More

    ಬಾಂಗ್ಲಾದೇಶ ಕ್ರಿಕೆಟಿಗ ಮೊರ್ಟಜ ಕರೊನಾ ಮುಕ್ತ, ಪತ್ನಿ ಇನ್ನೂ ಪಾಸಿಟಿವ್​

    ಢಾಕಾ: ಬಾಂಗ್ಲಾದೇಶ ಕ್ರಿಕೆಟ್​ ತಂಡದ ಮಾಜಿ ನಾಯಕ ಮಶ್ರಫೆ ಮೊರ್ಟಜ ಅವರು ಕರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಆದರೆ ಅವರ ಪತ್ನಿ ಸುಮೊನಾ ಹಕ್​ ಇನ್ನೂ ಸೋಂಕಿನಿಂದ ಸಂಪೂರ್ಣವಾಗಿ ಚೇತರಿಕೆ ಕಂಡಿಲ್ಲ.

    ಬಾಂಗ್ಲಾದಲ್ಲಿ ಸಂಸದರೂ ಆಗಿರುವ ಮೊರ್ಟಜಗೆ ಜೂನ್​ 20ರಂದು ಪಾಸಿಟಿವ್​ ವರದಿ ಬಂದಿತ್ತು. ಇದೀಗ ನಡೆದ ಪರೀಕ್ಷೆಯಲ್ಲಿ ನೆಗೆಟಿವ್​ ವರದಿ ಬಂದಿರುವ ವಿಷಯವನ್ನು ಅವರು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ. ‘ಎಲ್ಲರೂ ಆರೋಗ್ಯವಾಗಿದ್ದೀರಿ ಎಂದು ನಂಬುತ್ತೇನೆ. ದೇವರ ದಯೆ ಮತ್ತು ಎಲ್ಲರ ಹಾರೈಕೆಗಳಿಂದಾಗಿ ನಾನು ಈಗ ಕರೊನಾ ವೈರಸ್​ ನೆಗೆಟಿವ್​ ಆಗಿದ್ದೇನೆ. ಈ ಕಠಿಣ ಸಮಯದಲ್ಲಿ ನನ್ನೊಂದಿಗೆ ನಿಂತ ಮತ್ತು ನನಗೆ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು. ನಾನು ಮನೆಯಲ್ಲೇ ಚಿಕಿತ್ಸೆ ಪಡೆದು ಗುಣಮುಖನಾಗಿದ್ದೇನೆ. ಸೋಂಕಿತರಾಗಿರುವ ಎಲ್ಲರೂ ಸಕಾರಾತ್ಮಕವಾಗಿರಿ. ನಿಯಮಗಳಿಗೆ ಬದ್ಧರಾಗಿರಿ. ನಾವೆಲ್ಲರೂ ಒಗ್ಗೂಡಿ ವೈರಸ್​ ವಿರುದ್ಧ ಹೋರಾಡುತ್ತಿರೋಣ’ ಎಂದು 36 ವರ್ಷದ ಮಾಜಿ ವೇಗಿ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಸ್ಪಿನ್​ ದಿಗ್ಗಜ ಅನಿಲ್​ ಕುಂಬ್ಳೆ ಪುತ್ರ ವನ್ಯಜೀವಿ ಛಾಯಾಗ್ರಾಹಕ!

    ಪತ್ನಿ ಕಳೆದ 2 ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಇನ್ನೂ ಪಾಸಿಟಿವ್​ ಆಗಿದ್ದಾಳೆ. ಆಕೆ ಉತ್ತಮ ರೀತಿಯಲ್ಲಿ ಚೇತರಿಕೆ ಕಾಣುತ್ತಿದ್ದಾಳೆ. ಆಕೆಗೆ ನಿಮ್ಮ ಹಾರೈಕೆಗಳು ಇರಲಿ ಎಂದು ಮೊರ್ಟಜ ಹೇಳಿದ್ದಾರೆ. ಅವರು ಆಡಳಿತ ಪ ಅವಾಮಿ ಲೀಗ್​ ಪಾರ್ಟಿ ಸಂಸದರಾಗಿದ್ದು, ಕರೊನಾ ಹಾವಳಿಯ ಸಮಯದಲ್ಲಿ ತಮ್ಮ ಕ್ಷೇತ್ರದ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದರು.

    ಕರೊನಾ ಸೋಂಕಿತರಾಗಿದ್ದ ಬಾಂಗ್ಲಾದೇಶದ ಮತ್ತಿಬ್ಬರು ಕ್ರಿಕೆಟಿಗರಾದ ನಫೀಸ್​ ಇಕ್ಬಾಲ್​ ಮತ್ತು ನಜ್ಮುಲ್​ ಇಸ್ಲಾಂ ಕೂಡ ಗುಣಮುಖರಾಗಿದ್ದಾರೆ. ಅವರೂ ಮನೆಯಲ್ಲೇ ಚಿಕಿತ್ಸೆ ಪಡೆದುಕೊಂಡಿದ್ದರು. ಇವರಿಬ್ಬರೂ ಮೂರು ವಾರಗಳ ಹಿಂದೆ ಪಾಸಿಟಿವ್​ ಆಗಿದ್ದರು.

    3ನೇ ಮಗುವಿನ ನಿರೀಕ್ಷೆಯಲ್ಲಿ ಎಬಿ ಡಿವಿಲಿಯರ್ಸ್​ ದಂಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts