More

    ಸ್ಪಿನ್​ ದಿಗ್ಗಜ ಅನಿಲ್​ ಕುಂಬ್ಳೆ ಪುತ್ರ ವನ್ಯಜೀವಿ ಛಾಯಾಗ್ರಾಹಕ!

    ಬೆಂಗಳೂರು: ಕ್ರಿಕೆಟಿಗರ ಪುತ್ರರು ಕ್ರಿಕೆಟಿಗರೇ ಆಗುವುದು ಸಾಮಾನ್ಯ. ದಿಗ್ಗಜರಾದ ಸಚಿನ್​ ತೆಂಡುಲ್ಕರ್​ ಮತ್ತು ರಾಹುಲ್​ ದ್ರಾವಿಡ್​ ಪುತ್ರರು ಈಗಾಗಲೆ ಇದೇ ಹಾದಿಯಲ್ಲಿದ್ದಾರೆ. ಆದರೆ ಸ್ಪಿನ್​ ಬೌಲಿಂಗ್​ ಮಾಂತ್ರಿಕ ಅನಿಲ್​ ಕುಂಬ್ಳೆ ಅವರ ಪುತ್ರ ತಂದೆಯ ವೃತ್ತಿಗೆ ಬದಲಾಗಿ ಹವ್ಯಾಸದ ಕಡೆಗೆ ಹೆಚ್ಚು ಆಸಕ್ತಿ ವಹಿಸಿದ್ದು, ಅದರಲ್ಲೇ ಈಗ ವಿಶೇಷ ಸಾಧನೆಯೊಂದನ್ನು ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಕುಂಬ್ಳೆಗೆ ಕ್ರಿಕೆಟ್​ ವೃತ್ತಿಜೀವನವಾಗಿದ್ದರೂ, ವನ್ಯಜೀವಿ ಛಾಯಾಗ್ರಹಣದ ಬಗ್ಗೆ ವಿಶೇಷ ಆಸಕ್ತಿ ಇತ್ತು. ಅವರ ಪುತ್ರ ಮಯಾಸ್​ ಕುಂಬ್ಳೆ ಕೂಡ ಬಾಲಕನಾಗಿರುವಾಗಲೇ ವನ್ಯಜೀವಿ ಛಾಯಾಗ್ರಹಣದಲ್ಲಿ ಮಿಂಚಿದ್ದಾರೆ. ಅಪ್ಪ ಮೈದಾನದಲ್ಲಿ ಸಾಧನೆ ಮಾಡಿದ್ದರೆ, ಪುತ್ರ ಅರಣ್ಯದಲ್ಲಿ ಸಾಧನೆ ಮಾಡುವತ್ತ ಮುನ್ನಡೆದಿದ್ದಾರೆ.

    ಸ್ಪಿನ್​ ದಿಗ್ಗಜ ಅನಿಲ್​ ಕುಂಬ್ಳೆ ಪುತ್ರ ವನ್ಯಜೀವಿ ಛಾಯಾಗ್ರಾಹಕ!

    ಬಾಲ್ಯದಿಂದಲೂ ವನ್ಯಜೀವಿ ಛಾಯಾಗ್ರಹಣವನ್ನು ಪ್ರೀತಿಸುತ್ತ ಬಂದಿರುವ 16 ವರ್ಷದ ಮಯಾಸ್​ ಕುಂಬ್ಳೆ, ಈಗಾಗಲೆ ಅಪೂರ್ವ ವನ್ಯಜೀವಿ ಛಾಯಾಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತ ಬಂದಿದ್ದಾರೆ. ಇದೀಗ ಅವರು, ಮಹಾರಾಷ್ಟ್ರದ ಅಂಧೇರಿಯ ಅತಿದೊಡ್ಡ ರಾಷ್ಟ್ರೀಯ ಉದ್ಯಾನವನದ ಹುಲಿ ರಕ್ಷಿತಾರಣ್ಯದಲ್ಲಿ ಕ್ಲಿಕ್ಕಿಸಿರುವ ವನ್ಯಜೀವಿ ಛಾಯಾಚಿತ್ರಗಳು ಮತ್ತು ಅವರು ಬರೆದಿರುವ ಅನುಭವ ಕಥನ ಭಾರತದ ಪ್ರತಿಷ್ಠಿತ ವನ್ಯಜೀವಿ ಜಾಲತಾಣ ‘ನೇಚರ್​ ಇನ್ ಫೋಕಸ್​’ನಲ್ಲಿ (ಎನ್​ಐಎಫ್​) ಪ್ರಕಟಗೊಂಡಿದೆ.

    ಇದನ್ನೂ ಓದಿ: ಮೊಬೈಲ್​ ಕರೆಗಾಗಿ ಮರ ಏರಿದ್ದ ಅಂಪೈರ್​ ಊರಲ್ಲಿ ಈಗ ನೆಟ್​ವರ್ಕ್​ ಸಮಸ್ಯೆ ಇಲ್ಲ!

    ಈ ಬಗ್ಗೆ ಅನಿಲ್​ ಕುಂಬ್ಳೆ ಟ್ವಿಟರ್​ನಲ್ಲಿ ಮಂಗಳವಾರ ಸಂತೋಷವನ್ನು ಹಂಚಿಕೊಂಡಿದ್ದು, ‘ಮಗನ ಬಗ್ಗೆ ಹೆಮ್ಮೆಯಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ. ಮಯಾಸ್​ ಈ ಲೇಖನದಲ್ಲಿ ಹುಲಿಗಳ ಛಾಯಾಚಿತ್ರ ಸೆರೆಹಿಡಿದ ತಮ್ಮ ಅನುಭವವನ್ನು ವಿವರಿಸಿದ್ದು, ತಾವು ಸೆರೆಹಿಡಿದ ಹುಲಿಗಳ ಸುಂದರ ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ. ಕುಂಬ್ಳೆ ಟ್ವೀಟ್​ಗೆ ಪ್ರತಿಯಾಗಿ ಮಾಜಿ ಕ್ರಿಕೆಟಿಗ ವಿವಿಎಸ್​ ಲಕ್ಷ್ಮಣ್​​, ಕೂಡ ಮಯಾಸ್​ ಛಾಯಾಚಿತ್ರಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸ್ಪಿನ್​ ದಿಗ್ಗಜ ಅನಿಲ್​ ಕುಂಬ್ಳೆ ಪುತ್ರ ವನ್ಯಜೀವಿ ಛಾಯಾಗ್ರಾಹಕ!

    ಮಯಾಸ್​ ಕುಂಬ್ಳೆ ಅರಣ್ಯದಲ್ಲಿ ಕ್ಲಿಕ್ಕಿಸಿರುವ ಚಿತ್ರಗಳು

    ಬೆಂಗಳೂರಿನಲ್ಲಿ ಹೈಸ್ಕೂಲ್​ ವಿದ್ಯಾಥಿರ್ಯಾಗಿರುವ ಮಯಾಸ್​ಗೆ ವನ್ಯಜೀವಿ ಛಾಯಾಗ್ರಹಣದ ಆಸಕ್ತಿ ಬೆಳೆಯಲು ತಂದೆಯೇ ಸ್ಫೂತಿರ್ಯಾಗಿದ್ದಾರೆ. 49 ವರ್ಷದ ಕುಂಬ್ಳೆ ಈ ಹಿಂದೆ ಕರ್ನಾಟಕ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿದ್ದರು. ಅಲ್ಲದೆ ವನ್ಯಜೀವಿ ಛಾಯಾಗ್ರಹಣದಲ್ಲೂ ಸಾಕಷ್ಟು ಅಭೂತಪೂರ್ವ ಚಿತ್ರಗಳನ್ನು ಕ್ಲಿಕ್ಕಿಸಿ ಗಮನ ಸೆಳೆದಿದ್ದಾರೆ. ಈ ವೇಳೆ ಅವರಿಗೆ ಪುತ್ರ ಮಯಾಸ್​ ಸಾಥ್​ ನೀಡಿದ್ದರು ಮತ್ತು 13ನೇ ವಯಸ್ಸಿನಲ್ಲೇ ವೈಲ್ಡ್​ಲೈಫ್​ ಫೋಟೋಗ್ರಫಿ ಆರಂಭಿಸಿದ್ದರು.

    ಸ್ಪಿನ್​ ದಿಗ್ಗಜ ಅನಿಲ್​ ಕುಂಬ್ಳೆ ಪುತ್ರ ವನ್ಯಜೀವಿ ಛಾಯಾಗ್ರಾಹಕ!

    ಭಾರತ ತಂಡದ ಮಾಜಿ ನಾಯಕ ಹಾಗೂ ಕೋಚ್​ ಆಗಿರುವ ಅನಿಲ್​ ಕುಂಬ್ಳೆ 132 ಟೆಸ್ಟ್​ ಪಂದ್ಯಗಳಲ್ಲಿ 619 ವಿಕೆಟ್​ ಮತ್ತು 271 ಏಕದಿನ ಪಂದ್ಯಗಳಲ್ಲಿ 337 ವಿಕೆಟ್​ ಕಬಳಿಸಿದ್ದಾರೆ. ಚೇತನಾ ಕುಂಬ್ಳೆ ಅವರನ್ನು ವರಿಸಿರುವ ಕುಂಬ್ಳೆ ಪುತ್ರ ಮಯಾಸ್​ ಜತೆಗೆ ಓರ್ವ ಪುತ್ರಿ ಸ್ವಸ್ತಿ ಮತ್ತು ಮಲಮಗಳು ಅರುಣಿ ಅವರನ್ನು ಹೊಂದಿದ್ದಾರೆ. ಅವರು ಈಗ ಐಸಿಸಿ ಕ್ರಿಕೆಟ್​ ಸಮಿತಿಯ ಮುಖ್ಯಸ್ಥರಾಗಿದ್ದಾರೆ.

    https://www.instagram.com/p/CBawEY7jlpn/?utm_source=ig_web_copy_link

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts