More

    ಉತ್ತಮ ಬದುಕು ಕಟ್ಟಿಕೊಳ್ಳಲು ನೈತಿಕ ಮೌಲ್ಯ ಅಗತ್ಯ

    ಅರಸೀಕೆರೆ: ಸಾಮಾಜಿಕ ಹಾಗೂ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡಲ್ಲಿ ಮನುಷ್ಯ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ತಿಪಟೂರಿನ ಷಡಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಹೇಳಿದರು.

    ತಾಲೂಕಿನ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದಲ್ಲಿ ಮಹದೇಶ್ವರ ಜಾತ್ರೆ ಅಂಗವಾಗಿ ಗುರುವಾರ ರಾತ್ರಿ ಆಯೋಜಿಸಿದ್ದ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದರು. ಬಾಲ್ಯದಿಂದಲೂ ನನಗೆ ಶ್ರೀಮಠ ಹಾಗೂ ಡಾ.ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳೊಂದಿಗೆ ಒಡನಾಟವಿದೆ. ಜಗದ್ಗುರುಗಳ ಆದೇಶದಂತೆ ಬದುಕು ನಡೆಸಿದ್ದರಿಂದಾಗಿ ಹುಬ್ಬಳ್ಳಿ ಮೂರು ಸಾವಿರ ಮಠದ ಪೀಠಾಧ್ಯಕ್ಷರಾಗಲು ಸಾಧ್ಯವಾಗಿದೆ. ಅಂತಹ ದಿವ್ಯ ಶಕ್ತಿ ಹೊಂದಿರುವ ಕೋಡಿಮಠ ಬಡವರು, ದೀನ, ದಲಿತರ ಆಶಕಿರಣವಾಗಿದೆ ಎಂದು ಹೇಳಿದರು.

    ಕೋಳಗುಂದ ಕೇದಿಗೆ ಮಠದ ಶ್ರೀ ಜಯಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಬಸವಾದಿ ಶಿವಶರಣರ ಆಶಯದಂತೆ ಹಸಿದವರಿಗೆ ಅನ್ನ, ಅರಿವು, ಬಡ ಮಕ್ಕಳಿಗೆ ಶಿಕ್ಷಣ ನೀಡುವ ದಿಸೆಯಲ್ಲಿ ಶ್ರೀಮಠ ದಶಕಗಳ ಕಾಲದಿಂದಲೂ ನಿರಂತರವಾಗಿ ತೊಡಗಿಸಿಕೊಂಡಿದೆ. ಮಠಕ್ಕೆ ಭಕ್ತರೇ ಆಸ್ತಿ. ಅಂತೆಯೇ ಭಕ್ತರಿಗೆ ಮಠವೇ ಆಸ್ತಿ ಎನ್ನುವಂತಿದೆ. ಗುರು ಹಾಗೂ ಶಿಷ್ಯರ ನಡುವಿನ ಸಂಬಂಧ ಗೌರವ ಹಾಗೂ ಪ್ರೀತಿಯ ಸಂಕೋಲೆ ಇದ್ದಂತೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

    ವೈದ್ಯ ಡಾ.ಶಿವಕುಮಾರ್ ಶ್ರೀಮಠದೊಂದಿಗಿನ ಬಾಂಧವ್ಯ ಕುರಿತು ಮಾತನಾಡಿದರು. ಶ್ರೀ ಮಠದ ಪೀಠಾಧ್ಯಕ್ಷ ಡಾ.ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ಕ್ಷೇತ್ರದ ಉತ್ತರಾಧಿಕಾರಿ ಚೇತನ್ ಮರಿದೇವರು, ಮಾಡಾಳು ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಮಂಡಳಿ ಸದಸ್ಯ ಸಿದ್ದೇಶ್ ನಾಗೇಂದ್ರ , ವೈದ್ಯ ದಂಪತಿ ಬಿಂದು ಡಾ.ಶಿವಕುಮಾರ್, ಶಿಕ್ಷಕ ಲೋಕೇಶ್, ಮಹದೇವಪ್ಪ ಸೇರಿದಂತೆ ಹರಗುರು ಚರಮೂರ್ತಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts