More

    ಅರಸೀಕೆರೆ ಗ್ರಾಮಸ್ಥರಿಂದ ದೊಡ್ಡಕೆರೆಗೆ ಬಾಗಿನ ಸಮರ್ಪಣೆ

    ಹರಪನಹಳ್ಳಿ: ಅರಸೀಕೆರೆ ಗ್ರಾಮದ ಐತಿಹಾಸಿಕ ದೊಡ್ಡಕೆರೆ 22 ವರ್ಷಗಳ ನಂತರ ತುಂಬಿದ್ದು ಗ್ರಾಮಸ್ಥರು ಶುಕ್ರವಾರ ಕೆರೆಗೆ ಗಂಗಾಪೂಜೆ ನೇರವೇರಿಸಿ, ಬಾಗಿನ ಅರ್ಪಿಸಿದರು. ಕೋಲಶಾಂತೇಶ್ವರ ಮಠ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಬಾಗಿನ ಸಲ್ಲಿಸಿ, ಎರಡು ದಶಕಗಳ ನಂತರ ಕೆರೆ ಕೋಡಿ ಬಿದ್ದಿದ್ದು ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಕೃಷಿ ಸಮೃದ್ಧಗೊಳ್ಳಲಿ ಎಂದರು.

    ಮೆರವಣಿಗೆಯಲ್ಲಿ ಸಮಾಳ, ಡೊಳ್ಳು, ತಮಟೆ ಸೇರಿ ಸಕಲ ವಾದ್ಯಗಳ ಮೂಲಕ ಗ್ರಾಮದ ಪುಟ್ಟನಗೌಡರ ಮನೆತನದಿಂದ ಮೆರವಣಿಗೆ ಹೊರಟು ಕೆರೆಯವರೆಗೂ ಮೆರವಣಿಗೆ ಸಾಗಿತು. ನೆರೆದಿದ್ದ ಸಾವಿರಾರು ಸಂಖ್ಯೆಯ ಸಾರ್ವಜನಿಕರು ಬಾಗಿನ ಅರ್ಪಣೆಗೆ ಸಾಕ್ಷಿಯಾದರು.

    ಅರಸೀಕೆರೆ ಕೋಡಿಯಿಂದ ಕೆರೆಗುಡಿಹಳ್ಳಿ ಗ್ರಾಮದ ಬಸವೇಶ್ವರ ದೇವಸ್ಥಾನದವರೆಗೆ ಅಳವಡಿಸಿದ್ದ ವಿದ್ಯುತ್ ದೀಪಗಳಿಂದ ಕೆರೆ ಆಕರ್ಷಿಣಿಯವಾಗಿತ್ತು. ಗ್ರಾಮದ ಮಹಿಳೆಯರು ಬೆಳಿಗ್ಗೆಯಿಂದಲೇ ಕುಟುಂಬ ಸಮೇತ ತಂಡೋಪ ತಂಡವಾಗಿ ಕೆರೆಯ ಕೋಡಿ ಬಳಿ ಗಂಗಾಪೂಜೆ ನೆರವೇರಿಸಿ ತುಂಬಿದ ಕೆರೆಯನ್ನು ಕಣ್ತುಂಬಿಕೊಂಡರು.

    ಈ ವೇಳೆ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವೈ.ಡಿ ಅಣ್ಣಪ್ಪ, ಪ್ರಶಾಂತ್ ಪಾಟೀಲ್, ಗ್ರಾಪಂ ಆಧ್ಯಕ್ಷೆ ವೈ.ಟಿ. ರೇಖಾ ಕೊಟ್ರೇಶ್, ಬಿ.ರಾಮಣ್ಣ, ಪೂಜಾರ ಮರಿಯಪ್ಪ, ಅಡ್ಡಿ ಚನ್ನವೀರಪ್ಪ, ಎ.ಕೆ ರವಿ, ಅಬೀಬ್ ಸಾಬ್, ಮಹಮ್ಮದ್ ಸಾಬ್, ಬಣಕಾರ ಶಿವಪ್ಪ, ಚಂದ್ರಪ್ಪ, ಮಂಜುನಾಥ ಗೌಡ, ಸಿದ್ದಪ್ಪ, ನವೀನ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts