'ಬಿಗ್​ಬಾಸ್ ವಿನ್ನರ್ ಮಂಜು, ರನ್ನರ್ ಅಪ್ ವೈಷ್ಣವಿ' ಇದೇ ಆಗೋದು ಅಂತಿದ್ದಾರೆ ಆ ಸ್ಪರ್ಧಿ

bb
Published on

ಬೆಂಗಳೂರು: ಬಿಗ್​ಬಾಸ್ ಸೀಸನ್ 8ರ ಎರಡನೇ ಇನ್ನಿಂಗ್ಸ್​ ಚೆನ್ನಾಗಿ ಮೂಡಿಬರುತ್ತಿದೆ. ಎರಡನೇ ಇನ್ನಿಂಗ್ಸ್ ಆರಂಭವಾಗಿ 12 ದಿನಗಳಲ್ಲಿ ನಿಧಿ ಸುಬ್ಬಯ್ಯ ಔಟ್ ಆಗಿ ಮನೆಯಿಂದ ಹೊರಬಂದಿದ್ದಾರೆ. ಈ ವೇಳೆ ಬಿಗ್​ಬಾಸ್ ಸೀಸನ್ 8ರ ವಿನ್ನರ್ ಮತ್ತು ರನ್ನರ್ ಅಪ್ ಯಾರಾಗುತ್ತಾರೆ ಎನ್ನುವ ಭವಿಷ್ಯವನ್ನೂ ನುಡಿದಿದ್ದಾರೆ.

ಎಲ್ಲರಿಗೂ ಗೊತ್ತಿರುವಂತೆ ಸ್ಪರ್ಧಿಗಳು ಎಲಿಮಿನೇಟ್ ಆದ ಮೇಲೆ ಅವರನ್ನು ವೇದಿಕೆ ಮೇಲೆ ಕರೆದು ಮಾತನಾಡಿಸಲಾಗುತ್ತದೆ. ಅದೇ ರೀತಿ ಭಾನುವಾರದಂದು ನಿಧಿ ಅವರನ್ನು ಮನೆಯಿಂದ ಹೊರಗೆ ಕರೆದ ಸುದೀಪ್ ಅವರೊಂದಿಗೆ ಮಾತನಾಡಿದ್ದಾರೆ. ನಿಮ್ಮ ಪ್ರಕಾರ ಫೈನಲ್​ನಲ್ಲಿ ಯಾರು ಯಾರು ಇರುತ್ತಾರೆ ಎಂದು ಕೇಳಿದ್ದಾರೆ. ಅದಕ್ಕೆ ನಿಧಿ ಅವರು, "ಮಂಜು, ವೈಷ್ಣವಿ, ಶುಭಾ, ದಿವ್ಯಾ ಉರುಡುಗ ಹಾಗೂ ಪ್ರಶಾಂತ್ ಅವರು ಇರುತ್ತಾರೆ" ಎಂದು ಉತ್ತರಿಸಿದ್ದಾರೆ. ಟಾಪ್ ಎರಡು ಸ್ಥಾನದಲ್ಲಿ ಯಾರಿರುತ್ತಾರೆ ಎಂದು ಪ್ರಶ್ನಿಸಿದಾಗ ಮಂಜು ಹಾಗೂ ವೈಷ್ಣವಿ ಎಂದು ಹೇಳಿದ್ದಾರೆ. ಅದರಲ್ಲಿ ವಿನ್ನರ್ ಯಾರು ಎಂದು ಪ್ರಶ್ನಿಸಿದಾಗ ಮಂಜು ಎಂದು ಖುಷಿಯಿಂದ ಉತ್ತರಿಸಿದ್ದಾರೆ.

ನಿಧಿ ಅವರ ಈ ಭವಿಷ್ಯ ನಿಜವಾಗಲಿದೆ ಎಂದು ಅನೇಕರು ಹೇಳಲಾರಂಭಿಸಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ಮಂಜು ಮತ್ತು ಅರವಿಂದ್​ಗೆ ಒಳ್ಳೆಯ ಸ್ಪರ್ಧೆ ಇತ್ತು. ಆದರೆ ಎರಡನೇ ಇನ್ನಿಂಗ್ಸ್​ನಲ್ಲಿ ಅರವಿಂದ್, ಚಕ್ರವರ್ತಿ ಹಾಗೂ ಪ್ರಶಾಂತ್ ಜತೆ ಹೆಚ್ಚಾಗಿ ಸೇರುತ್ತಿದ್ದು, ಅವರ ಮೇಲಿದ್ದ ಅಭಿಪ್ರಾಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಅರವಿಂದ್​ನನ್ನು ಹಿಂದಿಕ್ಕಿ ಮಂಜು ವಿನ್ ಆಗುವುದರಲ್ಲಿ ಅನುಮಾನವಿಲ್ಲ ಎನ್ನುತ್ತಿದ್ದಾರೆ ಬಿಗ್​ಬಾಸ್ ಅಭಿಮಾನಿಗಳು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net