More

    ಆನ್‌ಲೈನ್ ಶಿಕ್ಷಣದ ನೆಪದಲ್ಲಿ ಅಕ್ರಮ ಹಣ ವರ್ಗಾವಣೆ; ಚೀನಾ ಮೂಲದ ಶಿಕ್ಷಣ ಸಂಸ್ಥೆ ವಿರುದ್ಧ ಇಡಿ ಕ್ರಮ!

    – ಫಿಜನ್ ಎಜುಕೇಷನ್ ಕಂಪನಿಯ 8 ಕೋಟಿ ರೂ. ಜಪ್ತಿ
    ಬೆಂಗಳೂರು: ಚೀನಾ ಮೂಲದ ಆನ್‌ಲೈನ್ ಶಿಕ್ಷಣ ಸಂಸ್ಥೆ ಫಿಜನ್ ಎಜುಕೇಷನ್ ಟೆಕ್ನಾಲಜಿ ಇಂಡಿಯಾ ಪ್ರೈ.ಲಿ. ಕಂಪನಿಗೆ ಸೇರಿದ 8.26 ಕೋಟಿ ರೂ.ಅನ್ನು ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡಿದೆ.

    ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಏಪ್ರಿಲ್ 27ರಂದು ಇಡಿ ಅಧಿಕಾರಿಗಳು, ಫಿಜನ್ ಎಜುಕೇಷನ್ ಟೆಕ್ನಾಲಜಿ ಇಂಡಿಯಾ ಪ್ರೈ.ಲಿ. ಕಂಪನಿಗೆ ಸೇರಿದ ಎರಡು ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಚೀನಾ ಉದ್ಯಮಿಗಳು ಕಂಪನಿಯನ್ನು ಸಂಪೂರ್ಣ ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿತ್ತು.

    ಕೇಮನ್ ದ್ವೀಪದಲ್ಲಿ ಕುಳಿತುಕೊಂಡು ಆನ್‌ಲೈನ್‌ನಲ್ಲಿ ಕಂಪನಿಯ ವ್ಯವಹಾರಗಳನ್ನು ನಿರ್ದೇಶಕ ಲಿಯು ಕ್ಯಾನ್ ಮತ್ತು ವೇದಾಂತ್ ಹಮಿರ್ವಾಸಿಯಾ ಎಂಬಾತ ನಿರ್ವಹಿಸುತ್ತಿದ್ದ. ಭಾರತೀಯ ನಿರ್ದೇಶಕರಿಗೆ ಕಂಪನಿಯ ಯಾವುದೇ ವ್ಯವಹಾರಗಳ ಅಧಿಕಾರ ನೀಡಿರಲಿಲ್ಲ. ಲಿಯು ಕ್ಯಾನ್, ಸೂಚನೆಯಂತೆ ನಡೆಯುತ್ತಿದ್ದವು.

    ಇದನ್ನೂ ಓದಿ: ಮುಸ್ಲಿಂ ಯುವಕನನ್ನು ಮದುವೆಯಾಗಲಿದ್ದಾಳೆ ಬಿಜೆಪಿ ಮುಖಂಡನ ಮಗಳು! 

    ಕಂಪನಿ ಬ್ಯಾಂಕ್ ಖಾತೆಗಳಲ್ಲಿ ಅಧಿಕೃತ ಸಹಿಯನ್ನು ಚೀನಿ ಪ್ರಜೆಗಳು ಹೊಂದಿದ್ದರು. ಜಾಹೀರಾತು ಮತ್ತು ಮಾರುಕಟ್ಟೆ ವೆಚ್ಚದ ಹೆಸರಿನಲ್ಲಿ 82 ಕೋಟಿ ರೂ.ಅನ್ನು ಚೀನಾಗೆ ವರ್ಗಾವಣೆ ಮಾಡಿದ್ದರು. ಆದರೆ, ಜಾಹೀರಾತು ನೀಡಿರುವ ಬಗ್ಗೆ ಯಾವುದೇ ಪುರಾವೆಗಳು ಇರಲಿಲ್ಲ. ಚೀನಾದ ನಿರ್ದೇಶಕ ಲಿಯು ಕಾನ್ ಸೂಚನೆ ಮೇರೆಗೆ ಹಣ ವರ್ಗಾವಣೆ ಆಗಿರುವುದು ದೃಢಪಟ್ಟಿತ್ತು.

    ಇದನ್ನೂ ಓದಿ: 1200 ರೂ. ಬೆಲೆಯ ಐಪಿಎಲ್​​ ಟಿಕೆಟ​​ನ್ನು 8 ಸಾವಿರಕ್ಕೆ ಪೊಲೀಸರೇ ಮಾರುತ್ತಿದ್ದಾರೆ; ಆರ್​ಸಿಬಿ ಅಭಿಮಾನಿಗಳ ಆಕ್ರೋಶ

    ಮಾಜಿ ಭಾರತೀಯ ನಿರ್ದೇಶಕರಾದ ಸುಶಾಂತ್ ಶ್ರೀವಾಸ್ತವ, ಪ್ರಿಯಾಂಕಾ ಖಂಡೇಲಾವಾಲ್ ವಿಚಾರಣೆ ನಡೆಸಿದಾಗ ಲಿಯು ಕ್ಯಾನ್ ಸೂಚನೆ ಮೇರೆಗೆ ವಿದೇಶಕ್ಕೆ ಹಣ ವರ್ಗಾವಣೆ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಪ್ರಕರಣದ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ ಇಂಡಸ್ಟ್ರಿಗೆ ಗುಡ್​ಬೈ ಹೇಳ್ತಾರಾ ಸೂಪರ್​ ಸ್ಟಾರ್​ ರಜನಿಕಾಂತ್​​!; ಕೊನೆಯ ಸಿನಿಮಾ ಯಾವುದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts