More

    ಕರೊನಾದ ನಂತರ ಬಂತು ಮತ್ತೊಂದು ಭಯಾನಕ ಕಾಯಿಲೆ! ಬ್ರಿಟನ್​ನಲ್ಲಿ ಇಬ್ಬರಿಗೆ ಮಂಕಿಪಾಕ್ಸ್ ದೃಢ!

    ಲಂಡನ್​: ಪೂರ್ತಿ ವಿಶ್ವವನ್ನೇ ಆವರಿಸಿದ ಕರೊನಾದಿಂದ ಜಗತ್ತು ಈಗ ತಾನೇ ಚೇತರಿಸಿಕೊಳ್ಳಲಾರಂಭಿಸಿದೆ. ಅಷ್ಟರಲ್ಲಾಗಲೇ ಮತ್ತೊಂದು ಭಯಾನಕ ಸೋಂಕು ಎಂಟ್ರಿ ಕೊಟ್ಟಿರುವ ಸೂಚನೆ ಸಿಕ್ಕಿದೆ. ಬ್ರಿಟನ್​ನಲ್ಲಿ ಒಂದೇ ಕುಟುಂಬದ ಇಬ್ಬರಲ್ಲಿ ಮಂಕಿಪಾಕ್ಸ್ ದೃಢವಾಗಿದೆ.

    ಬ್ರಿಟನ್​ನ ನಾರ್ತ್ ವೇಲ್ಸ್​ನ ಕುಟುಂಬವೊಂದರ ಇಬ್ಬರು ಸದಸ್ಯರಲ್ಲಿ ಮಂಕಿಪಾಕ್ಸ್​ ಸೋಂಕು ಕಾಣಿಸಿಕೊಂಡಿದೆ. ಅವರಿಬ್ಬರೂ ಬೇರೆ ದೇಶದಿಂದ ಬಂದಿರುವುದಾಗಿ ಬ್ರಿಟನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಸೋಂಕು ಮನುಷ್ಯರಿಂದ ಮುನಷ್ಯರಿಗೆ ಹರಡುವ ಸಾಧ್ಯತೆ ಅತ್ಯಂತ ಕಡಿಮೆಯಿದೆ ಎಂದು ತಿಳಿಸಲಾಗಿದೆ.

    ಮಂಕಿಪಾಕ್ಸ್​ ಗುಣಲಕ್ಷಣಗಳು ಸಿಡುಬಿನ ರೀತಿಯ ಗುಣಲಕ್ಷಣಗಳನ್ನೇ ಹೊಂದಿದೆ. ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ ಈ ಸೋಂಕು ಪ್ರಾಣಿಯ ಸಂಪರ್ಕಕ್ಕೆ ಬರುವ ಮನುಷ್ಯರಿಗೂ ಹಬ್ಬುತ್ತದೆ. ಸಾಮಾನ್ಯವಾಗಿ ಆಫ್ರಿಕಾ ದೇಶದಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ. ಈ ಸೋಂಕು ಬರುವವರಿಗೆ ಮೊದಲು ಚರ್ಮದಲ್ಲಿ ಅಲರ್ಜಿ ಕಾಣಿಸಿಕೊಳ್ಳುತ್ತದೆ. ನಂತರ ತಂಡಿ, ಜ್ವರ, ಮೈ ಕೈ ನೋವು, ತಲೆ ನೋವು ಕಾಣಿಸಿಕೊಳ್ಳುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ಮಂಕಿಪಾಕ್ಸ್ ಮರಣ ಪ್ರಮಾಣ ಶೇ. 11ರಷ್ಟಿದೆ. ಸಿಡುಬಿಗೆ ನೀಡುವ ಲಸಿಕೆಯೇ ಈ ಸೋಂಕಿಗೂ ಪರಿಣಾಮಕಾರಿ ಎನ್ನಲಾಗಿದೆ. (ಏಜೆನ್ಸೀಸ್)

    ಟ್ಯಾಕ್ಸಿ ರೈಡ್ ಮಾಡಿ ದುಡ್ಡಿನ ಬದಲು ಸೆಕ್ಸ್ ಆಫರ್​ ಕೊಡ್ತಾರೆ ಮಹಿಳೆಯರು! ಈ ವಿಚಿತ್ರ ದೇಶದಲ್ಲಿ ಶೇ. 5.6 ಜನರಿಗಿದೆ ಏಡ್ಸ್​

    17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

    ಗಂಡನನ್ನು ಕೊಂದು ಆತನ ಮರ್ಮಾಂಗ ಫ್ರೈ ಮಾಡಿದ ಹೆಂಡತಿ! ಮಹಿಳೆಯ ಹುಚ್ಚಾಟ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts