗೆ ಇದರ ಬೆಲೆ ಎಷ್ಟೆಂದು ಕೇಳಿದರೆ ನಿಮಗೆ ಒಮ್ಮೆ ತಲೆ ತಿರುಗಿದರೂ ತಿರುಗಬಹುದು. ಒಂದೇ ಒಂದು ಪ್ಲೇಟ್​ ಬಿರಿಯಾನಿ ಬೆಲೆ ಬರೋಬ್ಬರಿ 20 ಸಾವಿರ ರೂಪಾಯಿಯಂತೆ! ಇಷ್ಟೊಂದು ಬೆಲೆ ಕೊಟ್ಟು ತಿನ್ನುವ ಬಿರಿಯಾನಿಯಲ್ಲಿ ಏನಿದೆ ಎಂದು ತಿಳಿಯಲು ಮುಂದೆ ಓದಿ.

    ಇದೂ ಕೂಡ ಮಾಮೂಲಿ ಚಿಕನ್​ ಬಿರಿಯಾನಿಯೇ. ಆದರೆ ಕೆಲವು ವಿಶೇಷತೆಗಳನ್ನು ಇದರಲ್ಲಿ ಜೋಡಿಸಿಕೊಳ್ಳಲಾಗಿದೆ. ನೀವು ರಾಯಲ್​ ಗೋಲ್ಡ್​ ಬಿರಿಯಾನಿ ಆರ್ಡರ್​ ಮಾಡಿದರೆ ಅದನ್ನು ತಂದುಕೊಡುವುದಕ್ಕೆ 45 ನಿಮಿಷ ತೆಗೆದುಕೊಳ್ಳಲಾಗುತ್ತದೆ. ಮೂರು ರೀತಿಯ ಅಕ್ಕಿಯಿಂದ ಮಾಡಿದ ಬಿರಿಯಾನಿ ಅದರಲ್ಲಿರುತ್ತದೆ. ಚಿಕನ್ ಬಿರಿಯಾನಿ ರೈಸ್, ಕೀಮಾ ರೈಸ್, ಮತ್ತು ವೈಟ್ ಮತ್ತು ಕೇಸರಿ ಅಕ್ಕಿಯಿಂದ ಬಿರಿಯಾನಿ ಮಾಡಲಾಗಿರುತ್ತದೆ. ಬೇಯಿಸಿದ ಬೇಬಿ ಆಲೂ ಹಾಗೂ ಮೊಟ್ಟೆ ಕೂಡ ತಟ್ಟೆಯಲ್ಲಿರುತ್ತದೆ.

    ಈ ಬಿರಿಯಾನಿಯಲ್ಲಿ ಮೂರು ಬಗೆಯ ಚಿಕನ್​ ಗ್ರಿಲ್​ ಇರಲಿದೆ. ಮಲೈ ಚಿಕನ್, ರಜಪೂತಾನ ಮುರ್ಗ್ ಸುಲಾ, ಮತ್ತು ಚಿಕನ್ ಮೀಟ್‌ಬಾಲ್‌ಗಳು ತಟ್ಟೆಯಲ್ಲಿರುತ್ತದೆ. ಲ್ಯಾಂಬ್ ಚಾಪ್ಸ್ ಮತ್ತು ಲ್ಯಾಂಬ್ ಸೀಖ್ ಕಬಾಬ್, ಪುದೀನ, ಹುರಿದ ಗೋಡಂಬಿ, ದಾಳಿಂಬೆ ಮತ್ತು ಹುರಿದ ಈರುಳ್ಳಿಯಿಂದ ತಟ್ಟೆಯನ್ನು ಅಲಂಕರಿಸಲಾಗಿರುತ್ತದೆ. ನಿಹಾರಿ ಸಲಾನ್, ಜೋಧಪುರಿ ಸಲಾನ್, ಬಾದಾಮಿ ಸಾಸ್ ಬಾದಾಮಿ ಮತ್ತು ದಾಳಿಂಬೆ ರೈತಾ ಕೂಡ ಬಿರಿಯಾನಿಯೊಂದಿಗೆ ಸಿಗಲಿದೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

     

    ಊಟ ಆರ್ಡರ್​ ಮಾಡಿದವನಿಗೆ ಮೂತ್ರ ಗಿಫ್ಟ್​ ಕೊಟ್ಟ ಡೆಲಿವರಿ ಬಾಯ್​!

    ಅಯ್ಯೋ ಅವ್ನ ಮದ್ವೆಯಾಗಿದೆ ಅಂತ ಗೊತ್ತಿದ್ರೆ ಅವ್ನ ಜತೆ ಹೀಗೆಲ್ಲಾ ಮಾಡ್ತಾನೇ ಇರ್ಲಿಲ್ಲ: ಕಣ್ಣೀರಿಟ್ಟ ರಾಖಿ ಸಾವಂತ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts