More

    ಶನೈಶ್ಚರ ಸ್ವಾಮಿ ಜಾತ್ರಾ ಮಹೋತ್ಸವ

    ಶಿರಾಳಕೊಪ್ಪ: ತಳೇಬೈಲು ಶನೈಶ್ಚರ ಸ್ವಾಮಿಯ ಕ್ಷೇತ್ರ ಶಕ್ತಿಯುತವಾದುದು. ಇದೊಂದು ಭಕ್ತಿ ಮತ್ತು ಜಾಗೃತಾ ಕೇಂದ್ರವಾಗಿ ಬೆಳೆದಿದೆ ಎಂದು ಶಿಕಾರಿಪುರ ವಿರಕ್ತ ಮಠದ ಶ್ರೀ ಚನ್ನಬಸವ ಸ್ವಾಮೀಜಿ ಹೇಳಿದರು.
    ಪಟ್ಟಣದ ಸಾಗರ ರಸ್ತೆಯ ತಳೇಬೈಲಿನಲ್ಲಿ ಶನಿವಾರ ಶನೈಶ್ಚರ ಸ್ವಾಮಿಯ ಜಾತ್ರಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿದ ಶ್ರೀಗಳು, ಸಾವಿರಾರು ಜನರನ್ನು ಸೇರಿಸುವುದು ಸುಲಭದ ಮಾತಲ್ಲ. ಜನಪರ ಕಾರ್ಯದಲ್ಲಿ ತೊಡಗಿರುವ ಇಲ್ಲಿನ ಧರ್ಮದರ್ಶಿ ಪುಟ್ಟರಾಜ ಸ್ವಾಮೀಜಿಗಳ ಸೇವೆ ಅನನ್ಯ ಎಂದರು.
    ನಿವೃತ್ತ ಡಿಎಸ್‌ಪಿ ದಾವಣಗೆರೆಯ ಪಾಟೀಲ್ ಮಾತನಾಡಿ, ಪ್ರಸ್ತುತ ಬೇಸಿಗೆಯಲ್ಲಿ ಕೆರೆಕಟ್ಟೆ ಖಾಲಿ ಆಗಿರುವುದನ್ನು ನೋಡುತ್ತಿದ್ದೇವೆ. ಕೊಳವೆಬಾವಿಗಳಲ್ಲಿ ನೀರಿಲ್ಲದಂತಾಗಿದೆ. ಮಾನವನ ದುರಾಸೆಯಿಂದಾಗಿ ಪರಿಸರ ನಾಶವಾಗಿ ಪ್ರಕೃತಿ ವಿಕೋಪ ಉಂಟಾಗುತ್ತಿದೆ. ಪ್ರತಿಯೊಬ್ಬರೂ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.
    ಶನೈಶ್ಚರ ಸ್ವಾಮಿ ಸಮಿತಿ ಅಧ್ಯಕ್ಷ ಈರಣ್ಣ ಪ್ಯಾಟಿ ಮಾತನಾಡಿ, ನಾನು ಈ ಕ್ಷೇತ್ರದಿಂದ ಒಳಿತನ್ನು ಕಂಡಿದ್ದೇನೆ. ಇದೇ ರೀತಿ ಹಲವರಿಗೆ ಒಳ್ಳೆಯದಾಗಿದ್ದು ಭಕ್ತರ ದಂಡು ಹರಿದುಬರುತ್ತಿದೆ ಎಂದರು.
    ಬೆಳಗ್ಗೆ ಶನೈಶ್ಚರ ಸ್ವಾಮಿ, ಪ್ರಸನ್ನ ಆಂಜನೇಯ ಹಾಗೂ ನಾಗಚೌಡೇಶ್ವರಿ ಅಮ್ಮನವರಿಗೆ ಅಭಿಷೇಕ, ರುದ್ರಾಭಿಷೇಕ, ಅಲಂಕಾರ ಪೂಜೆ ನಡೆಸಲಾಯಿತು. ಸ್ವಾಮಿಯ ಪಲ್ಲಕ್ಕಿ ಉತ್ಸವವು ಗ್ರಾಮದ ಬೀದಿಗಳಲ್ಲಿ ಸಂಚರಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts