More

    VIDEO | ಜಿಂಕೆ ಮೇಲೆ ಕೋತಿ ಕುಳಿತು ಸವಾರಿಗೆ ಹೊರಟಿದ್ದು ಎಲ್ಲಿಗೆ?

    ವನ್ಯ ಜೀವಿಗಳ ಬದುಕಿನ ಅಪರೂಪದ ಚಿತ್ರಗಳನ್ನು ಅರಣ್ಯ ಅಧಿಕಾರಿ ಸುಸಂತಾ ನಂದ ಅವರು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೆ ಮಾಡಿ ಪ್ರಾಣಿ ಪ್ರಿಯರಿಗೆ ಹಾಗೂ ಮಕ್ಕಳಿಗೆ ಮನೋರಂಜನೆ ನೀಡುವುದರೊಂದಿಗೆ ಪ್ರಾಣಿ ಹಾಗೂ ಅರಣ್ಯದ ಬಗ್ಗೆ ಮಾಹಿತಿ ಕೂಡ ನೀಡುತ್ತಾರೆ.

    ಅವರು ಹಂಚಿಕೊಂಡ ಹಲವು ವಿಡಿಯೋಗಳು ವೈರಲ್​ ಆಗಿವೆ. ಈಗ ಚೇಷ್ಟೆಗೆ ಹೆಸರಾದ ಕೋತಿ ಜಿಂಕೆ ಮೇಲೆ ಸವಾರಿ ಮಾಡುತ್ತಿರುವ ಅಪರೂಪದ ವಿಡಿಯೋ ಅಪ್​ಲೋಡ್​ ಮಾಡಿದ್ದಾರೆ.

    ಸಾಮಾಜಿಕ ಜಾಲ ತಾಣದಲ್ಲಿ ಅಪ್​ಲೋಡ್​ ಮಾಡಿದ ವಿಡಿಯೋಗೆ ಐಎಫ್​ಎಸ್​ ಅಧಿಕಾರಿ ಸುಸಂತಾ ನಂದ ಅವರು ಪ್ರೀತಿಯ ವಿಡಿಯೋ ನಿಮಗಾಗಿ, ಈ ವಿಡಿಯೋ ನೋಡಿದರೆ ನೀವು ಹೆಚ್ಚು ನಗುತ್ತೀರಿ. ಇದು ಜಿಂಕೆ ಕ್ಯಾಬ್​. ಜಿಂಕೆ ಮೇಲೆ ಕೋತಿ ಕುಳಿತು ಆರಾಮವಾಗಿ ಸಾಗುತ್ತಿದೆ ಎಂದು ಶೀರ್ಷಿಕೆ ಬರೆದು ಪೋಸ್ಟ್​ ಮಾಡಿದ್ದಾರೆ.

    ಜಿಂಕೆ ಹಾಗೂ ಕೋತಿಗಳ ಹಿಂಡು ಅರಣ್ಯದಲ್ಲಿ ಇರುತ್ತದೆ. ಜಿಂಕೆ ಪಕ್ಕದಲ್ಲಿ ಕೋತಿ ಕುಳಿತಿರುತ್ತದೆ. ಜಿಂಕೆ ಹುಲ್ಲುಗಾವಲು ಕಡೆ ನಡೆಯಲು ಮುಂದಾಗುತ್ತಿದ್ದಂತೆ ಕೋತಿ ನೆಗೆದು ಜಿಂಕೆ ಮೇಲೆ ಕೂರುತ್ತದೆ. ಜಿಂಕೆ ಕೋತಿಯನ್ನು ಹುಲ್ಲುಗಾವಲು ಬಳಿ ಹೊತ್ತು ಸಾಗುತ್ತದೆ. ಹುಲ್ಲು ಮೇಯುತ್ತಿದ್ದ ವೇಳೆಯೂ ಕೋತಿ ಜಿಂಕೆ ಮೇಲೆ ಕುಳಿತಿರುತ್ತದೆ. ವಿಡಿಯೋದಲ್ಲಿ ಹಲವು ಕೋತಿಗಳು ಕಾಣುತ್ತವೆ.

    ಈ ವಿಡಿಯೋಗೆ ಹಲವು ಮಂದಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ನಾವು ಮಕ್ಕಳಾಗಿದ್ದ ವೇಳೆ ಕಲಿತ ನೀತಿ ಪಾಠದಂತೆ ಇದೆ. ಪ್ರಾಣಿಗಳು ಕೂಡ ಏಕತೆಯಿಂದ ಹಾಗೂ ಸಂತೋಷವಾಗಿ ಬದುಕುತ್ತವೆ ಎಂದು ಪ್ರತಿಕ್ರಿಯೆ ವ್ಯಕ್ತವಾಗಿದೆ. (ಏಜೆನ್ಸೀಸ್​)

    ಹಬ್ಬ ಮಾಡಲು ಮನೆಯಲ್ಲಿ ಅಕ್ಕಿ ಇಲ್ಲ ಎಂದು ಹೀಗೇ ಮಾಡೋದಾ? ‘ಭಯಂಕರ’ ಹಬ್ಬದೂಟದ ಬೆಚ್ಚಿ ಬೀಳುವ ವೀಡಿಯೋ ವೈರಲ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts