More

    ಕಳೆದೊಂದು ವರ್ಷದಲ್ಲಿ ಶೇಕಡಾ 30ಕ್ಕೂ ಅಧಿಕ ಲಾಭ: ಈ ಮ್ಯೂಚುವಲ್ ಫಂಡ್​ಗಳ ವರ್ಗ ಯಾವುದು ಗೊತ್ತೆ?

    ಮುಂಬೈ: ವರ್ಷಾಂತ್ಯವು ಸಮೀಪಿಸುತ್ತಿದೆ. 2023ರಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆಗಳು ಹೇಗೆ ಕಾರ್ಯನಿರ್ವಹಿಸಿವೆ? ಎಷ್ಟು ಲಾಭ ತಂದುಕೊಟ್ಟಿವೆ? ಎಂಬುದನ್ನು ನೋಡುವ ಸಮಯ ಇದಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಬಹುತೇಕ ಎಲ್ಲ ಮ್ಯೂಚುವಲ್ ಫಂಡ್​ಗಳು ಈ ವರ್ಷದಲ್ಲಿ ಹೂಡಿಕೆದಾರರಿಗೆ ಉತ್ತಮ ಲಾಭವನ್ನೇ ತಂದುಕೊಟ್ಟಿವೆ.

    ಈ ಪೈಕಿ ಡಿವಿಡೆಂಡ್​ ಯೀಲ್ಡ್​ ಫಂಡ್​ಗಳು ಹೆಚ್ಚಿನ ಪ್ರಮಾಣದಲ್ಲಿ ಲಾಭವನ್ನು ಹೂಡಿಕೆದಾರರಿಗೆ ತಂದುಕೊಟ್ಟಿರುವುದು ಗಮನಾರ್ಹವಾಗಿದೆ.

    ಏನಿದು ಡಿವಿಡೆಂಡ್ ಯೀಲ್ಡ್​ ಫಂಡ್​?:

    ಈ ಮ್ಯೂಚುಯಲ್ ಫಂಡ್‌ಗಳು ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ. ಹೆಚ್ಚಿನ ಲಾಭಾಂಶ ನೀಡುವ ಕಂಪನಿಗಳ ಷೇರುಗಳನ್ನು ಆಯ್ಕೆ ಮಾಡಿಕೊಂಡು ಹೂಡಿಕೆ ಮಾಡುವ ತಂತ್ರ ಅನುಸರಿಸುತ್ತವೆ.

    ಡಿವಿಡೆಂಡ್ ಯೀಲ್ಡ್​ ನಿಧಿಯ ವ್ಯವಸ್ಥಾಪಕರು ನಿರಂತರ ನಗದು ಹರಿವುಗಳನ್ನು ಹೊಂದಿರುವ ಕಂಪನಿಗಳಲ್ಲಿ ಹೂಡಿಕೆ ಮಾಡಲು ಒಲವು ತೋರುತ್ತಾರೆ. ನಿಯಮಿತವಾಗಿ ಮತ್ತು ಸ್ಥಿರ ದರದಲ್ಲಿ ಲಾಭಾಂಶವನ್ನು ಪಾವತಿಸುವ ಸ್ಥಿತಿಯಲ್ಲಿ ಇರುವಂತಹ ಕಂಪನಿಗಳು ಇವುಗಳಾಗಿರುತ್ತವೆ. ಕುಸಿತದ ಸಮಯದಲ್ಲಿ ಕೂಡ ಇಂತಹ ಕಂಪನಿಗಳು ಸಾಮಾನ್ಯವಾಗಿ ತಮ್ಮ ಲಾಭಾಂಶವನ್ನು ಕಡಿಮೆ ಮಾಡುವುದಿಲ್ಲ. .

    ಮಾರುಕಟ್ಟೆಯ ಸರಾಸರಿ ಡಿವಿಡೆಂಡ್ ಇಳುವರಿಗಿಂತ ಹೆಚ್ಚಿನ ಲಾಭಾಂಶ ಇಳುವರಿಯನ್ನು ಹೊಂದಿರುವ ಷೇರುಗಳಲ್ಲಿ ಡಿವಿಡೆಂಡ್ ಯೀಲ್ಡ್​ ಫಂಡ್​ನ ನಿರ್ವಾಹಕರು ಶೇಕಡಾ 65ರಷ್ಟು ಹಣವನ್ನು ಹೂಡಿಕೆ ಮಾಡುತ್ತಾರೆ. ನಿಧಿಯ ಉಳಿದ ಭಾಗ; ಅಂದರೆ 35 ಪ್ರತಿಶತವನ್ನು ಬೇರಾವುದೇ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುತ್ತಾರೆ. .

    ಹೀಗಾಗಿ, ನಿಮ್ಮ ಹೂಡಿಕೆಗೆ ಹೆಚ್ಚುವರಿ ಇಳುವರಿ (ಯೀಲ್ಡ್​) ದೊರೆಯುವ ಸಾಧ್ಯತೆ ಈ ಫಂಡ್​ಗಳಲ್ಲಿ ಅಧಿಕವಾಗಿರುತ್ತದೆ. ಅದಕ್ಕಾಗಿ ಇದಕ್ಕೆ ಡಿವಿಡೆಂಡ್​ ಯೀಲ್ಡ್​ ಫಂಡ್​ ಎಂಬ ಹೆಸರಿದೆ. ಈ ಫಂಡ್​ಗಳಲ್ಲಿ ಹೂಡಿಕೆಯಲ್ಲಿ ಕೂಡ ಒಂದಿಷ್ಟು ರಿಸ್ಕ್​ ಕೂಡ ಇದ್ದೇ ಇರುತ್ತದೆ.

    ಕೆಲವು ಪ್ರಮುಖ ಡಿವಿಡೆಂಡ್ ಯೀಲ್ಡ್ ಮ್ಯೂಚುಯಲ್ ಫಂಡ್‌ಗಳು ಕಳೆದೊಂದು ವರ್ಷದಲ್ಲಿ ಶೇಕಡಾ 30ಕ್ಕೂ ಅಧಿಕ ಲಾಭವನ್ನು ತಂದುಕೊಟ್ಟಿರುವುದು ಗಮನ ಸೆಳೆಯುವ ಸಂಗತಿಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಶೇಕಡಾ 20ಕ್ಕೂ (ವಾರ್ಷಿಕವಾಗಿ ಶೇ. 20ಕ್ಕೂ ಅಧಿಕ) ಹೆಚ್ಚು ಲಾಭವನ್ನು ಕೂಡ ಇವು ನೀಡಿವೆ. ಇಂತಹ ಕೆಲವು ಫಂಡ್​ಗಳ ವಿವರ ಇಲ್ಲಿದೆ.

    ಐಸಿಐಸಿಐ ಪ್ರುಡೆನ್ಶಿಯಲ್ ಡಿವಿಡೆಂಡ್ ಯೀಲ್ಡ್ ಇಕ್ವಿಟಿ ಫಂಡ್ ಕಳೆದೊಂದು ವರ್ಷದಲ್ಲಿ ಅಂದಾಜು ಶೇಕಡಾ 35.5 ಹಾಗೂ ಕಳೆದ ಮೂರು ವರ್ಷಗಳಲ್ಲಿ ಶೇಕಡಾ 30.9ರಷ್ಟು ಲಾಭ ನೀಡಿದೆ.

    ಆದಿತ್ಯ ಬಿರ್ಲಾ ಸನ್ ಲೈಫ್ ಡಿವಿಡೆಂಡ್ ಯೀಲ್ಡ್​ ಫಂಡ್​ ಕಳೆದೊಂದು ವರ್ಷದಲ್ಲಿ ಶೇಕಡಾ ಅಂದಾಜು 35.5ರಷ್ಟು ಹಾಗೂ ಕಳೆದ ಮೂರು ವರ್ಷಗಳಲ್ಲಿ ಶೇಕಡಾ 26 ರಷ್ಟು ಲಾಭವನ್ನು ಹೂಡಿಕೆದಾರರಿಗೆ ನೀಡಿದೆ.

    ಟೆಂಪಲ್ಟನ್ ಇಂಡಿಯಾ ಈಕ್ವಿಟಿ ಇನ್​ಕಮ್​ ಫಂಡ್​ ಕಳೆದೊಂದು ವರ್ಷದಲ್ಲಿ ಶೇಕಡಾ 28.2 ಹಾಗೂ ಕಳೆದ ಮೂರು ವರ್ಷಗಳಲ್ಲಿ ಶೇ. 25.9 ರಷ್ಟು ಲಾಭ ಗಳಿಸಿಕೊಟ್ಟಿದೆ.

    ಪ್ರಿನ್ಸಿಪಲ್ ಡಿವಿಡೆಂಡ್ ಯೀಲ್ಡ್​ ಫಂಡ್​ ಕಳೆದೊಂದು ವರ್ಷದಲ್ಲಿ ಶೇಕಡಾ 30.9 ಹಾಗೂ ಕಳೆದ ಮೂರು ವರ್ಷಗಳಲ್ಲಿ ಶೇಕಡಾ 21.8 ಲಾಭ ನೀಡಿದೆ.

    ಯುಟಿಐ ಡಿವಿಡೆಂಡ್ ಯೀಲ್ಡ್​ ಫಂಡ್​ ಕಳೆದೊಂದು ವರ್ಷದಲ್ಲಿ ಶೇಕಡಾ 30.8 ಹಾಗೂ ಕಳೆದ ಮೂರು ವರ್ಷಗಳಲ್ಲಿ ಶೇ. 21ರಷ್ಟು ಲಾಭವನ್ನು ಹೂಡಿಕೆದಾರರಿಗೆ ತಂದುಕೊಟ್ಟಿದೆ.

    ಸೂಚ್ಯಂಕ ದಾಖಲೆ ಮಟ್ಟ ತಲುಪಿದಾಗ ಲಾಭ-ನಷ್ಟ ಕಂಡ ಪ್ರಮುಖ ಷೇರುಗಳು ಯಾವವು?

    ಗುಂಪು ಹತ್ಯೆಯಲ್ಲಿ ಭಾಗಿಯಾದರೆ ಗಲ್ಲು ಶಿಕ್ಷೆ ಗ್ಯಾರಂಟಿ: ಲೋಕಸಭೆ ಅಂಗೀಕರಿಸಿದ ಹೊಸ ಕ್ರಿಮಿನಲ್​ ಕಾನೂನುಗಳಲ್ಲಿ ಏನೇನಿದೆ?

    ಷೇರು ಮಾರುಕಟ್ಟೆಯಲ್ಲೂ ವೈರಸ್​ ಹಾವಳಿ: ದಾಖಲೆ ಮಟ್ಟ ಮುಟ್ಟಿದ್ದ ಸೂಚ್ಯಂಕ ಏಕಾಏಕಿ ಕುಸಿದದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts