ಮುರಗೋಡ: ಇಂದಿನ ಕಲಿಯುಗದಲ್ಲಿ ಭಕ್ತರಿಗೆ ಸಿಗಬೇಕಾದ ಸಂಸ್ಕಾರ ಬುತ್ತಿಯನ್ನು ಮಠಮಾನ್ಯಗಳಿಂದ ಮಾತ್ರ ಪಡೆಯಲು ಸಾಧ್ಯ. ಉತ್ತರ ಕರ್ನಾಟಕದ ಧರ್ಮ ಜಾಗೃತಿಗೆ ಮುರಗೋಡ ನೀಲಕಂಠ ಸ್ವಾಮೀಜಿ ನೀಡಿದ ಕೊಡುಗೆ ಅಪಾರ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸ್ಥಳೀಯ ಮಹಾಂತ ದುರದುಂಡೇಶ್ವರ ಮಠದ ಲಿಂ,ಮಹಾಂತ ಶಿವಯೋಗಿಗಳ 49ನೇ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಸಂಜೆ ಜರುಗಿದ ಜಂಗಮ ಜಯಂತಿ ಸಮಾವೇಶ ಹಾಗೂ ನೀಲಕಂಠ ಸ್ವಾಮೀಜಿ ಅವರ 74ನೇ ಹುಟ್ಟು ಹಬ್ಬದ ಗುರುವಂದನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಲು ಪಾಲಕರು ಪ್ರಯತ್ನಿಸಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಧಾರವಾಡ ಮುರಘಾಮಠದ ಮಲ್ಲಿಕಾರ್ಜುನ ಶ್ರೀ ಮಾತನಾಡಿ, ದೇವರು, ಜಂಗಮರು ನಡೆದಾಡಿದ ಪುಣ್ಯ ಭೂಮಿಯಲ್ಲಿ ಒಳ್ಳೆಯ ನೀತಿ ಧರ್ಮದಿಂದ ಸಮಾಜಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಸಮಾಜ ಸೇವೆ ಮಾಡಬೇಕು ಎಂದರು. ಅಮರಸಿದ್ದೇಶ್ವರ ಸ್ವಾಮೀಜಿ, ಕುಂದರಗಿ ಸಂಪಾದನಾ ಸ್ವಾಮೀಜಿ, ಗುಳೇದಗುಡ್ಡದ ಒಪ್ಪತೇಶ್ವರ ಸ್ವಾಮೀಜಿ, ಹೊಸಳ್ಳಿಯ ಬೂದೇಶ್ವರ ಸ್ವಾಮೀಜಿ, ಹುಚ್ಚೇಶ್ವರ ಸ್ವಾಮೀಜಿ ಕಮತಗಿ, ಗುರುಸಿದ್ದ ಸ್ವಾಮೀಜಿ ಬೆಂಡವಾಡ, ಅರಳೀಕಟ್ಟಿಯ ಶಿವಮೂರ್ತಿ ದೇವರು ಆಶೀರ್ವದಿಸಿದರು.
ಸ್ಥಳೀಯ ಕಾಲೇಜ್ ಪ್ರಾಚಾರ್ಯ ವೈ.ಎಂ.ಯಾಕೊಳ್ಳಿ, ಎಂ.ಯು. ಉಪ್ಪಿನ, ಆರ್.ಎಂ.ಅಂಗಡಿ, ಬಸವರಾಜ ಬ್ಯಾಳಿ ಇತರರು ಇದ್ದರು.