More

    ಹೆಚ್ಚು ಕಬ್ಬು ನುರಿಸುವ ಮೂಲಕ ಅಭಿವೃದ್ಧಿಗೆ ಬದ್ಧ

    ಎಂ.ಕೆ.ಹುಬ್ಬಳ್ಳಿ: ಪ್ರಸಕ್ತ ಸಾಲಿನ ಹಂಗಾಮಿನಲ್ಲಿ ಅಧಿಕ ಪ್ರಮಾಣದಲ್ಲಿ ಕಬ್ಬು ನುರಿಸಿ, ಕಾರ್ಖಾನೆಯನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುತ್ತೇವೆ ಎಂದು ಮಲಪ್ರಭಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ನಾಸೀರ್ ಬಾಗವಾನ ಹೇಳಿದ್ದಾರೆ.

    ಸ್ಥಳೀಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ 2020-21ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ ಕಳೆದ ಹಂಗಾಮಿನಲ್ಲಿ ರೈತರು ಪೂರೈಸಿದ್ದ ಕಬ್ಬಿನ ಬಾಕಿ ಹಣ ಸುಮಾರು 20 ಕೋಟಿ ರೂ.ಗಳನ್ನು ಪಾವತಿಸಿದ್ದು, ಕಾರ್ಮಿಕರ 3ತಿಂಗಳ ವೇತನವನ್ನು ನೀಡಿದ್ದೇವೆ. ಕಬ್ಬು ಪೂರೈಸಿದ 15 ದಿನಗಳಲ್ಲಿ ರೈತರಿಗೆ ಬಿಲ್ ನೀಡುವ ನಿರ್ಧಾರ ಮಾಡಿದ್ದೇವೆಂದು ಮಾಹಿತಿ ನೀಡಿದರು.

    ವ್ಯವಸ್ಥಾಪಕ ನಿರ್ದೇಶಕ ಶಿವ ಕುಲಕರ್ಣಿ ಮಾತನಾಡಿ, ಜಿಲ್ಲಾಧಿಕಾರಿಗಳ ಸಹಕಾರ, ನೂತನ ಆಡಳಿತ ಮಂಡಳಿ ಉತ್ಸಾಹದಿಂದ ಹಣಕಾಸಿನ ವ್ಯವಸ್ಥೆ ಮಾಡಿಕೊಂಡು ಕಾರ್ಖಾನೆ ಆರಂಭಿಸಿದ್ದು, ಪ್ರಸಕ್ತ ಹಂಗಾಮಿನಲ್ಲಿ 4 ಲಕ್ಷ ಟನ್‌ಗೂ ಅಧಿಕ ಕಬ್ಬು ನುರಿಸಬೇಕಿದೆ ಎಂದರು.

    ಇಂಚಲದ ಡಾ.ಶಿವಾನಂದ ಭಾರತೀ ಸ್ವಾಮೀಜಿ, ಬೈಲೂರು ನಿಜಗುಣಾನಂದ ಸ್ವಾಮೀಜಿ, ಕಾದರವಳ್ಳಿ ಡಾ.ಪಾಲಾಕ್ಷ ಶಿವಯೋಗೀಶ್ವರರು, ಗುರುಪುತ್ರ ಮಹಾರಾಜರು, ಮುತ್ನಾಳದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶಿವಪುತ್ರ ಸ್ವಾಮೀಜಿ, ಶಶಿಕಾಂತ ಪಡಸಲಗಿ ಗುರುಗಳು ಹಾಗೂ ಲಿಂಗಾನಂದ ಅವಧೂತರು ಹಂಗಾಮಿಗೆ ಚಾಲನೆ ನೀಡಿದರು.

    ಉಪಾಧ್ಯಕ್ಷೆ ಲಕ್ಷ್ಮೀ ಅರಳಿಕಟ್ಟಿ, ನಿರ್ದೇಶಕರಾದ ಮೀನಾಕ್ಷೀ ನೆಲಗಳಿ, ಅಶೋಕ ಯಮಕನಮರ್ಡಿ, ಲಕ್ಷ್ಮಣ ಎಮ್ಮಿ, ಶಂಕರಗೌಡ ಪಾಟೀಲ, ಮಂಜುನಾಥ ಪಾಟೀಲ, ಜ್ಯೋತಿಬಾ ಹೈಬತ್ತಿ, ಬಸವರಾಜ ಬೆಂಡಿಗೇರಿ, ಸಿದ್ದಪ್ಪ ದೂರಪ್ಪನವರ, ಅಶೋಕ ಬೆಂಡಿಗೇರಿ, ಬಸವರಾಜ ಪುಂಡಿ, ಭರತೇಶ ಶೇಬಣ್ಣವರ, ಸಂಜೀವ ಹುಬಳೆಪ್ಪನವರ, ಸಾವಂತ ಕಿರಬನವರ, ಕಾರ್ಖಾನೆ ಅಧೀಕ್ಷಕ ಎಸ್.ಜಿ.ಹೆಗಡೆ, ರೈತ ಮುಖಂಡರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts