More

    ಐಷಾರಾಮಿ ಜೀವನದಿಂದ ಕಲುಷಿತ ಸನ್ನಿವೇಶ

    ಅರಸೀಕೆರೆ: ಜನರು ಐಷಾರಾಮಿ ಜೀವನದ ಮೊರೆ ಹೋಗುತ್ತಿರುವ ಪರಿಣಾಮ ಸಮಾಜದಲ್ಲಿ ಕಲುಷಿತ ಸನ್ನಿವೇಶ ನಿರ್ಮಾಣವಾಗುತ್ತಿದೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

    ತಾಲೂಕಿನ ಆದಿಹಳ್ಳಿ ಗ್ರಾಮದಲ್ಲಿ ಗುರುತೋರಿದ ದಾರಿ 115ನೇ ತಿಂಗಳಮಾಮನ ತೇರಿನ ಹುಣ್ಣಿಮೆ ಹಾಗೂ ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

    ಆಧುನಿಕತೆಯ ಬೆಳಕು ನಮ್ಮನ್ನು ಸಾಮಾಜಿಕ ಮೌಲ್ಯ, ರೀತಿ, ನೀತಿಗಳ ಪಾಲನೆಯತ್ತ ಕೊಂಡೊಯ್ಯಬೇಕು. ಆದರೆ, ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಅಧಃಪತನದತ್ತ ಸಾಗಿಸುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಶಿಕ್ಷಣದಿಂದ ಸಂಸ್ಕಾರ ದೊರೆಯುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಪಾಲಕರು ಮತ್ತು ಶಿಕ್ಷಕರ ಮೇಲಿದೆ. ಪ್ರಧಾನಿ ನರೇಂದ್ರ ಮೋದಿ ತಾಯಿ ಪಾದದ ಬಳಿ ಕುಳಿತು ಆಶೀರ್ವಾದ ಬೇಡುತ್ತಿದ್ದರು. ಮಾತೃ ಶಕ್ತಿ, ಪ್ರೇರಣೆಯಿಂದಲೇ ಎತ್ತರದ ಸ್ಥಾನಕ್ಕೆ ಬಂದಿದ್ದೇನೆ ಎಂದು ಖುದ್ದು ಮಾಜಿ ಪ್ರಧಾನಿ ಎಚ್.ಡಿ.ದೇವಗೌಡರೇ ಹೇಳಿಕೊಂಡಿರುವುದು ಯುವ ಸಮುದಾಯಕ್ಕೆ ಮಾದರಿಯಾಗಿದೆ. ಮಕ್ಕಳು ತಪ್ಪು ಮಾಡಿದ ವೇಳೆ ತಿದ್ದಿ ತೀಡುವ ಕೆಲಸ ಮಾಡಿದರೆ ಮಾತ್ರವೇ ಸರಿದಾರಿಯಲ್ಲಿ ಹೋಗಲು ಸಾಧ್ಯವಿದೆ. ಇಂದು ನಡೆಯುತ್ತಿರುವ ಅನರ್ಥಗಳಿಗೆ ಸಾಮಾಜಿಕ ಅರಿವಿನ ಕೊರತೆಯೇ ಕಾರಣವಾಗಿದೆ. ಜಾತ್ರೆ, ರಥೋತ್ಸವ, ಹಬ್ಬ ಹರಿದಿನಗಳು ಮನುಷ್ಯನ ಬಾಳಿಗೆ ಶಾಂತಿ, ನೆಮ್ಮದಿ ಕರುಣಿಸುತ್ತಿದ್ದು ಸಂಭ್ರಮದಿಂದ ಪಾಲ್ಗೊಳ್ಳಿ ಎಂದು ಕಿವಿಮಾತು ಹೇಳಿದರು.

    ಹಾಸನ ಶಾಖಾ ಮಠದ ಶ್ರೀಶಂಭುನಾಥಸ್ವಾಮೀಜಿ ಮಾತನಾಡಿ, ಸುಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನವು ಡಾ.ಶ್ರೀಬಾಲಗಂಗಾಧರನಾಥ ಶ್ರೀಗಳ ಆಶಯದಂತೆ ಡಾ.ಶ್ರಿ ನಿರ್ಮಲಾನಂದನಾಥ ಸ್ವಾಮೀಜಿ ಶೈಕ್ಷಣಿಕ, ಆರೋಗ್ಯ, ಅರಿವು, ಅರಿವೆ ಸೇರಿದಂತೆ ಸಮಾಜಮುಖಿ ಚಟುವಟಿಕೆಗಳನ್ನು ನಿರ್ವಹಿಸಿಕೊಂಡು ಬರುತ್ತಿದೆ ಎಂದು ಹೇಳಿದರು. ಕಸಾಪ ಜಿಲ್ಲಾಧ್ಯಕ್ಷ ಡಾ.ಮಲ್ಲೇಶಗೌಡ ಮಾತನಾಡಿ, ಆಧುನಿಕತೆ ಜ್ಞಾನ ಪ್ರಸಾರಕ್ಕೆ ಮೀಸಲಿರಬೇಕೆ ವಿನಹಃ ವಿನಾಶಕ್ಕಲ್ಲ. ಮೊಬೈಲ್ ಸಂಸ್ಕೃತಿ ಯುವ ಸಮುದಾಯದ ಮೇಲೆ ದುಷ್ಟರಿಣಾಮ ಬೀರುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದರು. ಆದಿಹಳ್ಳಿ ಶಾಖಾಮಠದ ಶ್ರೀಶಿವಪುತ್ರನಾಥ ಸ್ವಾಮೀಜಿ, ಮುಖಂಡರಾದ ಮೆಟ್ರೋಬಾಬು, ಪ್ರಾಂಶುಪಾಲ ಲಿಂಗರಾಜು, ದೈಹಿಕ ಶಿಕ್ಷಕ ನಾಗೇಶ್, ಸೇರಿದಂತೆ ಚುನಾಯಿತ ಜನಪ್ರತಿನಿಧಿಗಳು ಹಾಗೂ ನಾಗರಿಕರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts