More

    ಕರೊನಾ ಲಾಕ್​ಡೌನ್​ ಓಪನ್​ ಆದ ಬೆನ್ನಲ್ಲೇ ಬಾಲಕ ಗಳಗಳನೇ ಅತ್ತಿದ್ದೇಕೆ?

    ಸಿಂಗಾಪುರ: ಕರೊನಾ ಲಾಕ್​ಡೌನ್ ಓಪನ್​ ಆದರೆ ಸಾಕು ಎಂದು ಕಾದು ಕುಳಿತಿರುವವರೇ ಹೆಚ್ಚು. ಕೊಂಚ ಸಡಿಲಿಕೆಯಿಂದಲೇ ಇಷ್ಟೊಂದು ಸಂಭ್ರಮಿಸುವವರು ಸಂಪೂರ್ಣ ಲಾಕ್​ಡೌನ್​ ತೆರವಾದರೆ ಹಬ್ಬವೇ ಮಾಡುತ್ತಾರೆ. ಅಂತಹದರಲ್ಲಿ ಸಿಂಗಾಪುರದ 9 ವರ್ಷದ ಬಾಲಕನೊಬ್ಬ ಲಾಕ್​ಡೌನ್​ ತೆರವಾದ ತಕ್ಷಣವೇ ಗಳಗಳನೇ ಕಣ್ಣೀರಿಟ್ಟಿದ್ದಾನೆ.

    ಇದನ್ನೂ ಓದಿ: ಜಡ್ಜ್​ ಮನೆಯಿಂದ ಕಳ್ಳರು ದೋಚಿದ ವಸ್ತುವನ್ನು ಕೇಳಿ ಪೊಲೀಸರೇ ಶಾಕ್​…!

    ಅಯ್ಯೋ ಇವನ್ಯಾರಪ್ಪ ಪುಣ್ಯಾತ್ಮ ನಾವೆಲ್ಲಾ ಲಾಕ್​ಡೌನ್​ ಯಾವಾಗ ಓಪನ್ ಆಗುತ್ತದೆ ಎಂದು ಬಕಪಕ್ಷಿಗಳ ರೀತಿ ಕಾಯುತ್ತಿದ್ದರೆ, ಈತ ಕಣ್ಣೀರಿಡುತ್ತಿದ್ದಾನಾ ಎಂಬ ಪ್ರಶ್ನೆ ಮೂಡಬಹುದು. ಆದರೆ ಇಲ್ಲಿ ಬಾಲಕ ಕಣ್ಣೀರಿಟ್ಟಿರುವುದು ಬೇರೆಯೇ ಉದ್ದೇಶಕ್ಕಾಗಿ. ಸಿಂಗಾಪುರದಲ್ಲಿ ಲಾಕ್​ಡೌನ್​​ನಿಂದಾಗಿ ಹಲವು ದಿನಗಳವರೆಗೆ ಮ್ಯಾಕ್​ಡೊನಾಲ್ಡ್ ತೆರೆದಿರಲಿಲ್ಲ. ಇಷ್ಟು ದಿನಗಳವರೆಗೆ ಮ್ಯಾಕ್​ ಡೊನಾಲ್ಡ್​ ಮಿಸ್​ ಮಾಡಿಕೊಂಡಿದ್ದ ಬಾಲಕನಿಗೆ ಇದೀಗ ಮತ್ತೆ ತೆರೆದಿರುವ ಕಣ್ಣೀರಿಗೆ ಕಾರಣವಾಗಿದೆ. ಅಂದಹಾಗೆ ಈ ಕಣ್ಣೀರು ಸಂತೋಷದ ಕಣ್ಣೀರಾಗಿದೆ. ಇದುವರೆಗೂ ನೀವಂದುಕೊಂಡಿದ್ದ ಕಣ್ಣೀರಲ್ಲ.

    ಇದನ್ನೂ ಓದಿ: ಸಿಎಂ ಯೋಗಿ ಆದಿತ್ಯನಾಥ್​ರನ್ನು ಬಾಂಬ್​ ಸ್ಪೋಟಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಆರೋಪಿ ಬಂಧನ

    ಹಲವು ದಿನಗಳ ನಂತರ ಮೇ 10ರಂದು ಮ್ಯಾಕ್​ ಡೊನಾಲ್ಡ್​ ಓಪನ್​ ಆಗಿದೆ. ಮೇ 18ರಂದು ಸಿಂಗಾಪುರ ನಿವಾಸಿ ಮಮ್​ ವಾಟಿ ತನ್ನ ಮಗ ಆ್ಯಡಮ್​ ಬಿನ್​ ಮೊಹಮ್ಮದ್​ ಇರ್ವಾನ್​ಗಾಗಿ ಮ್ಯಾಕ್​ ಡೊನಾಲ್ಡ್​ನಿಂದ ಇಷ್ಟವಾದ ಆಹಾರವನ್ನು ಕೊಂಡುತಂಡು ಸರ್ಪ್ರೈಸ್​ ನೀಡಿದ್ದಾಳೆ. ಅದನ್ನು ವಿಡಿಯೋ ಸಹ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ.

    ಹಲವು ದಿನಗಳವರೆಗೆ ಮಿಸ್​ ಮಾಡಿಕೊಂಡಿದ್ದ ತನ್ನಿಷ್ಟದ ಆಹಾರವನ್ನು ನೋಡುತ್ತಿದ್ದಂತೆಯೇ ಬಾಲಕ ಭಾವುಕನಾಗಿ ಕಣ್ಣೀರಿಟ್ಟಿದ್ದಾನೆ. ಅಲ್ಲದೆ, ತಾಯಿಯನ್ನು ತಬ್ಬಿಕೊಂಡು ಧನ್ಯವಾದಗಳನ್ನು ತಿಳಿಸಿದ್ದಾನೆ. ಅಂದಹಾಗೆ ಇರ್ವಾನ್​ ತಿಂದಿದ್ದು, ಫೇವರೀಟ್​ ಚಿಕನ್​ ನಗ್ಗೆಟ್ಸ್​. ಅಲ್ಲದೆ, ಐಸ್​ ಕ್ರೀಮ್​ ಸಹ ಆತನಿಗೆ ಇಷ್ಟವಂತೆ.

    ಇದನ್ನೂ ಓದಿ: 8 ವರ್ಷಗಳಿಂದ ಭೇದಿಸಲಾಗದ ದರೋಡೆ ಪ್ರಕರಣವನ್ನು ಕ್ಷಣದಲ್ಲೇ ಪರಿಹರಿಸಿದ 6 ವರ್ಷದ ಬಾಲಕ!

    ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿರುವ ವಿಡಿಯೋವನ್ನು ಈವರೆಗೂ 73 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ.

    ಇನ್ನು ಭಾರತದಲ್ಲೂ ಸಹ ಪಾನಿಪುರಿ ಹಾಗೂ ಗೋಬಿ ಮಂಚೂರಿಯನ್ ಮಿಸ್​​ ಮಾಡಿಕೊಂಡ ಅನೇಕರು ಮನೆಯಲ್ಲೇ ತಯಾರಿಸಿ, ಅದನ್ನು ವಿಡಿಯೋ ಮಾಡಿ ಬಿಟ್ಟ ಎಷ್ಟೋ ಉದಾಹರಣೆಗಳನ್ನು ನೋಡಿದ್ದೇವೆ. (ಏಜೆನ್ಸೀಸ್​)

    ಪ್ರಯಾಣಕ್ಕೆ ‘ಆರೋಗ್ಯ ಸೇತು’ ವೇ ಹೊಸ ಪಾಸ್​ಪೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts