More

    ಲಾಕ್‌ಡೌನ್‌ ಪಾರ್ಟಿ ಮಾಡಲು ತನ್ನ ಪತ್ನಿಯ ಜತೆ ಸ್ನೇಹಿತನ ಮನೆಗೆ ಹೋದವನಿಗೆ ಕಾದಿತ್ತು ಶಾಕ್​!

    ಮಾಸ್ಕೊ: ಸೆಲ್ಫಿ ಹುಚ್ಚಿನಿಂದ ಅದೆಷ್ಟೋ ಮಂದಿ ಬಲಿಯಾಗಿರುವ ಸುದ್ದಿ ಓದುತ್ತಲೇ ಇದ್ದೇವೆ. ಇಂಥದ್ದೇ ಒಂದು ಹುಚ್ಚಿನಿಂದ ವ್ಯಕ್ತಿಯೊಬ್ಬ ಕಿಟಕಿಯಿಂದ ಬಿದ್ದು ಪ್ರಾಣ ಕಳೆದುಕೊಳ್ಳುವಷ್ಟರಲ್ಲಿಯೇ ಇಬ್ಬರು ಮಹಿಳೆಯರು ಆತನನ್ನು ಕಾಪಾಡಿದ ಘಟನೆ ರಷ್ಯದ ಮಾಸ್ಕೊದಲ್ಲಿ ನಡೆದಿದೆ.

    150 ಅಡಿ ಮೇಲಿನಿಂದ ಬೀಳಬೇಕಿದ್ದ ಈ ವ್ಯಕ್ತಿ ಸಾವಿನ ದವಡೆಯಿಂದ ತಪ್ಪಿಸಿಕೊಂಡರೂ ಸ್ಥಳಕ್ಕೆ ಆಗಮಿಸಿದ ಪೊಲೀಸರಿಂದ ದಂಡ ಹಾಕಿಸಿಕೊಂಡ. ಅದಕ್ಕೇನು ಕಾರಣ ಗೊತ್ತೆ?

    ಈ ವ್ಯಕ್ತಿಯ ಹೆಸರು ಓಂಟೋ ಆಂಟೋ ಕೋಜ್‌ಲೋವ್‌. ರಷ್ಯದಲ್ಲಿ ಲಾಕ್‌ಡೌನ್‌ ನಿಯಮ ಭಾರತಕ್ಕಿಂತಲೂ ಬಲು ಸ್ಟ್ರಿಕ್ಟ್‌ ಆಗಿಯೇ ಇದೆ. ಆದರೆ ಅಲ್ಲಿಯವರೂ ಇಲ್ಲಿಯವರಂತೆಯೇ ಜನರೇ ಅಲ್ಲವೆ? ಅದಕ್ಕೆ ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸಿದ ಓಂಟೋ ಲಾಕ್‌ಡೌನ್‌ ಪಾರ್ಟಿ ಮಾಡಲು ತನ್ನ ಪತ್ನಿಯ ಜತೆ ಸ್ನೇಹಿತನ ಮನೆಗೆ ಹೋದ.

    ಪಾರ್ಟಿಯ ನಡುವೆ ಮತ್ತೇರಿದಾಗ ತನ್ನದೊಂದು ಸೆಲ್ಫಿ ತೆಗೆದುಕೊಳ್ಳುವ ಆಸೆಯಾಯಿತು. ತಾನು ಎಷ್ಟು ಚೆನ್ನಾಗಿ ಸೆಲ್ಫಿ ತೆಗೆದುಕೊಳ್ಳುತ್ತೇನೆ ನೋಡಿ ಎಂದು ಅಲ್ಲಿದ್ದವರಿಗೆ ಹೇಳಿ ತೆರೆಯ ಕಿಟಕಿಯ ಬಳಿ ನಿಂತ. ಸೆಲ್ಫಿಗಾಗಿ ಕೈ ಉದ್ದ ಮಾಡುತ್ತಿದ್ದಂತೆಯೇ ಕಾಲು ಜಾರಿಹೋಯಿತು.

    ಇನ್ನೇನು ತನ್ನ ಕಥೆ ಮುಗಿದೇ ಹೋಯ್ತು ಎಂದು ಕೂಗಾಡಿಕೊಂಡ ಆತ ಕೆಳಗೆ ಇನ್ನೇನು ಬೀಳಬೇಕು ಎನ್ನುವಷ್ಟರಲ್ಲಿಯೇ ಅವನ ಸೆಲ್ಫಿಯನ್ನು ನೋಡಲು ಬಂದಿದ್ದ ಇಬ್ಬರು ಮಹಿಳೆಯರು ಆತನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡರು. ಆತನನ್ನು ಮೇಲೆ ಎಳೆದುಕೊಳ್ಳಲು ಹೆಂಗಸರಿಂದ ಸಾಧ್ಯವಾಗಲಿಲ್ಲ, ಇವನಿಗೆ ಕೆಳಗಡೆಯ ಪ್ರಪಾತ ನೋಡಿ ಮೇಲೆ ಹೋಗಲು ಆಗಲಿಲ್ಲ. ಒಂದಲ್ಲ… ಎರಡಲ್ಲ… ಬರೋಬ್ಬರಿ 15 ನಿಮಿಷ ಆ ಹೆಂಗಸರು ಇವನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡೇ ಇದ್ದು, ಇನ್ನೊಂದೆಡೆ ಸಹಾಯಕ್ಕಾಗಿ ಕಿರುಚುತ್ತಿದ್ದರು.

    ಪಾರ್ಟಿಯಲ್ಲಿ ಇದ್ದವರು ಬೇರೆ ದಾರಿ ಕಾಣದೇ ಪೊಲೀಸರಿಗೆ ಕರೆ ಮಾಡಿದರು. ಪೊಲೀಸರು ಬಂದು ಓಂಟೋವನ್ನು ಕಾಪಾಡಿದರು. ಆದರೆ ತನ್ನ ಮನೆಯಿಂದ ಲಾಕ್‌ಡೌನ್‌ ಆದೇಶ ಉಲ್ಲಂಘಿಸಿ ಇಲ್ಲಿಗೆ ಬಂದದ್ದೂ ಅಲ್ಲದೇ ಪಾರ್ಟಿ ಮಾಡುತ್ತಿರುವುದು ಪೊಲೀಸರಿಗೆ ತಿಳಿದೇ ಬಿಟ್ಟಿತು!

    ಸರಿ. ಅವನ ವಿರುದ್ಧ ಅಲ್ಲಿಯ ವಿವಿಧ ಕಾನೂನಿನ ಅಡಿ ದೂರು ದಾಖಲಿಸಿಕೊಂಡ ಪೊಲೀಸರು, 45 ಡಾಲರ್‌ (ಸುಮಾರು ಮೂರುವರೆ ಸಾವಿರ ರೂಪಾಯಿ) ದಂಡ ವಿಧಿಸಿದ್ದಾರೆ. ಬದುಕಿದೆಯಾ ಬಡ ಜೀವಿಯೇ ಎಂದುಕೊಂಡ ಓಂಟೊ ದಂಡ ಕಟ್ಟಿದ್ದಾನೆ.

    ರಷ್ಯಾದಲ್ಲಿ ಈಗಾಗಲೇ 16 ಸಾವಿರಕ್ಕೂ ಅಧಿಕ ಮಂದಿ ಕರೊನಾ ಸೋಂಕು ಪೀಡಿತರಾಗಿದ್ದು, 130 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. (ಏಜೆನ್ಸೀಸ್​)

    VIDEO| ಹೆಬ್ಬಾವು-ಚಿರತೆ ನಡುವಿನ ಭೀಕರ ಕಾದಾಟದಲ್ಲಿ ಕೊನೆಯಲ್ಲಿ ಗೆದ್ದಿದ್ದು ಯಾರಿರಬಹುದು?

    ಮದ್ಯಕ್ಕಾಗಿ ಚಡಪಡಿಸಿ ಅಲ್ಕೋಹಾಲ್‌ಯುಕ್ತ ಔಷಧ ಕುಡಿದ ಯುವಕರಿಗೆ ಏನಾಯಿತು ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts