More

    ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ

    ರಾಯಚೂರು: ತಾಲೂಕಿನಲ್ಲಿ ಭಾನುವಾರ ತಡರಾತ್ರಿ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಎಪಿಎಂಸಿಗೆ ಮಾರಾಟಕ್ಕೆ ತಂದ ಭತ್ತ ಹಾನಿಗೊಳಗಾಗಿದ್ದಾರೆ. ತಗ್ಗುಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿ ಜನರು ಸಮಸ್ಯೆ ಎದುರಿಸುವಂತಾಗಿದೆ.
    ತಡರಾತ್ರಿ ಆರಂಭವಾಗಿ ಬೆಳಗ್ಗೆ 6ರವರೆಗೆ ಧಾರಾಕಾರವಾಗಿ ಮಳೆ ಸುರಿದಿದೆ. ಇದರಿಂದಾಗಿ ತಾಲೂಕಿನಾದ್ಯಂತ ವಿದ್ಯುತ್ ಸ್ಥಗಿತಗೊಂಡಿದ್ದು, ನಿದ್ರೆಗೆ ಜಾರಿದ ಜನರು ಜಾಗರಣೆ ಮಾಡುವಂತಾಗಿತ್ತು. ಯಕ್ಲಾಸಪುರ ಸೇರಿದಂತೆ ನಗರದ ಹಲವಾರು ಬಡಾವಣೆಯಲ್ಲಿನ ತಗ್ಗುಪ್ರದೇಶದಲ್ಲಿನ ಮನೆಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.
    ಸ್ಥಳೀಯ ಎಪಿಎಂಸಿಗೆ ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಹೆಚ್ಚಿನ ಪ್ರಮಾಣದಲ್ಲಿ ಭತ್ತವನ್ನು ಮಾರಾಟಕ್ಕೆ ತಂದು ಟೆಂಡರ್‌ಗಾಗಿ ರಾಶಿ ಮಾಡಲಾಗಿತ್ತು. ಮಳೆ ನೀರು ಪ್ರಾಕಾರಕ್ಕೆ ನುಗ್ಗಿ ಲಕ್ಷಾಂತರ ರೂ. ವೌಲ್ಯದ ಭತ್ತ ಹಾನಿಗೊಳಗಾಗಿದೆ. ರಾತ್ರಿಯಿಡಿ ರೈತರು ಭತ್ತದ ರಾಶಿಗೆ ನೀರು ನುಗ್ಗದಂತೆ ಕಷ್ಟಪಟ್ಟರು ಬಹಳಷ್ಟು ಭತ್ತ ನೀರಿನಲ್ಲಿ ತೊಯ್ದು ನಷ್ಟವುಂಟಾಗುವಂತಾಯಿತು.
    ತಾಲೂಕಿನ ಯರಗೇರಾ, ಚಂದ್ರಬಂಡಾ, ಕಡಗಂದೊಡ್ಡಿ, ಸಿಂಗನೋಡಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿನ ತೋಟಗಳಲ್ಲಿ ಬೆಳೆಯಲಾಗಿದ್ದ ಮಾವು, ಮೋಸಂಬಿ, ಪಪ್ಪಾಯಿ, ದಾಳಿಂಬೆ ಮಳೆಗಳು ಧಾರಾಕಾರ ಮಳೆಗೆ ಹಾನಿಗೊಳಗಾಗಿವೆ.
    ಗ್ರಾಮಾಂತರ ಪ್ರದೇಶದಲ್ಲಿ ಹಲವೆಡೆ ಬಿರುಗಾಳಿ ಸಹಿತ ಮಳೆಗೆ ವಿದ್ಯುತ್ ಕಂಬ ಮತ್ತು ಗಿಡಗಳು ನೆಲಕ್ಕುರುಳಿದ್ದು, ತಗ್ಗು ಪ್ರದೇಶ ಮತ್ತು ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೂ ಸಮಸ್ಯೆ ಎದುರಿಸುವಂತಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts