More

    ನೋಡ ನೋಡುತ್ತಿದ್ದಂತೆಯೇ ಕೊಚ್ಚಿಹೋಯ್ತು ಸಾಲುಗಟ್ಟಲೆ ಮನೆಗಳು! ಬೆಚ್ಚಿ ಬೀಳಿಸುವ ವಿಡಿಯೋ

    ಟೋಕಿಯೋ: ಕೆಲ ವರ್ಷಗಳಿಂದ ಕರ್ನಾಟಕದಲ್ಲಿ ಆಗುತ್ತಿರುವ ಪ್ರವಾಹವನ್ನು ನೀವು ನೋಡುತ್ತಿದ್ದೀರಿ. ಗುಡ್ಡ ಕುಸಿದೋ ಅಥವಾ ನೀರಿನ ರಭಸಕ್ಕೆ ಎಷ್ಟೋ ಮನೆಗಳು ನೀರು ಪಾಲಾಗಿದ್ದನ್ನು ಮತ್ತು ಮಣ್ಣು ಪಾಲಾಗಿದ್ದನ್ನು ಕಂಡಿದ್ದೀರಿ. ಆದರೆ ಈಗ ದೂರದ ಜಪಾನ್​ನಲ್ಲಿ ನಡೆದಿರುವ ದೃಶ್ಯ ನೋಡಿದರೆ ಒಮ್ಮೆಲೆ ಮೈ ಝುಂ ಎನ್ನಿಸುವುದು ಗ್ಯಾರಂಟಿ.

    ಈ ವಿಡಿಯೋ ಜಪಾನ್ ರಾಜಧಾನಿ ಟೋಕಿಯೋದಿಂದ ಸುಮಾರು 100 ಕಿಲೋ ಮೀಟರ್ ದೂರದಲ್ಲಿರುವ ಅಟಾಮಿ ಪ್ರದೇಶದಲ್ಲಿ ಚಿತ್ರೀಕರಿಸಿರುವುದು. ಆ ಪ್ರದೇಶದಲ್ಲಿ ಶನಿವಾರ ಭಾರೀ ಮಳೆಯಾಗಿದೆ. ಪರಿಣಾಮ ಸಾಕಷ್ಟು ಕಡೆ ಮಣ್ಣು ಕುಸಿತವಾಗಿದೆ. ಅದೇ ರೀತಿ ಆದ ಭೂಕುಸಿತವೊಂದರಲ್ಲಿ ಸುಮಾರು 130 ಮನೆಗಳು ಕೊಚ್ಚಿಕೊಂಡು ಹೋಗಿವೆ. 20ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ ಅದರ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

    “ಮಳೆಯಾಗುತ್ತಿರುವ ಕಾರಣ ಕಾರ್ಯಾಚರಣೆಯನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಲಾಗುತ್ತಿದೆ. ಕಾಣೆಯಾದವರನ್ನು ಹುಡುಕಲು ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದೇವೆ” ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಏತನ್ಮಧ್ಯೆ, ಜಪಾನ್ ಪ್ರಧಾನಿ ಯೋಶಿಹಿಡೆ ಸುಗಾ ಅವರು ಭೂಕುಸಿತಕ್ಕೆ ಬಲಿಯಾದವರಿಗೆ ಸಂತಾಪ ವ್ಯಕ್ತಪಡಿಸಿದರು ಮತ್ತು ತುರ್ತು ಕಾರ್ಮಿಕರು ಪ್ರಾಣ ಉಳಿಸಲು, ಜನರನ್ನು ರಕ್ಷಿಸಲು ಮತ್ತು ಸ್ಥಳಾಂತರಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು. (ಏಜೆನ್ಸೀಸ್)

    ‘ಬಿಗ್​ಬಾಸ್ ವಿನ್ನರ್ ಮಂಜು, ರನ್ನರ್ ಅಪ್ ವೈಷ್ಣವಿ’ ಇದೇ ಆಗೋದು ಅಂತಿದ್ದಾರೆ ಆ ಸ್ಪರ್ಧಿ

    ಅತಿಯಾಗಿ ಅಮೃತಬಳ್ಳಿ ಕಷಾಯ ಸೇವಿಸುವವರೇ ಎಚ್ಚರ! ನಿಮ್ಮ ಲಿವರ್​ಗೆ ನೀವೇ ತಂದುಕೊಳ್ಳಬಹುದು ಕುತ್ತು!

    ವೇದಿಕೆಯ ಮೇಲೇ ವನಿತಾಗೆ ಅವಮಾನಿಸಿದ ರಮ್ಯಾ ಕೃಷ್ಣ!? ಡ್ಯಾನ್ಸ್ ಶೋನಿಂದ ಹೊರಬಂದ ನಟಿ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts